ಚೀನಾದಲ್ಲಿ ಪ್ರತಿ 10,000 ಹಸುಗಳಲ್ಲಿ 5 ಮಾತ್ರೇ ತಮ್ಮ ಜೀವಿತಾವಧಿಯಲ್ಲಿ 100 ಟನ್ ಹಾಲು ನೀಡಲು ಸಮರ್ಥವಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದಕ್ಕಾಗಿಯೇ ಅವರು ಕ್ಲೋನಿಂಗ್ ಮೂಲಕ ಸೂಪರ್ ಹಸುವನ್ನು ತಯಾರಿಸುತ್ತಿದ್ದಾರೆ.

ನವದೆಹಲಿ (ಫೆ.5): ಜಗತ್ತಲ್ಲಿ ಚೀನಾ ಏನ್‌ ಮಾಡೋದಿಲ್ಲ ಹೇಳಿ. ಎರಡು ವರ್ಷಗಳ ಹಿಂದೆ ಇಡೀ ವಿಶ್ವಕ್ಕೆ ಕೊರೋನಾ ವೈರಸ್‌ಅನ್ನು ಕೊಟ್ಟ ಚೀನಾ ಈಗ ಅದೇ ವೈರಸ್‌ನಿಂದ ಹೈರಾಣಾಗಿ ಹೋಗಿದೆ. ದೇಶ ವೈರಸ್‌ನಿಂದ ತಾಪತ್ರಯ ಎದುರಿಸುವ ವೇಳೆಗಾಗಲೇ ಅಮೆರಿಕದತ್ತ ಗುಪ್ತಚರ ಬಲೂನ್‌ ಬಿಟ್ಟು ಭದ್ರತಾ ಆತಂಕವನ್ನೂ ಹುಟ್ಟುಹಾಕಿದೆ. ಇಂತಿರುವ ಚೀನಾ ವಿಜ್ಞಾನ ಕ್ಷೇತ್ರದಲ್ಲೂ ಏನಾದರೊಂದು ಮಾಡುತ್ತಲೇ ಇರುತ್ತದೆ. ಅದು ಎಡವಟ್ಟಾದಾಗ ಜಗತ್ತಿನ ಮೇಲೆ ಹಾಕಿಬಿಟ್ಟು ಸುಮ್ಮನಾಗುತ್ತದೆ. ಅದೇನೇ ಇರಲಿ,ಕೆಲವೊಂದು ಯೋಚನೆಗಳು ಚೀನಾ ದೇಶದ ವಿಜ್ಞಾನಿಗಳಿಗೆ ಬರೋದು ಅಚ್ಚರಿ ಹುಟ್ಟಿಸುವ ಸತ್ಯ. ಪ್ರಾಣಿಗಳ ಮೇಲೆ ದಿನಕ್ಕೊಂದು ಪ್ರಯೋಗ ಮಾಡುವ ಚೀನಾ, ಶೀಘ್ರದಲ್ಲೇ ದಿನಕ್ಕೆ ಬರೋಬ್ಬರಿ 140 ಲೀಟರ್‌ ಹಾಲು ಕೊಡಬಲ್ಲ ಸೂಪರ್‌ ಹಸು (ಸೂಪರ್‌ ಕೌ) ಸಿದ್ಧ ಮಾಡಿದ್ದಾರಂತೆ. ಕ್ಲೋನಿಂಗ್‌ ಅಥವಾ ಅಬೀಜ ಸಂತಾನೋತ್ಪತ್ತಿ ಮೂಲಕ ಈಗಾಗಲೇ ಮೂರು ಸೂಪರ್‌ ಹಸುಗಳನ್ನು ಸಿದ್ಧ ಮಾಡಿರುವುದಾಗಿ ಚೀನಾದ ವಿಜ್ಞಾನಿಗಳು ತಿಳಿಸಿದ್ದು, ಈ ದನಗಳು ದಿನಕ್ಕೆ ಕನಿಷ್ಠ 140 ಲೀಟರ್‌ ಹಾಲು ಕೊಡುತ್ತವೆಯಂತೆ!

ಚೀನಾದ ವಿಜ್ಞಾನಿಗಳು ಹೇಳುವ ಪ್ರಕಾರ ಅವರ ಸಿದ್ದ ಮಾಡಿರುವ ಈ ತಳಿಯ ದನಗಳು (ಸೂಪರ್‌ ಕೌ), ತಮ್ಮ ಇಡೀ ಜೀವಿತಾವಧಿಯಲ್ಲಿ 100 ಟನ್‌ ಹಾಲು ಕೊಡಲು ಶಕ್ತವಾಗಿರಲಿದೆಯಂತೆ. 100 ಟನ್‌ ಹಾಲು ಎಂದರೆ, 2 ಲಕ್ಷದ 83 ಸಾವಿರ ಲೀಟರ್‌ ಹಾಲು ಅನ್ನೋದು ನಿಮ್ಮ ಗಮನಕ್ಕಿರಲಿ.ಮಾಧ್ಯಮ ವರದಿಗಳ ಪ್ರಕಾರ, ಚೀನಾದ ವಿಜ್ಞಾನಿಗಳು ತಮ್ಮ 'ಸೂಪರ್ ಹಸು' ಸಂತಾನೋತ್ಪತ್ತಿಯನ್ನು ವಾಯುವ್ಯ ವಿಶ್ವವಿದ್ಯಾಲಯದಲ್ಲಿ ಮಾಡಿದ್ದಾರೆ. ಅವರು ಕಳೆದ ಎರಡು ತಿಂಗಳ ಹಿಂದೆ ನಿಂಗ್ಕ್ಸಿಯಾ ಪ್ರದೇಶದಲ್ಲಿ ಈ ಸೂಪರ್‌ ಕೌಗಳು ಜನಿಸಿವೆ ಎಂದು ಹೇಳಲಾಗುತ್ತಿದೆ. ಮತ್ತು, ಈಗ ಅಲ್ಲಿನ ವಿಜ್ಞಾನಿಗಳ ಗಮನ ಮುಂದಿನ 2 ವರ್ಷಗಳಲ್ಲಿ ಇಂತಹ 1000 ಹಸುಗಳನ್ನು ಉತ್ಪಾದನೆ ಮಾಡುವುದಾಗಿದೆ.

