ಟಿಬೆಟ್(ಜ.30): ಕೊರೊನಾ ವೈರಸ್ ಭಯ ಇಡೀ ಚೀನಾವನ್ನು ಆವರಿಸಿದ್ದು, ಈ ಮಾರಣಾಂತಿಕ ವೈರಸ್ ಚೀನಾ ಗಡಿ ದಾಟುವ ಭಯ ಇದೀಗ ಕಾಡತೊಡಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಟಿಬೆಟ್ ಧರ್ಮಗುರು ದಲೈ ಲಾಮಾ ಅವರ ಅಧಿಕೃತ ಪಟೋಲಾ ಅರಮನೆಯನ್ನು ಚೀನಿ ಸರ್ಕಾರ ಮುಚ್ಚಿದೆ.

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಟಿಬೆಟ್ ಧರ್ಮಗುರು ದಲೈ ಲಾಮಾ ಅವರ ಅಧಿಕೃತ ಪಟೋಲಾ ಅರಮನೆಯನ್ನು ಮುಚ್ಚಿರುವುದಾಗಿ ಚೀನಾ ಸರ್ಕಾರ ಸ್ಪಷ್ಟಪಡಿಸಿದೆ.

ಕೊರೋನಾ ಸಾವು 132ಕ್ಕೇರಿಕೆ, ಚೀನಾದಲ್ಲಿ ಮರಣ ಮೃದಂಗ!

ಕೊರೊನಾ ವೈರಸ್ ಅತ್ಯಂತ ವೇಗವಾಗಿ ಚೀನಾ ಹೊರತುಪಡಿಸಿ ಇತರ ದೇಶಗಳಿಗೆ ಹರಡುತ್ತಿದ್ದು, ಟಿಬೆಟ್ ಕೂಡ ಇದಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ಮವಾಗಿ ಪಟೋಲಾ ಅರಮನೆಯನ್ನು ಮುಚ್ಚಿರುವುದಾಗಿ ಚೀನಾ ಸರ್ಕಾರ ತಿಳಿಸಿದೆ.

ಆದರೆ ಚೀನಾದ ಈ ಕ್ರಮವನ್ನು ಖಂಡಿಸಿರುವ ಅರಮನೆ ಅಧಿಕಾರಿಗಳು, ಕೊರೊನಾ ವೈರಸ್ ನೆಪದಲ್ಲಿ ಅರಮನೆಯನ್ನು ವಶಕ್ಕೆ ಪಡೆಯುವ ಹುನ್ನಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಬೆಟ್ ಸಂಸತ್ತಿನ ವಕ್ತಾರ ಯೆಶಿ ಫುಂಟ್‌ಸೋಕ್, ಕೊರೊನಾ ವೈರಸ್ ನೆಪದಲ್ಲಿ ಟಿಬೆಟ್ ಆಪೋಷಣ ಪಡೆಯುವ ಚೀನಾದ ಹುನ್ನಾರವನ್ನು ಖಂಡಿಸುವುದಾಗಿ ಕಿಡಿಕಾರಿದ್ದಾರೆ.

ಟಿಬೆಟ್‌ ಹೊಸ ವರ್ಷಾಚರಣೆಗೆ ಸಿದ್ಧತೆ ಆರಂಭಿಸಿದ್ದು, ಈ ಸಂದರ್ಭದಲ್ಲಿ ಅರಮನೆ ಮುಚ್ಚುವ ನಿರ್ಧಾರದಿಂದ ಲಕ್ಷಾಂತರ ಭೌದ್ಧ ಅನುಯಾಯಿಗಳಿಗೆ ಆಘಾತವಾಗಿದೆ ಎಂದು ಫುಂಟ್‌ಸೋಕ್ ಖೇದ ವ್ಯಕ್ತಪಡಿಸಿದ್ದಾರೆ.