Asianet Suvarna News Asianet Suvarna News

60 ವರ್ಷಗಳ ಬಳಿಕ ಮತ್ತೊಮ್ಮೆ ನ್ಲೂಕ್ಲಿಯರ್‌ ಟೆಸ್ಟ್‌ಗೆ ಸಜ್ಜಾಗ್ತಿದೆ ಚೀನಾ?

ಚೀನಾದ ಬಗ್ಗೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಸುದೀರ್ಘ ಸಮಯದ ನಂತರ ಚೀನಾ ಮತ್ತೊಮ್ಮೆ ಪರಮಾಣು ಅಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿರುವ ಲೋಪ್ ನೂರ್ ಪರಮಾಣು ಪರೀಕ್ಷಾ ಕೇಂದ್ರದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿವೆ.

China is going to conduct nuclear test again after 60 years shows satellite pictures san
Author
First Published Dec 23, 2023, 1:20 PM IST

ನವದೆಹಲಿ (ಡಿ.23): ಚೀನಾ ಮತ್ತೆ ಪರಮಾಣು ಅಸ್ತ್ರ ಪರೀಕ್ಷೆ ನಡೆಸಲಿದೆಯೇ? ಕೆಲವು ಉಪಗ್ರಹ ಫೋಟೋಗಳ ಪರೀಕ್ಷೆಯ ನಂತರ ಈ ಅನುಮಾನ ನಿಜ ಎಂದು ಹೇಳಲಾಗುತ್ತಿದೆ. ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿರುವ ಲೋಪ್ ನೂರ್ ನ್ಯೂಕ್ಲಿಯರ್ ಟೆಸ್ಟ್ ಫೆಸಿಲಿಟಿಯಲ್ಲಿ ಚಟುವಟಿಕೆಗಳು ನಡೆಯುತ್ತಿವೆ. ಚೀನಾ ಶೀಘ್ರದಲ್ಲೇ ಪರಮಾಣು ಪರೀಕ್ಷೆ ನಡೆಸಲು ಯೋಜಿಸುತ್ತಿದೆ ಎಂದು ಸ್ಯಾಟಲೈಟ್‌ ಚಿತ್ರಗಳ ಪರೀಕ್ಷೆಯ ಬಳಿಕ ತಿಳಿಸಲಾಗಿದೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಚೀನಾ ವೇಗವಾಗಿ ಬೆಳೆಯುತ್ತಿರುವ ಕ್ಷಿಪಣಿ ಶಕ್ತಿಯನ್ನು ಹೆಚ್ಚಿಸಲು ಕೆಲವು ಬ್ಯಾಲಿಸ್ಟಿಕ್, ಡ್ರೋನ್ ಮತ್ತು ಹಡಗು-ಉಡಾವಣಾ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಈ ವರದಿಯು ಈ ಹಿಂದೆ ಪೆಂಟಗನ್‌ಗಾಗಿ ಕೆಲಸ ಮಾಡಿದ ಗುಪ್ತಚರ ತಜ್ಞ ಡಾ. ರೆನೀ ಬೇಬಿಯಾರ್ಜ್ ನೀಡಿದ ಸಾಕ್ಷ್ಯವನ್ನು ಆಧರಿಸಿದೆ. ಲೋಪ್ ನೂರ್ ನ ಉಪಗ್ರಹ ಚಿತ್ರಗಳ ಅಧ್ಯಯನದಲ್ಲಿ ಹಲವು ವರ್ಷಗಳ ನಂತರ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸಾಕ್ಷ್ಯ ನೀಡಿದ್ದಾರೆ. 1964ರ ಅಕ್ಟೋಬರ್ 16 ರಂದು ಚೀನಾ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ಇದೇ ಫೆಸಿಲಿಟಿಯಲ್ಲಿ ನಡೆಸಿತ್ತು.

