ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿಕೊಟ್ಟ ರೈತ!| ಮನೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೇ ಕಾರ್ಮಿಕರು ಪರದಾಡುತ್ತಿರುವ ಸಂದರ್ಭದಲ್ಲಿ ರೈತನ ಹೃದಯವಂತಿಕರ| ವಿಮಾನ ಏರುವ ಊಹೆಯನ್ನೂ ಮಾಡದ ಕಾರ್ಮಿಕರ ಕಣ್ಣಂಚಲ್ಲಿ ನೀರು

ನವದೆಹಲಿ(ಮೇ.28): ಲಾಕ್‌ಡೌನ್‌ನಿಂದಾಗಿ ಬೃಹತ್‌ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ, ದೆಹಲಿಯ ರೈತನೊಬ್ಬ ತನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ತವರಿಗೆ ಕಳುಹಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಾಕ್‌ಡೌನ್ ವೇಳೆ ನೌಕರರಿಗೆ ವೇತನ ಪಾವತಿಸದವರ ವಿರುದ್ಧ ಕ್ರಮ ಇಲ್ಲ; ಸುಪ್ರೀಂ ಕೋರ್ಟ್!

ಎರಡು ತಿಂಗಳಿನಿಂದ ತವರಿಗೆ ಮರಳಲಾಗದೇ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಆಸೆ ಇದೀಗ ಈಡೆರಿದೆ. ಏಪ್ರಿಲ್‌ನಲ್ಲೇ ತಮ್ಮ ಊರು ಸೇರಬೇಕೆಂದು ಬಯಸಿದ್ದ ಕಾರ್ಮಿಕರು ಇದೀಗ ಗುರುವಾರ ಬೆಳಗ್ಗೆ 6 ಗಂಟೆಗೆ ವಿಮಾನದ ಮೂಲಕ ಊರು ಸೇರಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಲಖೀಂದರ್‌ ರಾಮ್‌, ನಾವು ಕನಸು ಮನಸಿನಲ್ಲೂ ವಿಮಾನ ಪ್ರಯಾಣ ಬೆಳೆಸುತ್ತೇವೆ ಎಂದುಕೊಂಡಿರಲಿಲ್ಲ. ಖುಷಿಯನ್ನು ಹೇಳಿಕೊಳ್ಳಲು ಶಬ್ದಗಳಿಲ್ಲ ಎಂದಿದ್ದಾರೆ.

ತಮ್ಮೂರಿಗೆ ಮರಳಲು ಸರಿಯಾದ ಸಾರಿಗೆ ವ್ಯವಸ್ಥೆ, ಕೈಯ್ಯಲ್ಲಿ ಹಣವಿಲ್ಲದೇ ಕಾರ್ಮಿಕರು ಪರದಾಡುತ್ತಿರುವ ವೇಳೆ ರೈತ ಮಾಡಿದ ಈ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.