ಚೀನಾದ ಡೀಪ್‌ಸೀಕ್ ಕಂಪನಿಯು ತನ್ನ ಉನ್ನತ ತಂತ್ರಜ್ಞರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡಿದೆ. ಎಐ ತಂತ್ರಜ್ಞಾನದ ರಹಸ್ಯ ಸೋರಿಕೆಯಾಗದಂತೆ ತಡೆಯಲು ಅವರಿಗೆ ಪ್ರಯಾಣ ನಿರ್ಬಂಧ ಹೇರಲಾಗಿದೆ.

ವಾಷಿಂಗ್ಟನ್‌: ಅತಿ ಕಡಿಮೆ ಬೆಲೆಗೆ ಪ್ರಭಾವಶಾಲಿಯಾದ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶ ನೀಡಿದ್ದ ಚೀನಾದ ಡೀಪ್‌ಸೀಕ್‌ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಈ ಬಾರಿ ತನ್ನ ಉನ್ನತ ತಂತ್ರಜ್ಞರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಂಡು, ಅವರ ಮೇಲೆ ಪ್ರಯಾಣ ನಿರ್ಬಂಧವನ್ನು ಚೀನಾ ಕಂಪನಿ ಹೇರಿದೆ. ದಿ ವರ್ಜ್‌ ಎಂಬ ಮಾಧ್ಯಮದ ವರದಿ ಅನ್ವಯ, ಎಐನ ವ್ಯಾವಹಾರಿಕ ರಹಸ್ಯಗಳು, ದೇಶಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಗಳು ಮತ್ತು ಕೆಲವು ತಾಂತ್ರಿಕ ಅಂಶಗಳು ಬಾಹ್ಯ ಜಗತ್ತಿಗೆ ಸೋರಿಕೆಯಾಗುವುದನ್ನು ತಡೆಯಲು ಡೀಪ್‌ಸೀಕ್‌ ಈ ಕ್ರಮಕ್ಕೆ ಮುಂದಾಗಿದೆ. ಈ ತಂತ್ರಜ್ಞರು ವಿದೇಶ ಪ್ರಯಾಣದ ಮೇಲೆ ನಿರ್ಬಂಧ ಹೇರಿದೆ.

ಹಿಂದೆಯೇ ಭಾರಿ ವಿವಾದ:

ಈ ಹಿಂದೆ ಡೀಪ್‌ಸೀಕ್‌ ಬಿಡುಗಡೆಯಾದ ಬಳಿಕ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಡೀಪ್‌ಸೀಕ್‌ನ ಕಾರ್ಯನಿಷ್ಠೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಬಳಕೆದಾರರ ಮಾಹಿತಿ ಸೋರಿಕೆ, ಚೀನಿ ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೆ ವಿಚಾರವಾಗಿ ಅಮೆರಿಕ, ಐರೋಪ್ಯ ಒಕ್ಕೂಟ ಡೀಪ್‌ಸೀಕ್‌ ಬಳಕೆ ಮೇಲೆ ನಿರ್ಬಂಧ ಹೇರಿತ್ತು. ಭಾರತ ಅದರ ಬಳಕೆ ಬಗ್ಗೆ ಕ್ರಮಗಳನ್ನು ತಂದಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಡೀಪ್‌ಸೀಕ್‌ ಸುದ್ದಿಯಾಗಿದೆ.

ನಿಮಗೆ ಗೊತ್ತಿಲ್ಲದೆಯೇ ನೆಟ್‌ಫ್ಲಿಕ್ಸ್ AI ಮಾತನ್ನ ನೀವು ಕೇಳ್ತಿದ್ದೀರಿ!

ಮನೆ ಕ್ಲೀನ್ ಮಾಡಿ ಸುಸ್ತಾದ ಪತಿರಾಯನಿಗೆ ಚಾಟ್ ಜಿಪಿಟಿ ಹೆಲ್ಪ್, ನಿರಾಳವಾಗ್ಬಹುದಾ?