Asianet Suvarna News Asianet Suvarna News

ವಿಯೆಟ್ನಾಂ ಗಡಿ ಸಮೀಪದ ನಗರವನ್ನು ಲಾಕ್‌ ಮಾಡಿದ ಚೀನಾ

  • 3.5 ಮಿಲಿಯನ್ ಜನಸಂಖ್ಯೆ ಇರುವ ನಗರವನ್ನು ಲಾಕ್‌ಡೌನ್‌ ಮಾಡಿದ ಚೀನಾ
  • ವಿಯೆಟ್ನಾಂ ಗಡಿ ಸಮೀಪ ಇರುವ ನಗರ
  • ಕಳೆದ ಶುಕ್ರವಾರ ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. 
China Locks Down A City Near Vietnam Border akb
Author
Bangalore, First Published Feb 7, 2022, 2:21 PM IST | Last Updated Feb 7, 2022, 2:21 PM IST

ಬೀಜಿಂಗ್‌(ಫೆ.7): ಕಳೆದ ಮೂರು ದಿನಗಳಲ್ಲಿ 70 ಕ್ಕೂ ಹೆಚ್ಚು ಕರೋನಾ ವೈರಸ್ ಪ್ರಕರಣಗಳು ಪತ್ತೆಯಾದ ನಂತರ ವಿಯೆಟ್ನಾಂನ ಗಡಿಯ ಸಮೀಪವಿರುವ 3.5 ಮಿಲಿಯನ್ ಜನರಿರುವ ಚೀನಾದ ನಗರವನ್ನು ಸೋಮವಾರ ಲಾಕ್‌ಡೌನ್ ಮಾಡಲಾಗಿದೆ. ದೃಢವಾದ ಹಾಗೂ ಶೂನ್ಯ ಕೋವಿಡ್ ನೀತಿಗೆ ಇನ್ನೂ ಅಂಟಿಕೊಂಡಿರುವ ವಿಶ್ವದ  ಏಕೈಕ ಪ್ರಮುಖ ಆರ್ಥಿಕತೆಯಾಗಿರುವ ಚೀನಾ, ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಬೇಕಾಗಿದ್ದು, ಹೀಗಾಗಿ ಇದು ಕೋವಿಡ್ ಹೆಚ್ಚಾಗದಂತೆ ಅತೀ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.

ದಕ್ಷಿಣ ಗುವಾಂಗ್ಕ್ಸಿ (southern Guangxi) ಪ್ರದೇಶದ ಬೈಸ್ ನಗರದ ಸ್ಥಳೀಯ ಅಧಿಕಾರಿಗಳು, ಯಾರೂ ಕೂಡ ನಗರ ತೊರೆಯಲು ಅನುಮತಿ ಇಲ್ಲ,  ಕೆಲವು ಜಿಲ್ಲೆಗಳ ನಿವಾಸಿಗಳು ತಮ್ಮ ಮನೆಗಳಲ್ಲೇ ಇರಬೇಕು ಎಂದು ಭಾನುವಾರ ಘೋಷಿಸಿದ್ದಾರೆ. ನಗರದಾದ್ಯಂತ ಸಂಚಾರ ನಿಯಂತ್ರಣಗಳನ್ನು ಜಾರಿಗೊಳಿಸಲಾಗುವುದು ಎಂದು ಉಪಮೇಯರ್ ಗು ಜುನ್ಯಾನ್ (Gu Junyan) ತಿಳಿಸಿದ್ದಾರೆ.  ವಾಹನಗಳು ಮತ್ತು ಜನರು ನಗರ ಪ್ರವೇಶಿಸುವುದು ಅಥವಾ ನಗರದಿಂದ ಬೇರೆಡೆ ಪ್ರಯಾಣಿಸುವಂತಿಲ್ಲ. ಸಿಬ್ಬಂದಿ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಮತ್ತು ಜನರ ಅನಗತ್ಯ ತಿರುಗಾಟ ನಿಷೇಧಿಸಲಾಗಿದೆ.

