Asianet Suvarna News Asianet Suvarna News

ದಾಖಲೆಯ 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ‍Xi Jinping..? ಇಂದಿನ ಸಭೆಯಲ್ಲಿ ಅಧ್ಯಕ್ಷ ಪಟ್ಟ..!

ಕಮ್ಯುನಿಸ್ಟ್‌ ಪಕ್ಷದ ಪ್ರಭಾವಿ ಸೆಂಟ್ರಲ್‌ ಕಮಿಟಿಗೆ ಕ್ಸಿ ಜಿನ್‌ಪಿಂಗ್ ಆಯ್ಕೆಯಾಗಿದ್ದು, ಇಂದಿನ ಮಹತ್ವದ ಸಭೆಯಲ್ಲಿ ಕ್ಸಿ ಜಿನ್‌ಪಿಂಗ್‌ಗೆ ದಾಖಲೆಯ 3ನೇ ಅವಧಿಗೆ ಅಧ್ಯಕ್ಷ ಪಟ್ಟ ದೊರೆಯುವ ಸಂಭವವಿದೆ. 

chinese president xi jinping all set for record 3rd term as communist party congress ends week long session ash
Author
First Published Oct 23, 2022, 9:18 AM IST

ಬೀಜಿಂಗ್‌: ಒಬ್ಬರು ಗರಿಷ್ಠ ಎರಡು ಅವಧಿಗೆ ಮಾತ್ರ ಚೀನಾದ ಅಧ್ಯಕ್ಷರಾಗಬಹುದು (China President) ಎಂಬ ಕಮ್ಯುನಿಸ್ಟ್‌ ಪಕ್ಷದ (Communist Party) ನಿಯಮವನ್ನು ಮೀರಿ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (‍‍Xi Jinping) ದಾಖಲೆಯ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಶನಿವಾರ ಮುಕ್ತಾಯಗೊಂಡ, ಐದು ವರ್ಷಕ್ಕೊಮ್ಮೆ ನಡೆಯುವ, ಚೀನಾದ (China) ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ ಸಭೆಯಲ್ಲಿ ಪ್ರಭಾವಿ ಸೆಂಟ್ರಲ್‌ ಕಮಿಟಿಗೆ ಕ್ಸಿ ಜಿನ್‌ಪಿಂಗ್‌ ಪುನರಾಯ್ಕೆಯಾಗಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ಕ್ಸಿ ಜಿನ್‌ಪಿಂಗ್‌ ಜೊತೆ 7 ಸದಸ್ಯರ ಅತ್ಯುಚ್ಚ ಸ್ಥಾಯಿ ಸಮಿತಿಯಲ್ಲಿದ್ದ ಯಾವ ಬೇರೊಬ್ಬರೂ 205 ಸದಸ್ಯರ ಸೆಂಟ್ರಲ್‌ ಕಮಿಟಿಗೆ ಆಯ್ಕೆಯಾಗಿಲ್ಲ. ಪ್ರಧಾನಿ ಲಿ ಕೇಕಿಯಾಂಗ್‌ ಕೂಡ ಆಯ್ಕೆಯಾಗಿಲ್ಲ. ಆದರೆ, ಕ್ಸಿ ಮಾತ್ರ ಆಯ್ಕೆಯಾಗಿದ್ದು, ಭಾನುವಾರ ಈ ಕಮಿಟಿಯು 25 ಸದಸ್ಯರ ಪೊಲಿಟಿಕಲ್‌ ಬ್ಯೂರೋವನ್ನು ಆಯ್ಕೆ ಮಾಡಲಿದೆ. ಪೊಲಿಟಿಕಲ್‌ ಬ್ಯೂರೋ ಸದಸ್ಯರು ಏಳು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ಸ್ಥಾಯಿ ಸಮಿತಿ ಆಯ್ಕೆ ಮಾಡಲಿದ್ದಾರೆ. ಸ್ಥಾಯಿ ಸಮಿತಿಯು ಕಮ್ಯುನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಅರ್ಥಾತ್‌ ಚೀನಾದ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. ಭಾನುವಾರ ಈ ಪ್ರಕ್ರಿಯೆ ನಡೆಯಲಿದೆ.

