Asianet Suvarna News Asianet Suvarna News

3 ವಾರದಿಂದ ನಾಪತ್ತೆಯಾದ ಚೀನಾ ರಕ್ಷಣಾ ಸಚಿವ: ಮಿಲಿಟರಿಯಲ್ಲಿ ಭ್ರಷ್ಟಾಚಾರ ಹಿನ್ನೆಲೆ ಶಿಸ್ತುಕ್ರಮ?

ಹಲವು ದಿನಗಳ ಕಾಲ ಅವರು ಕಣ್ಮರೆಯಾಗಿರುವ ಹಿನ್ನೆಲೆ ಚೀನಾದ ರಕ್ಷಣಾ ಸಚಿವ ಲೀ ಶಾಂಗ್ಫು ಅವರನ್ನು ಬಂಧಿಸಲಾಗಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

china s defence minister li shangfu missing for 3 weeks ash
Author
First Published Sep 15, 2023, 5:05 PM IST

ಬೀಜಿಂಗ್ (ಸೆಪ್ಟೆಂಬರ್ 15, 2023): ಚೀನಾ, ರಷ್ಯಾ, ಉತ್ತರ ಕೊರೊಯಾದಂತಹ ದೇಶಗಳಲ್ಲಿ ಕೆಲ ಹಿರಿಯ ಸಚಿವರು ಅಥವಾ ಹಿರಿಯ ಅಧಿಕಾರಿಗಳು ಆಗಾಗ್ಗೆ ಹಲವು ದಿನಗಳ ಕಾಲ ಅಥವಾ ತಿಂಗಳುಗಳ ಕಾಲ ನಾಪತ್ತೆಯಾಗುತ್ತಿರುತ್ತಾರೆ. ಇದೇ ರೀತಿ, ಸಾರ್ವಜನಿಕರ ನೋಟದಿಂದ ಕಣ್ಮರೆಯಾದ ಇತ್ತೀಚಿನ ನಿದರ್ಶನದಲ್ಲಿ, ಚೀನಾದ ರಕ್ಷಣಾ ಸಚಿವ ಲೀ ಶಾಂಗ್ಫು ಸಹ ಒಬ್ಬರು. ಮಿಲಿಟರಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಶಿಸ್ತುಕ್ರಮದ ಮಧ್ಯೆ ಸುಮಾರು ಮೂರು ವಾರಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. 

ಹಲವು ದಿನಗಳ ಕಾಲ ಅವರು ಕಣ್ಮರೆಯಾಗಿರುವ ಹಿನ್ನೆಲೆ ಲೀ ಶಾಂಗ್ಫು ಅವರನ್ನು ಬಂಧಿಸಲಾಗಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಸಾರ್ವಜನಿಕರಿಂದ ವಾರಗಳ ಕಣ್ಮರೆಯಾದ ನಂತರ ಚೀನಾದ ವಿದೇಶಾಂಗ ಸಚಿವರಾಗಿದ್ದ ಕಿನ್ ಗ್ಯಾಂಗ್ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಎರಡು ತಿಂಗಳ ನಂತರ ಈ ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ. ಜೂನ್‌ನಿಂದ ಅವರು ಎಲ್ಲಿದ್ದಾರೆ ಅಥವಾ ಕಿನ್‌ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇದನ್ನು ಓದಿ: ಈ ದೇಶದ ಸರ್ಕಾರಿ ಅಧಿಕಾರಿಗಳಿಗೆ ಐಫೋನ್‌ ಬ್ಯಾನ್‌: ಆ್ಯಪಲ್ ಷೇರುಗಳಲ್ಲಿ ಅಲ್ಲೋಲಕಲ್ಲೋಲ, ಸಾವಿರಾರು ಕೋಟಿ ನಷ್ಟ!

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ (CPC) ಮತ್ತು ಸರ್ಕಾರದಿಂದ ಭ್ರಷ್ಟಾಚಾರವನ್ನು ತೆಗೆದುಹಾಕುವ ಹಿನ್ನೆಲೆ, ಪಕ್ಷ ಅಥವಾ ದೇಶದ ಮೇಲೆ ತನ್ನ ಹಿಡಿತಕ್ಕೆ ಬೆದರಿಕೆಯನ್ನುಂಟುಮಾಡುವ ಯಾರನ್ನಾದರೂ ತೆಗೆದುಹಾಕುವ ಆರೋಪವಿದೆ.

ಲೀ ಅವರ ಬಂಧನದ ಊಹಾಪೋಹವು ಅವರು ಚೀನೀ ರಾಕೆಟ್ ಪಡೆಗಳೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು ಮತ್ತು ರಾಕೆಟ್ ಪಡೆಗಳು ಪ್ರಸ್ತುತ ಭ್ರಷ್ಟಾಚಾರದ ಮೇಲೆ ಶಿಸ್ತುಕ್ರಮಕ್ಕೆ ಒಳಗಾಗುತ್ತಿವೆ ಎಂಬ ಅಂಶದಿಂದ ಮತ್ತಷ್ಟು ಉತ್ತೇಜಿತವಾಗಿದೆ.

