ವಾಷಿಂಗ್ಟನ್‌(ಡಿ.09): ಶಬ್ದದ ವೇಗಕ್ಕಿಂತ ಅತೀ ವೇಗವಾಗಿ ವಿಮಾನ ಹಾರಾಟ ನಡೆಸಿದ್ದ ವಿಶ್ವದ ಮೊದಲ ಪೈಲಟ್‌ ಎಂಬ ಕೀರ್ತಿಗೆ ಭಾಜನರಾಗಿದ್ದ ಜನರಲ್‌ ಚುಕ್‌ ಯೀಗರ್‌(97) ಸೋಮವಾರ ಕೊನೆಯುಸೆರೆಳೆದಿದ್ದಾರೆ.

ಅಮೆರಿಕ ವಾಯುಪಡೆಯಲ್ಲಿ ಪೈಲಟ್‌ ಆಗಿದ್ದ ವೇಳೆ ತಮ್ಮ 24ನೇ ವಯಸ್ಸಿನಲ್ಲಿ 1947ರ ಅಕ್ಟೋಬರ್‌ನಲ್ಲಿ ಕ್ಯಾಲಿಫೋರ್ನಿಯಾದ ವಾಯುನೆಲೆಯಲ್ಲಿ 43 ಸಾವಿರ ಎತ್ತರದಲ್ಲಿ ಬೆಲ್‌ ಎಕ್ಸ್‌-1 ವಿಮಾನದಲ್ಲಿ ಪ್ರತೀ ಗಂಟೆಗೆ 700 ಮೈಲುಗಳಷ್ಟು ವೇಗವಾಗಿ ಹಾರಾಟ ನಡೆಸಿದ್ದರು. ಹೀಗಾಗಿ ಈ ವಿಮಾನಕ್ಕೆ ಅವರ ಮೊದಲ ಪತ್ನಿ ಗ್ಲಾಮರಸ್‌ ಗ್ಲೆನ್ನಿಸ್‌ ಎಂದು ಹೆಸರಿಸಲಾಯಿತು.

ರಫೇಲ್‌ ವಿವಾದದ ಬಳಿಕ ಆಫ್‌ಸೆಟ್‌ ನಿಯಮ ರದ್ದು!

ಆ ನಂತರದಲ್ಲೇ ಸೂಪರ್‌ಸಾನಿಕ್‌ ವಿಮಾನಗಳ ಹುಟ್ಟುವಿಕೆಯ ಕಾಲ ಶುರುವಾಯಿತು. ಅಲ್ಲದೆ ಇವರು ಅತಿಹೆಚ್ಚು ವೇಗವಾಗಿ ಹಾರಾಟ ನಡೆಸಿದ ಎಕ್ಸ್‌-1 ವಿಮಾನವನ್ನು ವಾಷಿಂಗ್ಟನ್‌ನಲ್ಲಿರುವ ಸ್ಮಿತ್‌ಸೋನಿಯನ್‌ ರಾಷ್ಟ್ರೀಯ ವಿಮಾನ ಮತ್ತು ಬಾಹ್ಯಾಕಾಶ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ.