ಜಿ20 ವೇಳೆ ಚೀನಾದಿಂದ ಗೂಢಚಾರಿಕೆ ಯತ್ನ: ಬ್ಯಾಗ್‌ಗಳ ಸ್ಕ್ಯಾನ್ ಮಾಡಲು ಚೀನಾ ನಕಾರ
ಜಿ20 ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿದ್ದ ಚೀನಾ ನಿಯೋಗ (Chinese delegation), ಭಾರತದಲ್ಲಿ ಗೂಢಚಾರಿಕೆ ನಡೆಸಿರಬಹುದು ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ನಿಯೋಗ ತಂದಿದ್ದ ಕೆಲವು ಬ್ಯಾಗ್‌ಗಳನ್ನು ಪರೀಕ್ಷೆ ಮಾಡಲು ಬಿಡದೇ ಸುಮಾರು 12 ಗಂಟೆಗಳ ಕಾಲ ಚೀನಾ ಹೈಡ್ರಾಮ ನಡೆಸಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ.

ನವದೆಹಲಿ: ಜಿ20 ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿದ್ದ ಚೀನಾ ನಿಯೋಗ (Chinese delegation), ಭಾರತದಲ್ಲಿ ಗೂಢಚಾರಿಕೆ ನಡೆಸಿರಬಹುದು ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ನಿಯೋಗ ತಂದಿದ್ದ ಕೆಲವು ಬ್ಯಾಗ್‌ಗಳನ್ನು ಪರೀಕ್ಷೆ ಮಾಡಲು ಬಿಡದೇ ಸುಮಾರು 12 ಗಂಟೆಗಳ ಕಾಲ ಚೀನಾ ಹೈಡ್ರಾಮ ನಡೆಸಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ.
ಚೀನಾ ನಿಯೋಗಕ್ಕೆ ತಾಜ್ ಹೋಟೆಲ್‌ನಲ್ಲಿ (Taj Hotel) ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಈ ನಿಯೋಗದ ಓರ್ವ ಸದಸ್ಯ ಹೊಂದಿದ್ದ ಬ್ಯಾಗ್‌ಗಳ ಆಕಾರ ವಿಶೇಷವಾಗಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಆದರೆ ರಾಜತಾಂತ್ರಿಕ ನಿಯಮಗಳ (diplomatic rules)ಪ್ರಕಾರ ಈ ಬ್ಯಾಗ್‌ಗಳನ್ನು ಕೊಂಡೊಯ್ಯಲು ಹೋಟೆಲ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಅವಕಾಶ ನೀಡಿದ್ದರು. ಆದರೆ ಆ ಬ್ಯಾಗ್‌ಗಳಲ್ಲಿ ವಿಶೇಷ ಉಪಕರಣಗಳಿರುವ ಮಾಹಿತಿಯನ್ನು ಹೋಟೆಲ್ ಸಿಬ್ಬಂದಿಯಿಂದ ಪಡೆದ ಭದ್ರತಾ ಪಡೆಗಳು (security guard) ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡಲು ಕೋರಿದವು. ಆದರೆ ಇದಕ್ಕೆ ಚೀನಾದ ನಿಯೋಗ ಒಪ್ಪಿಗೆ ನೀಡಲಿಲ್ಲ.
ಬ್ಯಾಗ್ ತಪಾಸಣೆಗಾಗಿ ಭದ್ರತಾ ಪಡೆಗಳು ಹಾಗೂ ಚೀನಾದ ನಿಯೋಗ ಸುಮಾರು 12 ಗಂಟೆಗಳ ಕಾಲ ಮಾತುಕತೆ ನಡೆಸಿದರೂ ಸಹ ಸ್ಕ್ಯಾನ್ ಮಾಡಲು ಚೀನಾ ನಿಯೋಗ ಒಪ್ಪಿಗೆ ನೀಡಿಲ್ಲ. ಬಳಿಕ ಈ ಬ್ಯಾಗ್‌ಗಳನ್ನು ಚೀನಾದ ರಾಯಭಾರಿ ಕಚೇರಿಗೆ ಕೊಂಡ್ಯಯ್ಯಲು ಚೀನಾ ನಿಯೋಗ ಒಪ್ಪಿಗೆ ಸೂಚಿಸಿತು ಎಂದು ಮೂಲಗಳು ತಿಳಿಸಿವೆ.
ಖಾಸಗಿ ಇಂಟರ್ನೆಟ್‌ಗೆ ಚೀನಾ ಬೇಡಿಕೆ:
ತಾಜ್ ಹೋಟೆಲ್‌ನಲ್ಲಿ ಚೆಕ್‌ಇನ್ ಮಾಡಿಕೊಂಡ ಬಳಿಕ ಚೀನಾ ನಿಯೋಗ ಖಾಸಗಿ ಹಾಗೂ ಪ್ರತ್ಯೇಕ ಇಂಟರ್ನೆಟ್ ಸಂಪರ್ಕಕ್ಕೆ (separate internet connection) ಬೇಡಿಕೆ ಇಟ್ಟಿತ್ತು. ಆದರೆ ಇದಕ್ಕೆ ಹೋಟೆಲ್‌ನ ಆಡಳಿತ ಒಪ್ಪಿಗೆ ನೀಡಲಿಲ್ಲ. ಅಲ್ಲದೇ ಮುಂದಿನ ಬಾರಿ ಜಿ20 ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಬ್ರೆಜಿಲ್‌ನ (Brazil) ಅಧ್ಯಕ್ಷ ಸಹ ಇದೇ ಹೋಟೆಲ್‌ನಲ್ಲಿ ತಂಗಿದ್ದರು. ಹೀಗಾಗಿ ಚೀನಾದ ನಿಯೋಗದ ಈ ನಡೆಯ ಮೇಲೆ ಭಾರಿ ಅನುಮಾನ ವ್ಯಕ್ತವಾಗಿದೆ.
