ಚೀನಾದ ಕಂಪನಿಯೊಂದು ಉದ್ಯೋಗಿಗಳಿಗೆ ಟಾಯ್ಲೆಟ್ ಬಳಸಲು ಕೇವಲ 2 ನಿಮಿಷಗಳ ಸಮಯವನ್ನು ನಿಗದಿಪಡಿಸಿದೆ. ಈ ನಿಯಮವು ವ್ಯಾಪಕ ಟೀಕೆಗೆ ಗುರಿಯಾಗಿದೆ, ಉದ್ಯೋಗಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಬೀಜಿಂಗ್‌ (ಫೆ.20): ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಕಂಪನಿಗಳು ಉದ್ಯೋಗಿಗಳೊಂದಿಗೆ ಮಾನವೀಯವಲ್ಲದ ವರ್ತನೆ ತೋರುತ್ತವೆ. ಅದೇ ರೀತಿ ಚೀನಾದ ಕಂಪನಿಯೊಂದು ಈಗ ದೊಡ್ಡ ಟೀಕೆಗಳನ್ನು ಎದುರಿಸುತ್ತಿದೆ. ಟಾಯ್ಲೆಟ್ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಯು ತಂದ ಹೊಸ ನಿಯಮ ಟೀಕೆಗೆ ಕಾರಣವಾಗಿದೆ. ಫೆಬ್ರವರಿ 11 ರಿಂದ ಈ ನಿಯಮಗಳು ಜಾರಿಗೆ ಬಂದಿವೆ ಎಂದು ವರದಿಯಾಗಿದೆ. ಈ ಹೊಸ ನಿಯಮದ ಪ್ರಕಾರ, ಇಲ್ಲಿನ ಉದ್ಯೋಗಿಗಳಿಗೆ ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಟಾಯ್ಲೆಟ್ ಬಳಸಲು ಅನುಮತಿ ಇದೆ. ಅದು ಮಾತ್ರವಲ್ಲ, ಟಾಯ್ಲೆಟ್ಗೆ ಹೋಗಲು ಕೇವಲ ಎರಡು ನಿಮಿಷ ಮಾತ್ರ ಅವಕಾಶ ನೀಡಲಾಗಿದೆ.

ಈ ಎರಡು ನಿಮಿಷಗಳಲ್ಲಿ ಟಾಯ್ಲೆಟ್‌ಗೆ ಹೋಗಿ ವಾಪಸ್ ಬಂದು ಕೆಲಸ ಶುರು ಮಾಡಬೇಕು. ಗ್ವಾಂಗ್ಡಾಂಗ್‌ನ ಫೋಶನ್ನಲ್ಲಿರುವ ತ್ರೀ ಬ್ರದರ್ಸ್ ಮೆಷಿನ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯು ಈ ಕಾರ್ಮಿಕ ವಿರೋಧಿ ನೀತಿಗಾಗಿ ಟೀಕೆಗೆ ಗುರಿಯಾಗಿದೆ. ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಶಿಸ್ತು ಮತ್ತು ನಡವಳಿಕೆಯನ್ನು ಸುಧಾರಿಸಲು ಈ ನಿಯಮವನ್ನು ತರಲಾಗಿದೆ ಎಂದು ಕಂಪನಿ ವಾದಿಸಿದೆ. 

ಹೊಸ ನಿಯಮದ ಪ್ರಕಾರ, ಟಾಯ್ಲೆಟ್ ಬಳಸಲು ಉದ್ಯೋಗಿಗಳಿಗೆ ಈ ಕೆಳಗಿನ ಸಮಯವನ್ನು ನಿಗದಿಪಡಿಸಲಾಗಿದೆ: ಬೆಳಿಗ್ಗೆ 8 ಗಂಟೆಗೆ ಮೊದಲು, ಬೆಳಿಗ್ಗೆ 10.30 ರಿಂದ 10.40 ರವರೆಗೆ, ಮಧ್ಯಾಹ್ನ 12 ರಿಂದ 1.30 ರವರೆಗೆ, ಸಂಜೆ 3.30 ರಿಂದ 3.40 ರವರೆಗೆ, ಮತ್ತು ಸಂಜೆ 5.30 ರಿಂದ 6 ಗಂಟೆಯವರೆಗೆ ಈ ಅವಧಿಯಲ್ಲಿ ಮಾತ್ರವೇ ಉದ್ಯೋಗಿಗಳು ಟಾಯ್ಲೆಟ್‌ಗೆ ಹೋಗಬೇಕು ಎಂದು ತಿಳಿಸಲಾಗಿದೆ.

Viral Video: 15 ನಿಮಿಷದಲ್ಲಿ ಬಾಚಿಕೊಂಡಷ್ಟು ಹಣ ಬೋನಸ್‌ ಕೊಟ್ಟ ಕಂಪನಿಯ ಮಾಲೀಕ

ತುಂಬಾ ಅಗತ್ಯವಿದ್ದಾಗ ಮಾತ್ರ ಇದರ ನಡುವೆ ಟಾಯ್ಲೆಟ್ ಬಳಸಲು ಅನುಮತಿ ಇದೆ. ಅದಕ್ಕೂ ಎರಡು ನಿಮಿಷ ಮಾತ್ರ ಬಳಸಬೇಕು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಈ ಹೊಸ ನಿಯಮದ ವಿರುದ್ಧ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಟೀಕೆ ವ್ಯಕ್ತವಾಗುತ್ತಿದೆ. 

700 ರೂ ಲಿಪ್ ಸ್ಟಡ್ ಖರೀದಿದಿಗೆ 1.2 ಕೋಟಿ ರೂ ಕೈಚೆಲ್ಲಿದ ಪುತ್ರಿ, ಪ್ರಜ್ಞೆ ತಪ್ಪಿ ಬಿದ್ದ ತಾಯಿ