ಇದನ್ನು ಓದಿ: ಭಾರತ ಸಹಭಾಗಿತ್ವದ Quad ವಿರುದ್ಧ China ಕಿಡಿ

ಚೀನಾದ ಇತಿಹಾಸದಲ್ಲಿ ಯಾರೂ ಈವರೆಗೆ ಮೂರನೇ ಬಾರಿ ಅಧ್ಯಕ್ಷರಾಗಿಲ್ಲ. ಆದರೆ 69 ವರ್ಷದ ಕ್ಸಿ ಜಿನ್‌ಪಿಂಗ್‌ ಮೂರನೇ ಬಾರಿ ಮಾತ್ರವಲ್ಲ, ತಾವು ಬದುಕಿರುವವರೆಗೂ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಸಂವಿಧಾನ ಬದಲಿಸಿಕೊಂಡಿದ್ದಾರೆ.

ಸಭೆಯಿಂದ ಮಾಜಿ ಅಧ್ಯಕ್ಷ ಬಲವಂತವಾಗಿ ಔಟ್‌!
ಕಮ್ಯುನಿಸ್ಟ್‌ ಪಕ್ಷದ ‘ರಾಷ್ಟ್ರೀಯ ಕಾಂಗ್ರೆಸ್‌’ನಿಂದ (National Congress of the Chinese Communist Party) ಶನಿವಾರ ಚೀನಾದ ಮಾಜಿ ಅಧ್ಯಕ್ಷ ಹು ಜಿಂಟಾವೋ (Hu Jintao) ಅವರನ್ನು ಸೆಕ್ಯುರಿಟಿ ಗಾರ್ಡ್‌ಗಳು ಬಲವಂತವಾಗಿ ಹೊರಗೆ ಕರೆದುಕೊಂಡು ಹೋದ ಘಟನೆ ನಡೆದಿದೆ. ಆದರೆ, ಏಕೆ ಅವರನ್ನು ಹೊರಹಾಕಲಾಯಿತು ಎಂದು ತಿಳಿದುಬಂದಿಲ್ಲ.

ಇದನ್ನೂ ಓದಿ: Chinaದಿಂದ ಯುದ್ಧೋತ್ಸಾಹ: ತೈವಾನ್‌ ವಶಕ್ಕೆ ಮಿಲಿಟರಿ ಬಳಸಲೂ ಹಿಂಜರಿಯುವುದಿಲ್ಲ ಎಂದ ಜಿನ್‌ಪಿಂಗ್‌

ವೇದಿಕೆಯಲ್ಲಿ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಮತ್ತು ಇತರ ಮಹತ್ವದ ವ್ಯಕ್ತಿಗಳ ಜೊತೆ ಕುಳಿತಿದ್ದ ಹು ಜಿಂಟಾವೋ ಅವರ ಕಿವಿಯಲ್ಲಿ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಏನೋ ಹೇಳಿದರು. ಮೊದಲು ಪ್ರತಿರೋಧ ತೋರಿದ ಹು ಜಿಂಟಾವೋ, ನಂತರ ಅವರ ಜೊತೆ ಹೊರನಡೆದರು. ಹೋಗುವಾಗ ಕ್ಸಿ ಜಿನ್‌ಪಿಂಗ್ ಬಳಿ ಹು ಜಿಂಟಾವೋ ಏನೋ ಹೇಳಿದರು. ಅದಕ್ಕೆ ಕ್ಸಿ ಜಿನ್‌ಪಿಂಗ್ ತಲೆಯಾಡಿಸಿ, ಪಕ್ಕದಲ್ಲಿದ್ದ ಪ್ರಧಾನಿ ಲಿ ಕೇಕಿಯಾಂಗ್‌ (Li Keqiang) ಅವರ ಬೆನ್ನುತಟ್ಟಿದರು. ಈ ಘಟನೆ ಚೀನಾದಲ್ಲಿ ಸಂಚಲನ ಮೂಡಿಸಿದ್ದು, ವೈರಲ್‌ ಆಗಿದೆ.

ಈ ನಡುವೆ ಇಂಟರ್ನೆಟ್‌ ಸರ್ಚ್‌ ಎಂಜಿನ್‌ಗಳಿಂದ ಹು ಜಿಂಟಾವೋ ಅವರನ್ನು ಬ್ಲಾಕ್‌ ಮಾಡಲಾಗಿದೆ.

Follow Us:
Download App:
  • android
  • ios