Asianet Suvarna News Asianet Suvarna News

ಹೌತಿ ಉಗ್ರರ ಶಸ್ತ್ರ ಬಲ ಹೆಚ್ಚಿಸುತ್ತಿದೆ ಚೀನಾ?; 'ಸೀ ಡ್ರೋನ್' ದಾಳಿಗೆ ತತ್ತರಿಸಿದ ಕೆಂಪು ಸಮುದ್ರ!

ಹೌತಿ ಉಗ್ರರು ಇದೇ ಮೊದಲ ಬಾರಿಗೆ ಸೀ ಡ್ರೋನ್ ಬಳಸಿದ್ದು, ಅವರ ಶಸ್ತ್ರ ಸಂಗ್ರಹಣೆ ಬಗ್ಗೆ ಆತಂಕ ಮೂಡಿದೆ ಎಂದು ಬ್ರಿಟಿಷ್ ಭದ್ರತಾ ಸಂಸ್ಥೆ 'ಆಂಬ್ರೆ' ಹೇಳಿದೆ. ಕಡಲ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಆಂಬ್ರೆ ಸಂಸ್ಥೆ, ಗುಪ್ತಚರ, ಕಡಲ್ಗಳ್ಳತನ ಮತ್ತು ಉಗ್ರ ದಾಳಿಯ ಬೆದರಿಕೆಗಳಿಂದ ಹಡಗುಗಳನ್ನು ರಕ್ಷಿಸಲು ನೆರವಾಗುತ್ತದೆ.

China increasing the arms of Houthi terrorist use sea drone attack vessels as US Aim red sea rav
Author
First Published Jun 17, 2024, 5:42 PM IST

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೌತಿ ಬಂಡುಕೋರರ ಅಟ್ಟಹಾಸ ಮುಂದುವರೆದಿದ್ದು, ಗ್ರೀಸ್ ಒಡೆತನದ ಕಲ್ಲಿದ್ದಲು ಹಡಗಿನ ಮೇಲೆ ರಿಮೋಟ್-ನಿಯಂತ್ರಿತ 'ಸೀ ಡ್ರೋನ್' ಬಳಸಿ ದಾಳಿ ಮಾಡಲಾಗಿದೆ. ಈ ಕುರಿತು ಅಮೇರಿಕಾದ ಗುಪ್ತಚರ ವರದಿಯನ್ನು ಉಲ್ಲೇಖಿಸಿರುವ ವಾಲ್ ಸ್ಟ್ರೀಟ್ ಜರ್ನಲ್‌, ಹೌತಿ ಉಗ್ರರು ಸೀ ಡ್ರೋನ್ ಬಳಸಿ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆಸಿರುವುದು ಇದೇ ಮೊದಲು ಎಂದು ಹೇಳಿದೆ.

ಕೆಂಪು ಸಮುದ್ರ(red sea)ದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಬೆಂಬಲಿತ ಹೌತಿ ಉಗ್ರರು(Houthi terrorist attack) ನಿರಂತರವಾಗಿ ದಾಳಿ ನಡೆಸುತ್ತಿದ್ದು, ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳ ನೌಕಾ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಿದೆ. ಇದೀಗ ಸೀ ಡ್ರೋನ್ ಶಸ್ತ್ರ(Sea drone weapon) ಕೂಡ ಹೌತಿ ಉಗ್ರರ ಕೈಗೆ ಸಿಕ್ಕಿದ್ದು, ಇದರಲ್ಲಿ ಚೀನಾದ ಪಾತ್ರದ ಬಗ್ಗೆ ಅನುಮಾನಗಳು ಮೂಡಿವೆ.

ಸೀ ಡ್ರೋನ್ ನೀರಿನ ಮೇಲೆ ಮತ್ತು ನೀರಿನೊಳಗೆ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿವೆ. ಈ ಏರಿಯಲ್ ವೆಹಿಕಲ್ ಗಳನ್ನು ಕಣ್ಗಾವಲು, ವಿಚಕ್ಷಣ, ಮತ್ತು ಮಿಲಿಟರಿ ಉಪಕರಣಗಳ ಸಾಗಣೆಯಲ್ಲೂ ಬಳಸಲಾಗುತ್ತದೆ. ಸಮುದ್ರದಲ್ಲಿ ದೂರದಿಂದಲೇ ಹಡಗುಗಳ ಮೇಲೆ ದಾಳಿ ಮಾಡಲು ಈ ವೈಮಾನಿಕ ಡ್ರೋನ್ ನೆರವಾಗುತ್ತವೆ.

