ಬೀಜಿಂಗ್(ಆ.25)‌: ಭಾರತದ ವಿರುದ್ಧ ಒಂದಾಗಿ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ ಹಾಗೂ ಚೀನಾಗಳ ಮಿಲಿಟರಿ ಬಾಂಧವ್ಯ ಮತ್ತಷ್ಟುಗಟ್ಟಿಯಾಗಿದೆ. ಪಾಕಿಸ್ತಾನಕ್ಕೆ ಚೀನಾ ಭಾನುವಾರ ಅತ್ಯಾಧುನಿಕ ಯುದ್ಧನೌಕೆಯೊಂದನ್ನು ನೀಡಿದೆ. ಇನ್ನೂ 3 ಸಮರನೌಕೆಗಳು 2021ರ ಒಳಗೆ ಪಾಕ್‌ಗೆ ರವಾನೆ ಆಗುವ ಸಾಧ್ಯತೆ ಇದೆ.

ಭಾರತೀಯ ಭೂಗತ ಪಾತಕಿಗಳ ಬಳಸಿ ದಾಳಿಗೆ ಪಾಕ್‌ ಐಎಸ್‌ಐ ಸಂಚು!

‘ಟೈಪ್‌ 054ಎ/ಪಿ’ ಹೆಸರಿನ ಈ ಸಮರನೌಕೆಯು ಈವರೆಗೆ ಇತರ ದೇಶಗಳಿಗೆ ಚೀನಾ ನೀಡಿರುವ ಯುದ್ಧನೌಕೆಗಳಲ್ಲೇ ಅತಿ ದೊಡ್ಡದಾಗಿದೆ. ಇದು ಕ್ಷಿಪಣಿಯನ್ನು ಹೊತ್ತೊಯ್ಯಬಲ್ಲ ಸಮರನೌಕೆಯಾಗಿದೆ.

ಇದರೊಂದಿಗೆ ಪಾಕಿಸ್ತಾನ ನೌಕಾಪಡೆಯ ಬಲ ದ್ವಿಗುಣಗೊಂಡಂತಾಗಿದೆ ಎಂಚು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

5 ನುಸುಳುಕೋರರ ಹತ್ಯೆ: ಗಡಿಯಲ್ಲಿ ಇಷ್ಟು ದೊಡ್ಡ ಬೇಟೆ ದಶಕದಲ್ಲೇ ಫಸ್ಟ್‌!

ಭಾನುವಾರ ಶಾಂಘೈ ಶಿಪ್‌ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಹಸ್ತಾಂತರ ನಡೆಯಿತು. 3 ದಿನಗಳ ಹಿಂದಷ್ಟೇ ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮೊಹಮ್ಮದ್‌ ಖುರೇಷಿ ಅವರು ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರ ಜತೆ ಜಮ್ಮು-ಕಾಶ್ಮೀರದ ಪರಿಸ್ಥಿತಿ ಬಗ್ಗೆ ಚರ್ಚಿದ್ದರು. ಇದೇ ವೇಳೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪಾಕಿಸ್ತಾನವನ್ನು ‘ಒಳ್ಳೆಯ ಸೋದರ’ ಎಂದು ಬಣ್ಣಿಸಿದ್ದರು. ಇದರ ಬೆನ್ನಲ್ಲೇ ಹಸ್ತಾಂತರ ನಡೆದಿರುವುದು ವಿಶೇಷ ಎಂದು ವಿಶ್ಲೇಷಿಸಲಾಗಿದೆ.

ಟೈಪ್‌ 054ಎ ಸಮರನೌಕೆ 4000 ಮೆಟ್ರಿಕ್‌ ಟನ್‌ನಷ್ಟುಭಾರ ಹೊತ್ತುಕೊಂಡಿದೆ. ಆಧುನಿಕ ರಾಡಾರ್‌ ಹಾಗೂ ಕ್ಷಿಪಣಿ ಹೊತ್ತೊಯ್ಯಬಲ್ಲದಾಗಿದೆ ಎಂದು ವರದಿ ಹೇಳಿದೆ.