ನವದೆಹಲಿ(ಆ.25): ಭದ್ರತಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಕಟ್ಟೆಚ್ಚರದಿಂದಾಗಿ ದೇಶದೊಳಗೆ ವಿಧ್ವಂಸಕ ಕೃತ್ಯಗಳನ್ನು ಎಸಗಲು ವಿಫಲವಾಗುತ್ತಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಮತ್ತು ಉಗ್ರಗಾಮಿ ಸಂಘಟನೆಗಳು, ಸ್ಥಳೀಯ ರೌಡಿಗಳನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುವ ಸಂಚು ರೂಪಿಸಿವೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

5 ನುಸುಳುಕೋರರ ಹತ್ಯೆ: ಗಡಿಯಲ್ಲಿ ಇಷ್ಟು ದೊಡ್ಡ ಬೇಟೆ ದಶಕದಲ್ಲೇ ಫಸ್ಟ್‌!

ಸ್ಥಳೀಯ ಮಟ್ಟದಲ್ಲಿ ಪ್ರಭಾವ ಹೊಂದಿರುವ ಭೂಗತ ಪಾತಕಿಗಳು ಜೊತೆಗೆ ಈಗಾಗಲೇ ಪಾಕಿಸ್ತಾನ ಉಗ್ರರು ಮತ್ತು ಐಎಸ್‌ಐ ನಂಟು ಹೊಂದಿವೆ. ಈ ನಂಟನ್ನೇ ಬಳಸಿಕೊಂಡು ಅವು ಭಾರತದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುವ ಮೂಲಕ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸಕ್ಕೆ ಕೈಹಾಕಬಹುದು ಎಂದು ಚಂಡೀಗಢ ಗುಪ್ತಚರ ಸಂಸ್ಥೆ ಇತ್ತೀಚೆಗೆ ಎಚ್ಚರಿಕೆ ರವಾನಿಸಿತ್ತು. ಅಲ್ಲದೇ ಉಗ್ರರ ಜೊತೆ ನಂಟು ಹೊಂದಿರುವ ಕೆಲವು ರೌಡಿಗಳ ಹೆಸರನ್ನು ಅದು ಬಹಿರಂಗಪಡಿಸಿದೆ.

ಕಾಶ್ಮೀರದಲ್ಲಿ ಮತ್ತೆ 370 ಜಾರಿ ಹೋರಾಟಕ್ಕೆ ಚಿದಂಬರಂ ಬೆಂಬಲ!

ಈ ರೌಡಿಗಳು ಹಲವಾರು ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಇವರಲ್ಲಿ ಕೆಲವರು ತಲೆ ಮರೆಸಿಕೊಂಡಿದ್ದು, ಇನ್ನು ಕೆಲವರು ಜೈಲಿನಲ್ಲಿದ್ದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ರೌಡಿಗಳ ಮೇಲೆ ಕಣ್ಣಿಡುವುಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.