ವರದಿ ನಿರಾಕರಿಸಿದ ಚೀನಾ: ಚೀನಾ ನ್ಯೂಯಾರ್ಕ್‌ ಟೈಮ್ಸ್‌ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಮತ್ತು ಅದನ್ನು ಆಧಾರರಹಿತ ಎಂದು ಕರೆದಿದೆ. ಚೀನಾದ ಪರಮಾಣು ಪರೀಕ್ಷೆಯ ಸುದ್ದಿ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ 2020 ರಲ್ಲಿ ಸಹ, ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ ವರದಿಯು ಚೀನಾ ರಹಸ್ಯವಾಗಿ ಕೆಳಮಟ್ಟದ ಭೂಗತ ಪರಮಾಣು ಪರೀಕ್ಷಾ ಸ್ಫೋಟಗಳನ್ನು ನಡೆಸಿರಬಹುದು ಎಂದು ಹೇಳಿತ್ತು. ಆ ಸಮಯದಲ್ಲಿ, ಪರಮಾಣು ಪರೀಕ್ಷೆಗಳು ಮತ್ತು ಶಸ್ತ್ರಾಸ್ತ್ರ ನಿಯಂತ್ರಣವನ್ನು ನಿಷೇಧಿಸುವ ತನ್ನ ಒಪ್ಪಂದದ ಬದ್ಧತೆಗಳನ್ನು ಸಕ್ರಿಯವಾಗಿ ಪೂರೈಸಲು ಬದ್ಧವಾಗಿದೆ ಎಂದು ಚೀನಾ ಹೇಳಿದೆ. ಅಮೆರಿಕದ ಸುಳ್ಳು ಆರೋಪಗಳನ್ನು ತಳ್ಳಿಹಾಕಲು ಯೋಗ್ಯವಾಗಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿತ್ತು.

2017 ರ ವರೆಗೆ ಇಲ್ಲಿ ಕೆಲವು ಕಟ್ಟಡಗಳು ಇದ್ದವು ಎಂದು ವರದಿ ಹೇಳಿದೆ. ಈಗ ಅತ್ಯಾಧುನಿಕ ಕಟ್ಟಡಗಳಾಗಿ ಪರಿವರ್ತಿಸಲಾಗಿದೆ. ಇದರ ಹೊಸ ರಚನೆಗಳು ಮಣ್ಣಿನ ರಾಶಿಗಳು ಮತ್ತು ಸಿಡಿಮದ್ದುಗಳನ್ನು ತಡೆಯುವ ಬಂಕರ್‌ಗಳನ್ನು ಒಳಗೊಂಡಿವೆ, ಇದು ಸ್ಫೋಟಕಗಳಿಂದ ರಕ್ಷಿಸುತ್ತದೆ. ಅಲ್ಲದೇ ಆಳವಾದ ಬಾವಿ ತೋಡಲು ಸಿದ್ಧತೆ ನಡೆಸಲಾಗುತ್ತಿದೆ.

ಉದ್ಯೋಗಿಗಳಿಗೆ ಬೋನಸ್‌ ನೀಡಲು ಚೀನಾ ಕಂಪನಿಯ ಸ್ಪೆಷಲ್‌ ನೀತಿ!

2028 ರ ವೇಳೆಗೆ ಚೀನಾ ಶಸ್ತ್ರಾಸ್ತ್ರಗಳ ಸಂಗ್ರಹ: ಚೀನಾವು ದಶಕದ ಹಿಂದೆ 50 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿತ್ತು, ಆದರೆ 2028 ರ ವೇಳೆಗೆ 1,000 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳನ್ನು ನಿಯೋಜಿಸಲಿದೆ, ಇದರಲ್ಲಿ ಕನಿಷ್ಠ 507 ಪರಮಾಣು ಸಾಮರ್ಥ್ಯದ ಲಾಂಚರ್‌ಗಳು ಸೇರಿವೆ ಎಂದು ಮಾಂಟೆರಿಯಲ್ಲಿರುವ ಮಿಡ್ಲ್‌ಬರಿ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ವರದಿಯ ಪ್ರಕಾರ. ಈ ದಿನಗಳಲ್ಲಿ, ಅಮೆರಿಕ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸೂಕ್ಷ್ಮ ಅವಧಿಯಲ್ಲಿವೆ. ಅಧ್ಯಕ್ಷ ಜೋ ಬಿಡೆನ್ ಅವರು ಹೆಚ್ಚುತ್ತಿರುವ ವಿವಾದಾತ್ಮಕ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಕಳೆದ ತಿಂಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಇದೇ ವಿಚಾರವಾಗಿ ಭೇಟಿಯಾಗಿದ್ದರು.

ಚೀನಾ, ಅಮೆರಿಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಕೋವಿಡ್‌ ರೂಪಾಂತರಿ ಕೇರಳದಲ್ಲಿ ಪತ್ತೆ; ದೇಶದಲ್ಲಿ ಮತ್ತೆ ಆತಂಕ ಶುರು!

Follow Us:
Download App:
  • android
  • ios