ಬೋಸ್ಟನ್ (ಮಾ.01): ಚೀನಾದಲ್ಲಿ 2800ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಕೊರೋನಾ ವೈರಸ್ ವಿಶ್ವವ್ಯಾಪಿ ಆಗುತ್ತಿರುವ ನಡುವೆಯೇ ಮತ್ತೊಂದು ಆತಂಕದ ವಿಚಾರ ಈಗ ಹೊರಬಿದ್ದಿದೆ. ವಿಶ್ವದ ಶೇ.70 ರಷ್ಟು ಜನಸಂಖ್ಯೆಗೆ ಕೊರೋನಾ ವೈರಸ್ ತಗುಲುವ ಸಾಧ್ಯತೆ ಇದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಹೇಳಿರುವುದು ಭೀತಿಗೆ ಕಾರಣವಾಗಿದೆ.

‘ಕೊರೋನಾ ವೈರಸ್ ಅನ್ನು ತಕ್ಷಣವೇ ನಿಗ್ರಹಿಸಲು ಆಗದು. ಇದು ಇನ್ನೊಂದು ವರ್ಷದಲ್ಲಿ ವಿಶ್ವದ ಶೇ.40 ರಿಂದ ಶೇ.70 ರಷ್ಟು ಜನಸಂಖ್ಯೆಗೆ ವ್ಯಾಪಿಸಬಲ್ಲದು’ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾರ್ಕ್ ಲಿಪ್ ಸಿಚ್ ಹೇಳಿದ್ದಾರೆ ಎಂದು ‘ದ ಅಟ್ಲಾಂಟಿಕ್’ ಎಂಬ ಮಾಧ್ಯಮ ವರದಿ ಮಾಡಿದೆ.

37 ದೇಶಗಳಿಗೆ ವ್ಯಾಪಿಸಿದ ಕೊರೋನಾ!...

ಆದರೆ ಸಮಾಧಾನದ ವಿಷಯವೆಂದರೆ, ಕೊರೋನಾ ವೈರಸ್ ತಗುಲಿದವರೆಲ್ಲರಿಗೂ ಕಾಯಿಲೆ ಗಂಭೀರವಾಗಿರುವುದಿಲ್ಲ. ಈಗಾಗಲೇ ಕೊರೋನಾ ವೈರಸ್ ದೃಢಪಟ್ಟವರಲ್ಲಿ ಎಲ್ಲರಿಗೂ ಹೇಗೆ ಕಾಯಿಲೆ ಗಂಭೀರ ಮಟ್ಟಕ್ಕೆ ವ್ಯಾಪಿಸಿಲ್ಲವೋ ಅದೇ ರೀತಿ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಬಂದಲ್ಲಿ ಖುಲ್ಲಂ ಖುಲ್ಲಾ, ಪುಕ್ಕಟೆ ಸಿಕ್ತು ಪೋರ್ನ್ ಬೆಲ್ಲ, ನೀಲಿ ಪ್ರಿಯರು ಜಿಂಗಾಲಾಲಾ!.

‘ಅನೇಕರಿಗೆ ಸ್ವಲ್ಪ ಪ್ರಮಾಣದ ಸೋಂಕು ಅಂಟುತ್ತದೆ. ಕೆಲವರಿಗೆ ಲಕ್ಷಣರಹಿತ ಕೂಡ ಆಗಿರಬಹುದು. ಇದೊಂಥರಾ ಜ್ವರದ (ಇನ್ ಫ್ಲುಯೆಂಜಾ) ರೀತಿ ಇರಬಹುದು. ಶೇ.14 ಜನರಿಗೆ ಜ್ವರ ಕಾಣಿಸಿದ್ದರೂ ಅದರ ರೋಗಲಕ್ಷಣಗಳು ಕಂಡುಬರುವುದಿಲ್ಲ’ ಎಂದು ಮಾರ್ಕ್ ಮಾಹಿತಿ ನೀಡಿದ್ದಾರೆ. 

ಇನ್‌ಫ್ಲುಯೆಂಜಾ ಜ್ವರವು ವಯಸ್ಸಾದವರಿಗೆ ಹಾಗೂ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮಾರಕವಾಗಬಲ್ಲದು. ಆದರೆ ಯಾವುದೇ ವೈದ್ಯಕೀಯ ಉಪಚಾರವಿಲ್ಲದೆ ಅನೇಕರು ಗುಣಮುಖರಾದ ಪ್ರಕರಣಗಳೂ ಇವೆ ಎಂದಿದ್ದಾರೆ. 

‘ಕೊರೋನಾ ವೈರಸ್ ತೀವ್ರತೆ ರೂಪದಲ್ಲಿ ಕಂಡುಬರುವುದಿಲ್ಲ. ರೋಗಲಕ್ಷಣಗಳು ಮೊದಮೊದಲು ಕಾಣಿಸುವುದಿಲ್ಲ. ವೈರಾಣು ಅಂಟಿದ್ದರೂ ಮೊದಲ ಹಂತದಲ್ಲಿ ಅದರ ಅರಿವಾಗದೇ ಜನರು ಮಾಮೂಲಿ ಕೆಲಸದಲ್ಲೇ ತೊಡಗಿರುತ್ತಾರೆ. ಹೀಗಾಗಿ ಇದನ್ನು ಶೀಘ್ರ ನಿಗ್ರಹಿಸುವುದು ಕಷ್ಟವಾಗುತ್ತಿದೆ. ಆದರೆ ಸಾರ್ಸ್, ಮರ್ಸ್, ಏವಿಯನ್ ಫ್ಲೂಗಳು ತುಂಬಾ ತೀವ್ರತೆ ಹೊಂದಿದ್ದವು. ಅಂಟಿದ ಕೂಡಲೇ ಅವುಗಳ ತೀವ್ರತೆ ಗೊತ್ತಾಗುತ್ತಿತ್ತು. ಸಾವಿನ ಸಂಖ್ಯೆಯೂ ಹೆಚ್ಚಿತ್ತು. ಹೀಗಾಗಿ ಅವನ್ನು ತ್ವರಿತವಾಗಿ ಅವನ್ನು ನಿಗ್ರಹಿಸಲಾಯಿತು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.