ವಾಷಿಂಗ್ಟನ್(ಜೂ.26)‌: ಭಾರತ ಸೇರಿದಂತೆ ಆಗ್ನೇಯ ಏಷ್ಯಾ ದೇಶಗಳು ಚೀನಾದಿಂದ ಎದುರಿಸುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ತನ್ನ ಸೇನೆಯನ್ನು ಯುರೋಪ್‌ ಬದಲು ಇತರೆ ದೇಶಗಳತ್ತ ರವಾನಿಸುತ್ತಿರುವುದಾಗಿ ಅಮೆರಿಕ ವಿದೇಶಾಂಗ ಸಚಿವ ಮೈಕ್‌ ಪೊಂಪೆ ಘೋಷಿಸಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ಚೀನಾ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ನಿಂತಿರುವ ಬಹಿರಂಗ ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ಮೂಲಕ ನೆರೆ ಹೊರೆಯ ದೇಶಗಳ ಜೊತೆ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ನೇರ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.

ಒಂದೇ ದಿನ ರಾಜ್ಯದಲ್ಲಿ 442 ಹೊಸ ಸೋಂಕು, 519 ಜನ ಡಿಸ್ಚಾರ್ಜ್..!

ಬ್ರಸೆಲ್ಸ್‌ ವೇದಿಕೆ ಕಾರ್ಯಕ್ರಮಕ್ಕೆ ಗುರುವಾರ ಆನ್‌ಲೈನ್‌ನಲ್ಲೇ ಭಾಗಿಯಾಗಿದ್ದ ವೇಳೆ ಪೊಂಪೆ ಅವರನ್ನು, ಅಮೆರಿಕವೇಕೆ ಜರ್ಮನಿಯಲ್ಲಿನ ತನ್ನ ಸೇನೆ ಕಡಿತ ಮಾಡಿದೆ ಎಂದು ಪ್ರಶ್ನಿಸಿದ ವೇಳೆ, ಏಕೆಂದರೆ ಅವೆಲ್ಲಾ ಬೇರೆ ಸ್ಥಳಕ್ಕೆ ರವಾನೆಯಾಗಿವೆ. ಚೀನಾದಲ್ಲಿನ ಆಡಳಿತಾರೂಡ ಕಮ್ಯುನಿಸ್ಟ್‌ ಪಕ್ಷದಿಂದ ಭಾರತ, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ ದೇಶಗಳು ಅಪಾಯ ಎದುರಿಸುತ್ತಿವೆ. ಹೀಗಾಗಿ ಇಂಥ ಸವಾಲು ಎದುರಿಸಲು ಅಮೆರಿಕ ಸೇನೆ ಸೂಕ್ತವಾಗಿದೆ ಎಂಬುದನ್ನು ನಾವು ಈ ಮೂಲಕ ಖಚಿತಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ತಾನೇ ತೋಡಿದ ಗುಂಡಿಗೆ ಬಿದ್ದ ಚೀನಾ: ಡ್ರ್ಯಾಗನ್‌ ಬಣ್ಣ ಬಯಲು ಮಾಡಿದ ಲೈವ್ ವಿಡಿಯೋ!

ಕಳೆದ ವಾರವಷ್ಟೇ ಇಂಡೋ- ಪೆಸಿಫಿಕ್‌ ವಲಯದಲ್ಲಿ ಅಮೆರಿಕ ತನ್ನ ಅತ್ಯಾಧುನಿಕ 3 ಪರಮಾಣು ಯುದ್ಧ ನೌಕೆಗಳನ್ನು ನಿಯೋಜಿಸಿತ್ತು. 3 ವರ್ಷಗಳ ಬಳಿಕ ನಡೆದ ಇಂಥ ನಿಯೋಜನೆ ಭಾರೀ ಅಚ್ಚರಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಅಮೆರಿಕದಿಂದ ಈ ಹೇಳಿಕೆ ಹೊರಬಿದ್ದಿದೆ. ಕಳೆದ ವಾರದ ಲಡಾಖ್‌ ಗಡಿ ಬಿಕ್ಕಟ್ಟಿನ ವೇಳೆಯೂ ಪೊಂಪೆ ಅವರು ಚೀನಾವನ್ನು ತೀವ್ರವಾಗಿ ಟೀಕಿಸಿದ್ದರು.