Asianet Suvarna News Asianet Suvarna News

ಭಾರತಕ್ಕೆ ಬಂದಿದ್ದ ಅಮೆ​ರಿಕ ಬೇಹುಗಾರ ಅಧಿ​ಕಾ​ರಿ​ಯಲ್ಲಿ ಹವಾನಾ ಸಿಂಡ್ರೋಮ್‌ ಪತ್ತೆ!

* ರೇಡಿಯೋ ಫ್ರೀಕ್ವೆನ್ಸಿ ಬಳಸಿ ಸಾನಿಕ್‌ ದಾಳಿ ಮೂಲಕ ಕೃತ್ಯ ಶಂಕೆ

* ಭಾರತಕ್ಕೆ ಬಂದಿದ್ದ ಅಮೆ​ರಿಕ ಅಧಿ​ಕಾ​ರಿ​ಯಲ್ಲಿ ಹವಾನಾ ಸಿಂಡ್ರೋಮ್‌ ಪತ್ತೆ

* ತವರಿಗೆ ಮರಳಿದ ಬಳಿಕ ಸಿಐಎ ಹಿರಿಯ ಅಧಿಕಾರಿಗೆ ಅಗತ್ಯ ಚಿಕಿತ್ಸೆ

CIA officer on India trip reports Havana Syndrome pod
Author
Bangalore, First Published Sep 22, 2021, 1:34 PM IST

ವಾಷಿಂಗ್ಟನ್‌(ಸೆ.22): ಇತ್ತೀಚೆಗೆ ಭಾರತ(India) ಪ್ರವಾಸ ಕೈಗೊಂಡಿದ್ದ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಹಿರಿಯ ಅಧಿಕಾರಿಯೊಬ್ಬರಲ್ಲಿ ‘ಹ​ವಾನಾ ಸಿಂಡ್ರೋಮ್‌’(Havana Syndrome) ಕಾಯಿಲೆ ಪತ್ತೆ​ಯಾ​ಗಿ​ದೆ. ಅವರ ಮೇಲೆ ಡೆಡ್ಲಿ ಸೋನಿಕ್‌ ದಾಳಿ ನಡೆಸಿ ‘ಹ​ವಾನಾ ಸಿಂಡ್ರೋ​ಮ್‌’ ಬರಿ​ಸ​ಲಾ​ಗಿದೆ ಎಂದು ಹೇಳ​ಲಾ​ಗಿ​ದೆ. ಭಾರ​ತ​ದಲ್ಲಿ ಈ ಕಾಯಿಲೆ ಕಾಣಿ​ಸಿದ್ದು ಇದೇ ಮೊದ​ಲು.

ಸಿಐಎ ಮುಖ್ಯಸ್ಥ ವಿಲಿಯಂ ಬರ್ನ್‌ (William Burns), ಅಫ್ಘಾನಿಸ್ತಾನ ಬೆಳವಣಿಗೆಗಳ ಕುರಿತು ಚರ್ಚಿಸಲು ಇತ್ತೀಚೆಗೆ ಭಾರತಕ್ಕೆ 2 ದಿನಗಳ ಭೇಟಿ ನೀಡಿದ್ದರು. ಈ ವೇಳೆ ಅವರೊಂದಿಗೆ ಹಲವು ಹಿರಿಯ ಅಧಿಕಾರಿಗಳೂ ಬಂದಿದ್ದರು. ಈ ಪೈಕಿ ಒಬ್ಬರಲ್ಲಿ ಹವಾನಾ ಸಿಂಡ್ರೋಮ್‌ ಹೋಲುವ ಅನಾರೋಗ್ಯ ಕಾಣಿಸಿಕೊಂಡಿದೆ. ತವರಿಗೆ ಮರಳಿದ ಕೂಡಲೇ ಅಧಿಕಾರಿಗೆ ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ಸಿಎನ್‌ಎನ್‌ ಮತ್ತು ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗಳು ವರದಿ ಮಾಡಿವೆ. ಅದರೆ ತೊಂದರೆಗೆ ಒಳಗಾದ ಅಧಿಕಾರಿ ಹೆಸರು ಬಹಿರಂಗಪಡಿಸಿಲ್ಲ.