 

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

ಕಳೆದ ಜೂನ್ 15 (ಶನಿವಾರ) ರಂದು ಉಕ್ರೇನ್ ಮೂಲದ ವಾಣಿಜ್ಯ ಹಡಗೊಂದರ ಮೇಲೆ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದರು. ಕ್ಷಿಪಣಿ ದಾಳಿಯಿಂದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಸಿಬ್ಬಂದಿಯು ಅನಿವಾರ್ಯವಾಗಿ ಹಡಗನ್ನು ತ್ಯಜಿಸಬೇಕಾಗಿ ಬಂತು ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದಲ್ಲಿ ಅಮೇರಿಕನ್ ಮಿಲಿಟರಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡುವ 'ಎಸ್ ಸೆಂಟ್ರಲ್ ಕಮಾಂಡ್', ಹೌತಿ ಉಗ್ರರ ಬಳಿ ಇದ್ದ ಹಲವಾರು ಸ್ಫೋಟಕ ಸಮುದ್ರ ಸಾಧನಗಳು, ವೈಮಾನಿಕ ಡ್ರೋನ್ ಮತ್ತು ಕಡಲ ತೀರದ ರೆಡಾರ್‌ಗಳನ್ನು ನಾಶಪಡಿಸಿಡಿದೆ. ಆದಾಗ್ಯೂ, ಹೌತಿಗಳ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ.

ಕಳೆದ ಅಕ್ಟೋಬರ್ 7ರಂದು ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಗಾಜಾಪಟ್ಟಿ ಮೇಲೆ ದಾಳಿ ಮಾಡಿತು. ಇದಾದ ಬಳಿಕ ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಅಟ್ಟಹಾಸ ಮಿತಿ ಮೀರಿದ್ದು, ವಾಣಿಜ್ಯ ಹಡಗುಗಳ ಮೇಲೆ ನಿರಂತರವಾಗಿ ಕ್ಷಿಪಣಿ ಮತ್ತು ಸೀ ಡ್ರೋನ್ ದಾಳಿ ನಡೆಸಲಾಗುತ್ತಿದೆ.

ಇದಕ್ಕೆ ಪ್ರತಿಯಾಗಿ ಅಮೇರಿಕಾ ನೇತೃತ್ವದ ನೌಕಾ ಒಕ್ಕೂಟ ಕೂಡ ಹೌತಿ ಬಂಡುಕೋರರ ಮೇಲೆ ದಾಳಿ ನಡೆಸುತ್ತಿದ್ದು, ಪ್ರಮುಖವಾಗಿ ಯೆಮೆನ್‌ನ ಉಡಾವಣಾ ತಾಣಗಳನ್ನು ನಾಶಪಡಿಸಲಾಗಿದೆ. ಸುಗಮ ಕಡಲ ಸಂಚಾರಕ್ಕಾಗಿ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಅಮೇರಿಕಾ ನೇತೃತ್ವದ ನೌಕಾ ಒಕ್ಕೂಟ ಹೇಳಿದೆ.

ಹೌತಿ ಉಗ್ರರು ಇದೇ ಮೊದಲ ಬಾರಿಗೆ ಸೀ ಡ್ರೋನ್ ಬಳಸಿದ್ದು, ಅವರ ಶಸ್ತ್ರ ಸಂಗ್ರಹಣೆ ಬಗ್ಗೆ ಆತಂಕ ಮೂಡಿದೆ ಎಂದು ಬ್ರಿಟಿಷ್ ಭದ್ರತಾ ಸಂಸ್ಥೆ 'ಆಂಬ್ರೆ' ಹೇಳಿದೆ. ಕಡಲ ಭದ್ರತೆಯಲ್ಲಿ ಪರಿಣತಿ ಹೊಂದಿರುವ ಆಂಬ್ರೆ ಸಂಸ್ಥೆ, ಗುಪ್ತಚರ, ಕಡಲ್ಗಳ್ಳತನ ಮತ್ತು ಉಗ್ರ ದಾಳಿಯ ಬೆದರಿಕೆಗಳಿಂದ ಹಡಗುಗಳನ್ನು ರಕ್ಷಿಸಲು ನೆರವಾಗುತ್ತದೆ.