ಲಾಕ್ ಡೌನ್ ಎಫೆಕ್ಟ್: ತೂಕ ಹೆಚ್ಚಾಗಿದ್ರೆ ಮನೆಗೆಲಸ ಮಾಡಿ, ಕೊಬ್ಬು ಕರಗಿಸಿಕೊಳ್ಳಿ

ಬೈಸ್‌ನ (Baise)ವ್ಯಾಪ್ತಿಯಲ್ಲಿ ಬರುವ ಸಣ್ಣ ಗ್ರಾಮೀಣ ನಗರಗಳು ಮತ್ತು ಕೌಂಟಿಗಳಲ್ಲಿನ ಕೆಲವು ನೆರೆಹೊರೆಗಳ ನಿವಾಸಿಗಳನ್ನು ಕಟ್ಟುನಿಟ್ಟಾದ ಗೃಹಬಂಧನದಲ್ಲಿ ಇರಿಸಲಾಗಿದೆ. ಹಾಗೆಯೇ ಇತರರು ತಮ್ಮ ಜಿಲ್ಲೆಯನ್ನು ತೊರೆಯಲು ಸಾಧ್ಯವಿಲ್ಲ ಎಂದು ಗು ಜುನ್ಯಾನ್ (Gu Junyan) ಹೇಳಿದ್ದಾರೆ. ವಿಯೆಟ್ನಾಂ ಗಡಿಯಿಂದ ಸುಮಾರು 100 ಕಿಲೋಮೀಟರ್ (62 ಮೈಲಿ) ದೂರದಲ್ಲಿ  ಬೈಸ್ ನಗರವಿದ್ದು, ಶುಕ್ರವಾರ ಇಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಚೀನಾದ ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಲಾಗಿದ್ದ ವಾರದ ರಜೆ ಮುಗಿಸಿ ಬಂದ ಪ್ರಯಾಣಿಕನಲ್ಲಿ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸಾಂಕ್ರಾಮಿಕ ರೋಗದ ಆರಂಭದಿಂದಲೂ, ವಿಯೆಟ್ನಾಂ ಮತ್ತು ಮ್ಯಾನ್ಮಾರ್‌ನಿಂದ ಅಕ್ರಮ ವಲಸಿಗರನ್ನು ಹಾಗೂ ಸಂಭಾವ್ಯ ಕೋವಿಡ್ -19 ಸೋಂಕುಗಳನ್ನು ತಡೆಯುವ ಸಲುವಾಗಿ ಚೀನಾ ತನ್ನ ದಕ್ಷಿಣದ ಗಡಿಯಲ್ಲಿ ತಂತಿ ಬೇಲಿಯನ್ನು ನಿರ್ಮಿಸಿದೆ. ಅಲ್ಲದೇ ಇಲ್ಲಿನ ನಿವಾಸಿಗಳಿಗೆ  ಸಾಮೂಹಿಕ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹುಬೈ ಪ್ರಾಂತ್ಯದ(Hubei province) ವುಹಾನ್‌ನಲ್ಲಿ(Wuhan) ಕೋವಿಡ್  ಸಾಂಕ್ರಾಮಿಕ ರೋಗವು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇದಾದ ಬಳಿಕ ಚೀನಾವು ಕಟ್ಟುನಿಟ್ಟಾದ ಲಾಕ್‌ಡೌನ್‌ ಘೋಷಿಸಿತ್ತು. 

Economic Survey 2022: ಲಾಕ್ಡೌನ್‌ನ ವಲಸಿಗರಿಗೆ ಕೆಲಸ: ಕರ್ನಾಟಕ ದೇಶಕ್ಕೇ ಪ್ರಥಮ!

ಡೆಲ್ಟಾ (Delta) ಮತ್ತು ಓಮಿಕ್ರಾನ್ (Omicron)ಕರೋನಾ ವೈರಸ್ ರೂಪಾಂತರಗಳನ್ನು ಒಳಗೊಂಡ ಪ್ರಕರಣಗಳು ಭುಗಿಲೆದ್ದ ನಂತರ ಲಕ್ಷಾಂತರ ಜನರು ಚೀನಾದ ಅನೇಕ ನಗರಗಳಲ್ಲಿ ತಮ್ಮ ಮನೆಗಳಿಗೆ ಮಾತ್ರ ಸೀಮಿತರಾಗಿದ್ದರು. ಡಿಸೆಂಬರ್‌ನಲ್ಲಿ, ಉತ್ತರದ ಮೆಗಾಸಿಟಿ ಕ್ಸಿಯಾನ್‌ನಲ್ಲಿ 2,000 ಕ್ಕೂ ಹೆಚ್ಚು ಪ್ರಕರಣಗಳು ಏಕಾಏಕಿ ಪತ್ತೆಯಾದ ಹಿನ್ನೆಲೆ  13 ಮಿಲಿಯನ್ ನಿವಾಸಿಗಳನ್ನು ಒಂದು ತಿಂಗಳ ಕಾಲ ಕಟ್ಟುನಿಟ್ಟಾದ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಅಧಿಕಾರಿಗಳು ದಿನಸಿ ಕೊರತೆಯ ನಡುವೆಯೂ ಲಾಕ್‌ಡೌನ್ ಕ್ರಮಗಳನ್ನು ಅತಿಯಾಗಿ ಜಾರಿಗೊಳಿಸಿದ್ದಾರೆ ಎಂದು ನಿವಾಸಿಗಳು ಸ್ಥಳೀಯ ದೂರಿದ್ದರು. ಅಲ್ಲದೇ ಇದು ಕೆಲ ನಿರ್ಣಾಯಕ ವೈದ್ಯಕೀಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವುದನ್ನು ಕೂಡ ನಿರ್ಬಂಧಿಸಿದ ಪರಿಣಾಮ ಅನೇಕರ ಸಾವಿಗೆ ಕಾರಣವಾಗಿತ್ತು. ಇತ್ತ ಚೀನಾದಲ್ಲಿ ಸೋಮವಾರ ರಾಷ್ಟ್ರವ್ಯಾಪಿ 79 ಹೊಸ ಪ್ರಕರಣಗಳು ಪತ್ತೆ ಆಗಿವೆ.

Latest Videos
Follow Us:
Download App:
  • android
  • ios