Asianet Suvarna News Asianet Suvarna News

ಕಾಶ್ಮೀರ ಚರ್ಚೆ ವೇಳೆ ಮೋದಿ ಅವಹೇಳನ: ಬ್ರಿಟನ್‌ ವಿರುದ್ಧ ಭಾರತ ಗರಂ

  • ‘ಕಾಶ್ಮೀರದಲ್ಲಿ ಮಾನವ ಹಕ್ಕು’ಗಳ ವಿಚಾರಕ್ಕೆ ಸಂಬಂಧಿಸಿ ಬ್ರಿಟನ್‌ ಸಂಸತ್ತಿನಲ್ಲಿ ನಡೆದ ಸರ್ವಪಕ್ಷಗಳ ಸಭೆ 
  • ಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೆಲ ಸಂಸದರು ಬಳಸಿದ ಪದಗಳ ಬಗ್ಗೆ ಭಾರತ ತೀವ್ರ ಅಸಮಾಧಾನ
condemn PM Modi in Britain parliament during kashmir issue discussion snr
Author
Bengaluru, First Published Sep 25, 2021, 9:13 AM IST
  • Facebook
  • Twitter
  • Whatsapp

ನವದೆಹಲಿ (ಸೆ.25):‘ಕಾಶ್ಮೀರದಲ್ಲಿ (kashmir) ಮಾನವ ಹಕ್ಕು’ಗಳ ವಿಚಾರಕ್ಕೆ ಸಂಬಂಧಿಸಿ ಬ್ರಿಟನ್‌ (Britain) ಸಂಸತ್ತಿನಲ್ಲಿ (parliament) ನಡೆದ ಸರ್ವಪಕ್ಷಗಳ ಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಕೆಲ ಸಂಸದರು ಬಳಸಿದ ಪದಗಳ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಯಾವುದೇ ದೇಶವೊಂದರ ಅವಿಭಾಜ್ಯ ಭಾಗದ ಪ್ರದೇಶವೊಂದರ ಕುರಿತಾಗಿ ಮಾತನಾಡುವ ವೇಳೆ ಆ ಕುರಿತಾಗಿ ಖಚಿತ ಮಾಹಿತಿಗಳನ್ನು ಇಟ್ಟುಕೊಂಡಿರಬೇಕು ಎಂದು ಬ್ರಿಟನ್‌ಗೆ ಭಾರತ ಹೇಳಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದ ಚುನಾಯಿತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಪಾಕಿಸ್ತಾನ ಮೂಲದ ಲೇಬರ್‌ ಪಕ್ಷದ ಸಂಸದ ನಾಜ್‌ ಶಾ ಅವರು ಅವಹೇಳನಕಾರಿ ಟೀಕೆ ಮಾಡಿದ್ದಾರೆ. ತನ್ಮೂಲಕ ಪ್ರಜಾಪ್ರಭುತ್ವದ ಈ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಲಂಡನ್‌ನಲ್ಲಿರುವ ಭಾರತೀಯ (India) ಹೈಕಮಿಷನರ್‌ ಹೇಳಿದ್ದಾರೆ.

ಚೀನಾ ವಿರುದ್ಧ ಮೋದಿ ಕ್ವಾಡ್‌ ಸಮರ: ಪಿಎಂ ಭಾಷಣದ ಬಗ್ಗೆ ಕುತೂಹಲ!

ಇನ್ನು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ರಿಟನ್‌ ಸಚಿವೆ ಅಮಂಡಾ ಮಿಲ್ಲಿಂಗ್‌ ಅವರು, ಕಾಶ್ಮೀರ ವಿಚಾರದ ಕುರಿತಾಗಿ ಬ್ರಿಟನ್‌ ಸರ್ಕಾರ ತನ್ನ ನಿರ್ಧಾರ ಬದಲಾವಣೆ ಮಾಡದಿರುವುದು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳು ಕಾಶ್ಮೀರ ಜನರ ಆಕಾಂಕ್ಷೆಗೆ ತಕ್ಕುದಾದ ರಾಜಕೀಯ ಪರಿಹಾರಗಳನ್ನು ಕಂಡುಕೊಳ್ಳಬೇಕು. ಆದರೆ ಈ ವಿಚಾರದಲ್ಲಿ ಪರಿಹಾರ ಅಥವಾ ಮಧ್ಯವರ್ತಿಯಾಗಿ ಬ್ರಿಟನ್‌ ಪಾಲ್ಗೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಪ್ರಾಪ್ತಿ ಮಾಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ 2020ರ ಫೆಬ್ರವರಿಯಲ್ಲಿ ಬ್ರಿಟನ್‌ ಸಂಸದರ ನಿಯೋಗವು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿತ್ತು. ಈ ಕುರಿತಾಗಿ ಬ್ರಿಟನ್‌ನಲ್ಲಿ 2020ರ ಮಾಚ್‌ರ್‍ನಲ್ಲಿ ಸರ್ವಪಕ್ಷಗಳ ಸಭೆ ನಡೆಯಬೇಕಿತ್ತು. ಆದರೆ ಕೋವಿಡ್‌ ಕಾರಣದಿಂದಾಗಿ ಮುಂದೂಡಿಕೊಂಡೇ ಬಂದಿದ್ದ ಸಭೆ ಗುರುವಾರ ನಡೆಯಿತು.

Follow Us:
Download App:
  • android
  • ios