'ಸೆಂಟ್‌ಕಾಮ್' ವರದಿ ಪ್ರಕಾರ ಹೌತಿ ಉಗ್ರರ ಕ್ಷಿಪಣಿ ದಾಳಿಯಿಂದ ಉಕ್ರೇನ್ ಮೂಲದ 'ವೆರ್ಬೆನಾ' ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಓರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅದೇ ರೀತಿ ಸೀ ಡ್ರೋನ್ ದಾಳಿಯಿಂದ ಗ್ರೀಕ್ ಒಡೆತನದ 'ಟ್ಯೂಟರ್'  ಹಡಗಿನ ಎಂಜಿನ್ ರೂಮ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. 'ಟ್ಯೂಟರ್' ಹಡಗಿನ ಸಿಬ್ಬಂದಿಯೋರ್ವ ಕಾಣೆಯಾಗಿದ್ದಾನೆ ಎಂದು ಸೆಂಟ್‌ಕಾಮ್ ವರದಿ ಮಾಡಿದೆ.

ಈ ಕುರಿತು ಮಾತನಾಡಿರುವ 'ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್‌' ಪ್ರಧಾನ ಕಾರ್ಯದರ್ಶಿ ಆರ್ಸೆನಿಯೊ ಡೊಮಿಂಗುಜ್, ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳಕ್ಕೆ ಕಡಿವಾಣ ಹಾಕುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಈ ಅಪಾಯಕಾರಿ ಬೆಳವಣಿಗೆಗಳು ಜಾಗತಿಕ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಆರ್ಸೆನಿಯೊ ಡೊಮಿಂಗುಜ್ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 20,000 ಟನ್ ರಸಗೊಬ್ಬರವನ್ನು ಹೊತ್ತ ಬ್ರಿಟಿಷ್ ಒಡೆತನದ ಹಡಗು, ಹೌತಿ ಉಗ್ರರ ದಾಳಿಯಿಂದ ಸಮುದ್ರದಲ್ಲಿ ಮುಳುಗಿದೆ. ಕಳೆದ ವಾರಾಂತ್ಯದಲ್ಲಿ ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ದಾಳಿಗಳು ಹೆಚ್ಚಿರುವುದು ಆಂತಕಕಾರಿ ಸಂಗತಿ ಎಂದು 'ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್' ಹೇಳಿದೆ. 

 

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಕಳೆದ ಜನವರಿಯಿಂದಲೇ ಹೌತಿ ಶಸ್ತ್ರಾಗಾರಗಳ ಮೇಲೆ ದಾಳಿ ನಡೆಸುತ್ತಿವೆ. ಇರಾನ್‌ನಿಂದ ಬರುವ ಮಿಲಿಟರಿ ಉಪಕರಣಗಳ ಸಾಗಾಣೆಯನ್ನು ತಡೆಹಿಡಿಯಲಾಗಿದೆ. ಆದರೆ ಇರಾನ್‌ನಿಂದ ಅಗತ್ಯ ಮಿಲಿಟರಿ ಉಪಕರಣಗಳನ್ನು ಪಡೆಯಲು ಹೌತಿಗಳು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಪೂರ್ವ ಆಫ್ರಿಕಾದ ಜಿಬೌಟಿ ಮೂಲಕ ಶಸ್ತ್ರಾಸ್ತ್ರಗಳ ಸಾಗಾಣಿಕೆಗೆ ಹೌತಿ ಉಗ್ರರು ಯೋಜನೆ ರೂಪಿಸಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ಸಾಗಾಣಿಕೆಗೆ  ನಾಗರಿಕ ಹಡಗುಗಳನ್ನು ಬಳಸುತ್ತಿರುವ ಸಂಗತಿ ಗೊತ್ತಾಗಿದೆ. ಇಷ್ಟೇ ಅಲ್ಲದೇ ಹೌತಿ ಉಗ್ರರು ಲೆಬನಾನ್ ಮಾರ್ಗವಾಗಿ ಚೀನಾದಿಂದ ಡ್ರೋನ್ ಬಿಡಿ ಭಾಗಗಳನ್ನು ಖರೀದಿಸುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Latest Videos
Follow Us:
Download App:
  • android
  • ios