ಏನಿದು ಹವಾನಾ ಸಿಂಡ್ರೋಮ್‌?’(Havana Syndrome):

ಕೆಲವೊಮ್ಮೆ ಯಾವುದೇ ವ್ಯಕ್ತಿಯಲ್ಲಿ ದಿಢೀರ್‌ ಭಾರೀ ತಲೆನೋವು, ನೆನಪಿನ ಶಕ್ತಿ ಕುಂಠಿತ, ಬಳಲಿಕೆ, ಮಂಪರಿನ ಸಮಸ್ಯೆ ಕಾಣಿಸುತ್ತದೆ. ಇದನ್ನು ಹವಾನಾ ಸಿಂಡ್ರೋಮ್‌ ಎಂದು ಹೇಳಲಾಗುತ್ತದೆ. ಜನ ಸಾಮಾನ್ಯರಲ್ಲೂ ಇಂಥ ಸಮಸ್ಯೆ ಸಾಮಾನ್ಯವಾದರೂ ಗುಪ್ತಚರ ಅಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಾಗ ಅದನ್ನು ಬೇರೆ ದೃಷ್ಟಿಕೋನದಲ್ಲಿ ಪರಿಗಣಿಸಿ ಅವರನ್ನು ಪರಿಶೀಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಏಕೆಂದರೆ, ಗುಪ್ತ​ಚರ ಅಧಿ​ಕಾ​ರಿ​ಗ​ಳನ್ನೇ ಗುರಿ​ಯಾ​ಗಿಸಿ ಇಂಥ ದಾಳಿ ನಡೆ​ಯು​ತ್ತವೆ ಎಂದು ಹೇಳ​ಲಾ​ಗಿ​ದೆ.

ಇಂಥ ಮೊದಲ ಘಟನೆ 2016ರಲ್ಲಿ ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನು ಹವಾನಾ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ.

ಹವಾನಾ ಸಿಂಡ್ರೋಮ್‌ ತಗ​ಲು​ವುದು ಹೇಗೆ?:

‘ರಷ್ಯಾವೇ ಹವಾನಾ ಸಿಂಡ್ರೋಮ್‌ ’(Havana Syndrome) ಸೃಷ್ಟಿ​ಕರ್ತ. ಸಾನಿಕ್‌ ದಾಳಿ ಮೂಲಕ ಈ ಕಾಯಿಲೆ ಬರು​ವಂತೆ ಮಾಡ​ಲಾ​ಗು​ತ್ತ​ದೆ’ ಎಂದು ಅಮೆ​ರಿಕ ಆಗಾಗ ಆರೋ​ಪಿ​ಸು​ತ್ತ​ದೆ. ಅಂದರೆ ರೇಡಿಯೋ ಫ್ರೀಕ್ವೆನ್ಸಿ ಬಳಸಿ ದೂರದಿಂದಲೇ ದಾಳಿ ನಡೆಸಲಾಗುತ್ತದೆ. ಇಂಥ ದಾಳಿಗಳು ಕಿಟಕಿ ಗಾಜು ಒಡೆಯುವ ಸಾಮರ್ಥ್ಯದ ಜೊತೆಗೆ ದಾಳಿಗೊಳಗಾದ ವ್ಯಕ್ತಿಯಲ್ಲಿ ಸಮಸ್ಯೆಗೆ ಕಾರಣವಾಗುತ್ತವೆ.

200ಕ್ಕೂ ಹೆಚ್ಚು ದಾಳಿ:

ಇದುವರೆಗೆ ಅಮೆರಿಕದ ಅಧಿಕಾರಿಗಳು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಇಂಥ 200ಕ್ಕೂ ಹೆಚ್ಚು ದಾಳಿ ನಡೆದಿವೆ. ಅಮೆರಿಕ, ಕ್ಯೂಬಾ, ಚೀನಾ, ರಷ್ಯಾ, ಜರ್ಮನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಮೆರಿಕ ಅಧಿಕಾರಿಗಳ ಮೇಲೆ ಇಂಥ ದಾಳಿ ನಡೆದಿದೆ. ದಾಳಿ ನಡೆದಾಗಲೆಲ್ಲಾ ಅಮೆರಿಕದ ಅನುಮಾನ ರಷ್ಯಾ, ಕ್ಯೂಬಾದಂಥ ಕಮ್ಯನಿಸ್ಟ್‌ ದೇಶಗಳ ಕಡೆಯೇ ಇರುತ್ತದೆ. ಆದರೆ ಭಾರ​ತ​ದಲ್ಲಿ ಇಂಥ ದಾಳಿ ವರ​ದಿ​ಯಾ​ಗಿದ್ದು ಇದೇ ಮೊದ​ಲು.

Follow Us:
Download App:
  • android
  • ios