Asianet Suvarna News Asianet Suvarna News

ಭಾರತ ಸಹಭಾಗಿತ್ವದ Quad ವಿರುದ್ಧ China ಕಿಡಿ

ನಿರ್ದಿಷ್ಟ ದೇಶವನ್ನು ಗುರಿಯಾಗಿಸಿಕೊಂಡು ರಚನೆಯಾದ ಕ್ವಾಡ್‌ ಅಥವಾ ಎಯುಕೆಯುಎಸ್‌ (ಆಸ್ಪ್ರೇಲಿಯಾ, ಬ್ರಿಟನ್‌ ಮತ್ತು ಅಮೆರಿಕದ ಒಕ್ಕೂಟ)ನಂತಹ ಅಂತಾರಾಷ್ಟ್ರೀಯ ಗುಂಪುಗಳನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ. 

china opposes unilateralism exclusive groups against particular countries cpc congress report ash
Author
First Published Oct 17, 2022, 9:28 AM IST

ಬೀಜಿಂಗ್‌: ಅಮೆರಿಕ (United States of America), ಭಾರತ (India) , ಆಸ್ಪ್ರೇಲಿಯಾ (Australia) ಹಾಗೂ ಜಪಾನ್‌ (Japan) ಪಾಲುದಾರಿಕೆಯ ಕ್ವಾಡ್‌ ಒಕ್ಕೂಟದ ವಿರುದ್ಧ ಚೀನಾ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಕಿಡಿಕಾರಿದ್ದು, ಇಂತಹ ಗುಂಪುಗಳನ್ನು ತಮ್ಮ ದೇಶ ವಿರೋಧಿಸುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಇದೇ ವೇಳೆ, ಸರ್ವಾಧಿಕಾರವನ್ನು ಚೀನಾ ವಿರೋಧಿಸುತ್ತದೆ ಎಂಬ ಹೇಳಿಕೆಯನ್ನೂ ಅವರು ನೀಡಿದ್ದಾರೆ. ಸ್ವತಃ ಸರ್ವಾಧಿಕಾರಿ ದೇಶವಾಗಿರುವ ಚೀನಾದ ಅಧ್ಯಕ್ಷನಿಂದ ಬಂದ ಈ ಹೇಳಿಕೆ ಜಾಗತಿಕ ವೇದಿಕೆಯಲ್ಲಿ ಹಾಸ್ಯಾಸ್ಪದವೆನ್ನಿಸಿದೆ.

ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಚೀನಾದ ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ ಸಭೆಯಲ್ಲಿ ಭಾನುವಾರ ಮಾತನಾಡಿದ ಕ್ಸಿ ಜಿನ್‌ಪಿಂಗ್‌, ನಿರ್ದಿಷ್ಟ ದೇಶವನ್ನು ಗುರಿಯಾಗಿಸಿಕೊಂಡು ರಚನೆಯಾದ ಕ್ವಾಡ್‌ (Quad) ಅಥವಾ ಎಯುಕೆಯುಎಸ್‌ (AUKUS) (ಆಸ್ಪ್ರೇಲಿಯಾ, ಬ್ರಿಟನ್‌ ಮತ್ತು ಅಮೆರಿಕದ ಒಕ್ಕೂಟ)ನಂತಹ ಅಂತಾರಾಷ್ಟ್ರೀಯ ಗುಂಪುಗಳನ್ನು ಚೀನಾ ವಿರೋಧಿಸುತ್ತದೆ. ನಮ್ಮ ದೇಶ ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಗೌರವಿಸುತ್ತದೆ. ಅಂತಾರಾಷ್ಟ್ರೀಯ ಕಾನೂನನ್ನು ಪಾಲಿಸುತ್ತದೆ. ನಾವು ಯಾವತ್ತೂ ಸಾಮ್ರಾಜ್ಯ ವಿಸ್ತರಣೆ ಮನೋಭಾವ ಹೊಂದಿಲ್ಲ. ಎಲ್ಲ ರಾಷ್ಟ್ರಗಳ ಜೊತೆ ಸಹಬಾಳ್ವೆ ಹಾಗೂ ಸಹಕಾರದ ನೀತಿ ಹೊಂದಿದ್ದೇವೆ. ಸಮಾನತೆ, ಮುಕ್ತತೆ, ಸಹಕಾರ ಹಾಗೂ ಪರಸ್ಪರರ ಆಸಕ್ತಿಗಳನ್ನು ರಕ್ಷಿಸುವ ಮನೋಭಾವ ನಮ್ಮದಾಗಿದೆ ಎಂದು ಹೇಳಿದರು.

ಇದನ್ನು ಓದಿ: Chinaದಿಂದ ಯುದ್ಧೋತ್ಸಾಹ: ತೈವಾನ್‌ ವಶಕ್ಕೆ ಮಿಲಿಟರಿ ಬಳಸಲೂ ಹಿಂಜರಿಯುವುದಿಲ್ಲ ಎಂದ ಜಿನ್‌ಪಿಂಗ್‌

ಕ್ವಾಡ್‌ ಒಕ್ಕೂಟವನ್ನು ಚೀನಾ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಪೆಸಿಫಿಕ್‌ ಸಮುದ್ರದಲ್ಲಿ ಚೀನಾದ ಅತಿಕ್ರಮಣವನ್ನು ವಿರೋಧಿಸುವ ಹಾಗೂ ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುವ ಸಲುವಾಗಿ ಕ್ವಾಡ್‌ ರೂಪುಗೊಂಡಿದೆ.

ಹಾಸ್ಯಾಸ್ಪದ ಹೇಳಿಕೆ:
ತಮ್ಮ ದೇಶವು ಎಲ್ಲಾ ರೀತಿಯ ಸರ್ವಾಧಿಕಾರವನ್ನು, ಅಧಿಕಾರ ರಾಜಕೀಯವನ್ನು, ಶೀತಲ ಸಮರದಂತಹ ಧೋರಣೆಯನ್ನು, ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸುವಿಕೆಯನ್ನು ಹಾಗೂ ದ್ವಂದ್ವ ನೀತಿಯನ್ನು ವಿರೋಧಿಸುತ್ತದೆ ಎಂದೂ ಕ್ಸಿ ಜಿನ್‌ಪಿಂಗ್‌ ಹೇಳಿದ್ದಾರೆ. ಪ್ರಜಾಪ್ರಭುತ್ವವಿಲ್ಲದ ಕಮ್ಯುನಿಸ್ಟ್‌ ರಾಷ್ಟ್ರ ಚೀನಾದಲ್ಲಿ ಸ್ವತಃ ಜಿನ್‌ಪಿಂಗ್‌ ಅವರೇ ಸರ್ವಾಧಿಕಾರಿಯಾಗಿರುವುದು ಹಾಗೂ ತಮ್ಮ ದೇಶ ವಿರೋಧಿಸುತ್ತದೆ ಎಂದು ಹೇಳಿರುವ ಎಲ್ಲಾ ಸಂಗತಿಗಳನ್ನೂ ಸ್ವತಃ ಅವರೇ ಆಚರಿಸುತ್ತಿರುವುದರಿಂದ ಅವರ ಹೇಳಿಕೆ ಹಾಸ್ಯಾಸ್ಪದ ಎನ್ನಿಸಿದೆ.

ಇದನ್ನೂ ಓದಿ: Quad Countries: ಚೀನಾ ಕಳ್ಳಾಟಕ್ಕೆ ಕ್ವಾಡ್‌ ಕಟ್ಟೆಚ್ಚರಿಕೆ

Follow Us:
Download App:
  • android
  • ios