37 ದೇಶಗಳಿಗೆ ವ್ಯಾಪಿಸಿದ ಕೊರೋನಾ!
37 ದೇಶಗಳಿಗೆ ವ್ಯಾಪಿಸಿದ ಕೊರೋನಾ!| ಚೀನಾದಲ್ಲಿ ಕೊರೋನಾ ತಾಂಡವ| ಯಾವ್ಯಾವ ದೇಶಗಳಲ್ಲಿ ಎಷ್ಟೆಷ್ಟು ಪ್ರಕರಣ?
ನವದೆಹಲಿ[ಫೆ.26]: ಮಾರಣಾಂತಿಕ ಕೊರೋನಾ ವೈರಸ್ ಜಗತ್ತಿನ ವಿವಿಧ ದೇಶಗಳ ಮೇಲೆ ದಾಳಿ ಇಡುತ್ತಿದ್ದು, ಒಟ್ಟು 36 ದೇಶಗಳಿಗೆ ವ್ಯಾಪಿಸಿದೆ. ಮಂಗಳವಾರ ಆಗ್ನೇಯ ಯೂರೋಪ್‌ನ ಕ್ರೊವೇಶಿಯಾಕ್ಕೂ ಹಬ್ಬಿದ್ದು, ದೇಶದ ಬಾಲ್ಕನ್ ಪ್ರದೇಶದಲ್ಲಿ ಮೊದಲ ಸೋಂಕು ಪತ್ತೆಯಾಗಿದೆ ಎಂದು ಅಲ್ಲಿನ ಪ್ರಧಾನಿ ಅಂದ್ರೇಜ್ ಪ್ಲೆನ್ಕೋವಿಕ್ ಖಚಿತ ಪಡಿಸಿದ್ದಾರೆ. ವ್ಯಾಧಿಗೆ ಚೀನಾ ಹೊರೆತು ಪಡಿಸಿ ಏಳು ದೇಶಗಳಲ್ಲಿ ಜನ ಸಾವನ್ನಪ್ಪಿದ್ದಾರೆ.
ಚೀನಾದಲ್ಲಿ ಕೊರೋನಾ ತಾಂಡವ
71: ಸೋಮವಾರ ಚೀನಾದಲ್ಲಿ ಬಲಿಯಾದವರು
2663: ಈ ವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ
77658: ಒಟ್ಟು ಸೋಂಕು ತಟ್ಟಿದವರ ಸಂಖ್ಯೆ
27323: ಗುಣಮುಖರಾಗಿ ಮನೆಗೆ ಮರಳಿದವರು
300: ಸೋಂಕು ಬಾಧಿತ ಶುಶ್ರೂಷಕಿಯರು
10: ಬಲಿಯಾದ ಶುಶ್ರೂಷಕಿಯರು
80000: ಜಾಗತಿಕವಾಗಿ ಸೋಂಕು ಬಾಧಿತರ ಸಂಖ್ಯೆ
36: ಸೋಂಕು ಹರಡಿದ ದೇಶಗಳ ಸಂಖ್ಯೆ