ನೇಪಾಳದ ಒಂದಿಡೀ ಹಳ್ಳಿ ಚೀನಾಕ್ಕೆ ‘ಗಿಫ್ಟ್’! ಗಡಿ ಗುರುತಿನ ಕಂಬಗಳನ್ನೇ ಕಿತ್ತೆಸೆದ ಡ್ರ್ಯಾಗನ್
ತನ್ನ ಗಡಿಯಲ್ಲಿರುವ ನೇಪಾಳದ ರುಯಿ ಎಂಬ ಒಂದಿಡೀ ಹಳ್ಳಿಯನ್ನೇ ಸದ್ದಿಲ್ಲದೆ ಕಬಳಿಸಿರುವ ಚೀನಾ, ಗಡಿ ಗುರುತಿಗೆಂದು ಅಳವಡಿಸಲಾಗಿದ್ದ ಕಂಬಗಳನ್ನು ಕಿತ್ತೆಸೆದಿದೆ. ಇದರೊಂದಿಗೆ ಕಪಟ ಚೀನಾದ ಜತೆ ಕೈಜೋಡಿಸಿದ ನೇಪಾಳ ಅದಕ್ಕೆ ದುಬಾರಿ ಬೆಲೆ ತೆರುವಂತಾಗಿದೆ.
ನವದೆಹಲಿ(ಜೂ.26): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ತನ್ನದು ಎಂದು ಕ್ಯಾತೆ ತೆಗೆದು ಭಾರತದ ಜತೆ ಸಂಘರ್ಷ ನಡೆಸಿದ್ದ ಚೀನಾ ಇದೀಗ ತನ್ನ ಹೊಸ ಮಿತ್ರರಾಷ್ಟ್ರ ನೇಪಾಳದ ಮೇಲೆ ಹಿಡಿತ ಸಾಧಿಸುವ ಲಕ್ಷಣಗಳು ಕಂಡುಬಂದಿವೆ.
ತನ್ನ ಗಡಿಯಲ್ಲಿರುವ ನೇಪಾಳದ ರುಯಿ ಎಂಬ ಒಂದಿಡೀ ಹಳ್ಳಿಯನ್ನೇ ಸದ್ದಿಲ್ಲದೆ ಕಬಳಿಸಿರುವ ಚೀನಾ, ಗಡಿ ಗುರುತಿಗೆಂದು ಅಳವಡಿಸಲಾಗಿದ್ದ ಕಂಬಗಳನ್ನು ಕಿತ್ತೆಸೆದಿದೆ. ಇದರೊಂದಿಗೆ ಕಪಟ ಚೀನಾದ ಜತೆ ಕೈಜೋಡಿಸಿದ ನೇಪಾಳ ಅದಕ್ಕೆ ದುಬಾರಿ ಬೆಲೆ ತೆರುವಂತಾಗಿದೆ.
3 ಪರಮಾಣು ಯುದ್ಧ ನೌಕೆ ಬೆನ್ನಲ್ಲೇ ಭಾರತದ ಬೆಂಬಲಕ್ಕೆ ಸೇನೆ ಕಳಿಸಿದ ಅಮೆರಿಕ
ಅಲ್ಲದೆ, ಚೀನಾದ ಈ ಕಪಟ ನೀತಿಗೆ ನೇಪಾಳದ ಕಮ್ಯುನಿಸ್ಟ್ ಸರ್ಕಾರ ಈವರೆಗೆ ಯಾವುದೇ ಪ್ರತಿರೋಧವಾಗಲಿ, ಪ್ರತಿಕ್ರಿಯೆಯಾಗಲಿ ತೋರಿಲ್ಲ ಎಂಬುದು ಮತ್ತಷ್ಟುಅಚ್ಚರಿಗೆ ಕಾರಣವಾಗಿದೆ.
ಇದಲ್ಲದೆ ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ನೇಪಾಳದ 11 ಸ್ಥಳಗಳು ಕೂಡ ಈಗ ಚೀನಾ ಪಾಲಾಗಿವೆ. ಜತೆಗೆ ನೇಪಾಳದ 4 ಜಿಲ್ಲೆಗಳ 36 ಹೆಕ್ಟೇರ್ ಜಾಗವನ್ನೂ ನುಂಗಿದೆ. ಆದಾಗ್ಯೂ ಪ್ರಬಲ ಚೀನಾದೆದುರು ನೇಪಾಳ ಬಾಯಿಬಿಡುವ ಸ್ಥಿತಿಯಲ್ಲಿಲ್ಲ. ಭಾರತದ ಲಿಪುಲೇಖ್, ಲಿಂಪಿಯಾಧುರಾ ಹಾಗೂ ಕಾಲಾಪಾನಿ ತನ್ನವೆಂದು ಚೀನಾ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಹೊಸ ನಕ್ಷೆ ಅಂಗೀಕರಿಸಿದ್ದ ನೇಪಾಳ, ತನ್ನ ಭೂಭಾಗವನ್ನೇ ರಕ್ಷಿಸಿಕೊಳ್ಳಲು ಆಗದೇ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಒಂದೇ ದಿನ ರಾಜ್ಯದಲ್ಲಿ 442 ಹೊಸ ಸೋಂಕು, 519 ಜನ ಡಿಸ್ಚಾರ್ಜ್..!
ಚೀನಾ ಗಡಿಯಲ್ಲಿರುವ ನೇಪಾಳದ ಗೋರ್ಖಾ ಜಿಲ್ಲೆಯ ರುಯಿ ಎಂಬ ಗ್ರಾಮವನ್ನು ಚೀನಾ ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದೆ. ಒಬ್ಬರ ಜಾಗದಲ್ಲಿ ಮತ್ತೊಬ್ಬರು ಮೂಗು ತೂರಿಸುವಂತಿಲ್ಲ ಎಂಬ ತನ್ನ ರಾಜತಾಂತ್ರಿಕ ನಿಲುವನ್ನು ಚೀನಾ ಉಲ್ಲಂಘಿಸಿರುವುದರಿಂದಾಗಿ, ರುಯಿ ಗ್ರಾಮದ 72 ಕುಟುಂಬಗಳು ಹೋರಾಟ ನಡೆಸುವಂತಾಗಿದೆ.
ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!
ಇಡೀ ನೇಪಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ರುಯಿ ಗ್ರಾಮದ ಮೂಲಕ ಚೀನಾ ಆರಂಭಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಲಿ ನೇಪಾಳದಲ್ಲಿ ಕೆ.ಪಿ.ಶರ್ಮಾ ಓಲಿ ನೇತೃತ್ವದ ಕಮ್ಯುನಿಸ್ಟ್ ಸರ್ಕಾರ ಆಡಳಿತ ನಡೆಸುತ್ತಿದ್ದು, ಈ ಸಂದರ್ಭವನ್ನು ಚೀನಾ ತನ್ನ ಲಾಭಕ್ಕಾಗಿ ಬಳಸುತ್ತಿದೆ ಎನ್ನಲಾಗಿದೆ.