ಚೀನಾದ 'ಸೂಪರ್ ಕೌ' ಕುರಿತ ವರದಿಯಲ್ಲಿ, ಇವು ನೆದರ್‌ಲ್ಯಾಂಡ್‌ನಿಂದ ಬರುವ ಹೋಲ್‌ಸ್ಟೈನ್ ಫ್ರೈಸಿಯನ್ ಹಸುವಿನ ತದ್ರೂಪುಗಳಾಗಿವೆ ಎಂದು ಹೇಳಲಾಗಿದೆ. ಚೀನಾ ಈಗಾಗಲೇ 2017 ರಲ್ಲಿ ಕ್ಲೋನಿಂಗ್ ಮೂಲಕ ಹಸುಗಳನ್ನು ಉತ್ಪಾದಿಸಿದೆ. ಇತ್ತೀಚೆಗೆ, ವಾಯುವ್ಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೊಸ ರೀತಿಯ ಹಸುಗಳ ಸಂತಾನೋತ್ಪತ್ತಿಯನ್ನು ಮಾಡಿದ್ದಾರೆ.
ಚೀನಾ ಕೂಡ ಆರ್ಕ್ಟಿಕ್ ತೋಳವನ್ನು ಸಿದ್ಧ ಮಾಡಿತ್ತು: ಇನ್ನು ಪ್ರಾಣಿಗಳ ಕ್ಲೋನ್‌ ಮಾಡುವುದು ದನಗಳ ವಿಚಾರದಲ್ಲಿ ಮಾತ್ರವಲ್ಲ. ಚೀನಾ ತನ್ನ ದೇಶದಲ್ಲಿ ಇತರ ಪ್ರಾಣಿಗಳ ಕ್ಲೋನ್‌ ಅನ್ನೂ ಚೀನಾ ಮಾಡಿದೆ. ಕಳೆದ ವರ್ಷ, ಚೀನಾದ ವಿಜ್ಞಾನಿಗಳು ವಿಶ್ವದ ಮೊದಲ ಕ್ಲೋನ್ ಮಾಡಿದ ಆರ್ಕ್ಟಿಕ್ ತೋಳವನ್ನು ತಯಾರು ಮಾಡಿದ್ದರು.

ವಂದೇ ಭಾರತ್‌ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ

ವಿಷಕಾರಿ ಪ್ರಾಣಿಗಳು ಇಲ್ಲಿ ಆಹಾರ: ಮನುಷ್ಯ ವಿಷಕಾರಿ ಎಂದು ಪರಿಗಣಿಸುವ ಬಹುತೇಕ, ಪ್ರಾಣಿ ಹಾಗೂ ಕೀಟಗಳನ್ನು ಚೀನಾದ ಜನರು ಉತ್ಸಾಹದಿಂದ ತಿನ್ನುತ್ತಾರೆ. ಅದು ಹಾವು, ಬಾವಲಿ, ಪ್ಯಾಂಗೋಲಿನ್‌ ಇರಲಿ ಅಥವಾ ಇನ್ಯಾವುದೇ ಪ್ರಾಣಿಯೇ ಇರಲಿ. ಚೀನಾಕ್ಕೆ ಅವುಗಳು ಅಹಾರ ಮಾತ್ರ. ಇವುಗಳನ್ನು ಬಳಸಿಕೊಂಡ ರೆಸಿಪಿಗಳು ಚೀನಾದಲ್ಲಿಯೇ ತಯಾರಾಗುತ್ತವೆ.

ನಾನು ಪೂಜೆ-ಗೀಜೆ ಮಾಡುವ ವ್ಯಕ್ತಿಯಂತೆ ಕಾಣ್ತೀನಾ? ವಿರಾಟ್ ಕೊಹ್ಲಿ ನೀಡಿದ್ದ ಈ ಹಿಂದಿನ ಹೇಳಿಕೆ ಈಗ ವೈರಲ್‌..!

ಹಂದಿ ಕೂಡ ಚೀನಿಯರ ನೆಚ್ಚಿನ ಆಹಾರಗಳಲ್ಲಿ ಒಂದು. ಕೊರೋನಾ ವೈರಸ್‌ ಹರಡಿದಾಗ, ಅದು ಚೀನಾದ ಕೆಲವು ಸಮುದ್ರ ಆಹಾರದಿಂದಲೇ ಬಂದಿರಬಹುದು ಎನ್ನುವ ಅನುಮಾನಗಳು ವ್ಯಕ್ತವಾಗಿದ್ದವು. ಇನ್ನೊಂದು ವರದಿಯ ಪ್ರಕಾರ, ಚೀನಾದ ಕುಖ್ಯಾತ ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ವೈರಸ್‌ ತಯಾರಿಸಲಾಗಿತ್ತು ಎನ್ನಲಾಗಿದೆ.