ಹಿಜ್ಬುಲ್ ಮುಖ್ಯಸ್ಥ ಸಲಾವುದ್ದೀನ್‌ಗೆ ಜೀವ ಬೆದರಿಕೆ
ಇಸ್ಲಾಮಾಬಾದ್: ಕಾಶ್ಮೀರದಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲಿಲ್ಲ ಎಂಬ ಕಾರಣಕ್ಕೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾವುದ್ದೀನ್‌ಗೆ ಪಾಕಿಸ್ತಾನದ ವಿದೇಶಿ ಗುಪ್ತಚರ (intelligence agency) ಸಂಸ್ಥೆಯಾದ ಐಎಸ್‌ಐ (ISI) ಜೀವಬೆದರಿಕೆ ಒಡ್ಡಿದೆ ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದಲ್ಲಿ 370 ವಿಧಿ ರದ್ಧತಿಯ ಬಳಿಕ, (Article 370) ಕಾಶ್ಮೀರದಲ್ಲಿ (Kashmir) ಐಎಸ್‌ಐಗೆ ಅನುಕೂಲಕರವಾಗುವಂತಹ ಫಲಿತಾಂಶಗಳನ್ನು ನೀಡಲು ಸಲಾವುದ್ದೀನ್ ವಿಫಲವಾಗಿದ್ದಾನೆ ಎಂಬ ಕಾರಣಕ್ಕೆ ಐಎಸ್‌ಐ ಕೋಪಗೊಂಡಿದೆ. ಅಲ್ಲದೇ 370ನೇ ವಿಧಿ ರದ್ದತಿಯ ಬಳಿಕ ಪಾಕಿಸ್ತಾನದ ಮಾದಕವಸ್ತು ಸಾಗಣೆಗೆ ಸಲಾವುದ್ದೀನ್ ನಿರಾಕರಿಸಿದ್ದಾನೆ. 370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರ ಕೃತ್ಯಗಳು ನಿಂತುಹೋಗಿವೆ. ಹೀಗಾಗಿ ಸಲಾಬುದ್ದೀನ್ ಹಿಜ್ಬುಲ್‌ನ ಮುಖ್ಯಸ್ಥ ಸ್ಥಾನವನ್ನು ಕಮಾಂಡರ್ ಅಮೀರ್ ಖಾನ್‌ಗೆ ಬಿಟ್ಟುಕೊಡಬೇಕು ಎಂದು ಐಎಸ್‌ಐ ಸೂಚಿಸಿದೆ ಎನ್ನಲಾಗಿದೆ.
ಅಲ್ಲದೇ ಹಿಜ್ಬುಲ್ ಸಂಘಟನೆಗೆ (Hizbul organization)ನೀಡುತ್ತಿದ್ದ ಹಣಕಾಸು ಸಹಾಯವನ್ನು (financial assistance) ಸ್ಥಗಿತಗೊಳಿಸಿದ್ದು, ಇಸ್ಲಾಮಾಬಾದ್‌ನಲ್ಲಿದ್ದ ಕಚೇರಿಯನ್ನು ಮುಚ್ಚಿದೆ. ಜಿ20 ಸಭೆಯನ್ನು ಯಶಸ್ವಿಯಾಗಿ ಕಾಶ್ಮೀರದಲ್ಲಿ ನಡೆಸಿದ್ದು, ಐಎಸ್‌ಐನ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಐಎಸ್‌ಐ ಜೀವ ಬೆದರಿಕೆ ಒಡ್ಡಿದ ಬಳಿಕ ಸಲಾಬುದ್ದೀನ್ (Salabuddin) ತನ್ನ ಬೆಂಗಾವಲು ಪಡೆಯನ್ನು ಹೆಚ್ಚಿಸಿಕೊಂಡಿದ್ದು, ಪ್ರಸ್ತುತ 12 ಮಂದಿಯನ್ನು ಆತನ ರಕ್ಷಣೆಗೆ ನೇಮಿಸಲಾಗಿದೆ. ಅಲ್ಲದೇ ಸಲಾಬುದ್ದೀನ್ ಪಿಒಕೆಯ ನಾಯಕ ರಾಜಾ ಫಾರೂಕ್ ಹೈದರ್‌ನನ್ನು ಭೇಟಿ ಮಾಡಿದ್ದು, ರಕ್ಷಣೆ ಕೋರಿದ್ದಾನೆ ಎಂದು ಮೂಲಗಳು ತಿಳಿಸಿವೆ.