ಇದನ್ನೂ ಓದಿ: ಗಡಿ ಮೂಲಸೌಕರ್ಯದಲ್ಲಿ ಭಾರತ 2-3 ವರ್ಷದಲ್ಲಿ ಚೀನಾ ಸೋಲಿಸುತ್ತದೆ: ಬಿಆರ್‌ಓ ಮುಖ್ಯಸ್ಥ

ಲೀ ಶಾಂಗ್ಫು ಕಣ್ಮರೆಯಾದ ಬಗ್ಗೆ ನಮಗೆ ಏನು ಗೊತ್ತು?
ಚೀನಾದ ರಕ್ಷಣಾ ಸಚಿವ ಲೀ ಶಾಂಗ್ಫು ಸುಮಾರು 3 ವಾರಗಳಿಂದ ಕಾಣಿಸಿಕೊಂಡಿಲ್ಲ. ಲೀ ಅವರ ಕಣ್ಮರೆಯು ಚೀನಾದ ರಾಕೆಟ್ ಫೋರ್ಸ್‌ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಶಿಸ್ತುಕ್ರಮಕ್ಕೆ ಸಂಬಂಧಿಸಿದೆ. ಲೀ ಕೊನೆಯದಾಗಿ ಆಗಸ್ಟ್ 29 ರಂದು ಚೀನಾ-ಆಫ್ರಿಕಾ ಶಾಂತಿ ಮತ್ತು ಭದ್ರತಾ ವೇದಿಕೆಗೆ ಭಾಷಣ ಮಾಡುವಾಗ ಕಾಣಿಸಿಕೊಂಡರು ಮತ್ತು ಆಗಸ್ಟ್ ಮಧ್ಯದಲ್ಲಿ ಮಾಸ್ಕೋ ಹಾಗೂ ಮಿನ್ಸ್ಕ್‌ಗೆ ಅವರ ಕೊನೆಯ ಸಾಗರೋತ್ತರ ಪ್ರವಾಸವಾಗಿತ್ತು ಎಂದು ಗಾರ್ಡಿಯನ್ ವರದಿ ಮಾಡಿದೆ. ನಂತರ, ಅವರು ಕಳೆದ ವಾರ ಕೊನೆಯ ಕ್ಷಣದಲ್ಲಿ ವಿಯೆಟ್ನಾಂ ಅಧಿಕಾರಿಗಳೊಂದಿಗಿನ ಸಭೆಯನ್ನು ರದ್ದುಗೊಳಿಸಿದರು.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೇಶದ ಪರಮಾಣು ಮತ್ತು ಕ್ಷಿಪಣಿ ಶಸ್ತ್ರಾಗಾರವನ್ನು ನೋಡಿಕೊಳ್ಳುತ್ತಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್‌ನಿಂದ ಇಬ್ಬರು ಜನರಲ್‌ಗಳನ್ನು ತೆಗೆದುಹಾಕಿದ ನಂತರ ಲೀ ಅವರ ಕಣ್ಮರೆಯಾಯಿತು ಎಂದು ದಿ ಇಂಡಿಪೆಂಡೆಂಟ್ ವರದಿ ಮಾಡಿದೆ. 

ಇದನ್ನೂ ಓದಿ: ಭಾರತದಲ್ಲೇ ತಯಾರಾಗ್ತಿದೆ ಆ್ಯಪಲ್ ಫೋನ್‌: ಶೀಘ್ರದಲ್ಲೇ ನಿಮ್ಮ ಕೈಸೇರುತ್ತೆ ಮೇಡ್ ಇನ್ ಇಂಡಿಯಾ ಐಫೋನ್ 15!

ಲೀ ಅವರು ತನಿಖೆಯಲ್ಲಿದ್ದಾರೆ. ಈ ಹಿನ್ನೆಲೆ ಅವರ ಅನುಪಸ್ಥಿತಿಗೆ ಕಾರಣವಾಗಿದೆ ಎಂದು ಅಮೆರಿಕ ಸಕಾfರ ನಂಬುತ್ತದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ. ಇನ್ನೊಂದೆಡೆ, ಲೀ ಗೃಹಬಂಧನದಲ್ಲಿದ್ದಾರೆಯೇ ಎಂದು ಜಪಾನ್‌ನಲ್ಲಿರುವ ಯುಎಸ್ ರಾಯಭಾರಿ ರಹಮ್ ಇಮ್ಯಾನುಯೆಲ್ ಟ್ವೀಟ್‌ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ

Follow Us:
Download App:
  • android
  • ios