ಬೀಜಿಂಗ್(ಜು.01): ಬೀಜಿಂಗ್‌: ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಜತೆ ಗಡಿ ಕ್ಯಾತೆ ಹಾಗೂ ಜಗತ್ತಿಗೇ ಕೊರೋನಾ ಹಬ್ಬಿಸಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ತನ್ನ ದೇಶದಲ್ಲಿರುವ ಮುಸ್ಲಿಮರ ಸಂಖ್ಯೆ ಕುಗ್ಗಿಸಲು ಬಲವಂತದ ಗರ್ಭಪಾತ, ಸಂತಾನಹರಣ, ಕಾಪರ್‌ ಟಿ ಅಳವಡಿಕೆ, ಪೋಷಕರನ್ನು ಬಂಧನ ಕೇಂದ್ರಕ್ಕೆ ರವಾನಿಸುವಂತಹ ಕೆಲಸ ಮಾಡುತ್ತಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮುಸ್ಲಿಮರ ಜನಸಂಖ್ಯೆಯನ್ನು ಕಡಿಮೆ ಮಾಡಲು ಉಯಿಗುರ್‌ ಹಾಗೂ ಇನ್ನಿತರೆ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಚೀನಾ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ ಇದೇ ವೇಳೆ ಬಹುಸಂಖ್ಯಾತ ಹ್ಯಾನ್‌ ಸಮುದಾಯಕ್ಕೆ ಹೆಚ್ಚಿನ ಮಕ್ಕಳನ್ನು ಹಡೆಯಲು ಪ್ರೋತ್ಸಾಹ ನೀಡುತ್ತಿದೆ ಎಂದು ಅಸೋಸಿಯೇಟೆಡ್‌ ಪ್ರೆಸ್‌ ಸುದ್ದಿಸಂಸ್ಥೆ ವರದಿ ಮಾಡಿದ್ದು, ಸಂಚಲನಕ್ಕೆ ಕಾರಣವಾಗಿದೆ. ಈಗಾಗಲೇ ಜಗತ್ತಿನ ದೃಷ್ಟಿಯಲ್ಲಿ ಕುಖ್ಯಾತಿಗೀಡಾಗಿರುವ ಚೀನಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗತೊಡಗಿದೆ.

ಬ್ಯಾನ್ ನಂತರ ಟಿಕ್ ಟಾಕ್ ಮೊದಲ ಪ್ರತಿಕ್ರಿಯೆ, ಅಯ್ಯಪ್ಪಾ!

ಚೀನಾದ ಪಶ್ಚಿಮ ಭಾಗದಲ್ಲಿರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರ ಕಾರಣದಿಂದ ಇತರೆಡೆಗಿಂತ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. ಇದನ್ನು ತಡೆಯಲು ಯೋಜನೆ ರೂಪಿಸಿದ ಚೀನಾ, ಮಹಿಳೆಯರಿಗೆ ನಿಯಮಿತವಾಗಿ ಗರ್ಭಧಾರಣೆ ತಪಾಸಣೆ ಮಾಡಿಸುವುದು, ಕಾಪರ್‌ ಟಿ ಅಳವಡಿಸುವುದು, ಸಂತಾನಹರಣ ಮಾಡುವುದು, ಹೆಚ್ಚು ಮಕ್ಕಳನ್ನು ಹೆತ್ತು ಮತ್ತೆ ಗರ್ಭವತಿಯಾಗಿದ್ದವರಿಗೆ ಗರ್ಭಪಾತ ಮಾಡಿಸುತ್ತಿದೆ. 2016ರಿಂದ ಸಹಸ್ರಾರು ಮಂದಿಗೆ ಈ ರೀತಿಯ ಕಿರುಕುಳ ನೀಡಿದೆ. ಇದೊಂದು ಜನಸಂಖ್ಯಾತ ನರಮೇಧ ಎಂದು ತಜ್ಞರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಹೆಚ್ಚು ಮಕ್ಕಳನ್ನು ಹಡೆದ ಪೋಷಕರನ್ನು ಸಕಾರಣವಿಲ್ಲದೇ ಬಂಧನ ಕೇಂದ್ರಕ್ಕೆ ಕಳುಹಿಸುವುದು, ಭಾರಿ ಮೊತ್ತದ ದಂಡ ವಿಧಿಸುವಂತಹ ಕೆಲಸವನ್ನು ಮಾಡಿದೆ ಎಂದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರನ್ನೇ ವರದಿ ಉಲ್ಲೇಖಿಸಿದೆ.

ಕಚೇರಿ ಅವಧಿಯಲ್ಲಿ ನಮಾಜ್ ಮಾಡುವಂತಿಲ್ಲ, ಮುಸ್ಲಿಂ ಉದ್ಯೋಗಿಗಳಿಗೆ ಚೀನಾ ಕಂಪನಿ ನಿರ್ಬಂಧ!

ಈ ‘ಜನಸಂಖ್ಯಾ ನರಮೇಧ’ದಿಂದಾಗಿ 2015ರಿಂದ 2018ರ ಅವಧಿಯಲ್ಲಿ ಉಯಿಗುರ್‌ ಸಮುದಾಯ ವಾಸಿಸುವ ಪ್ರದೇಶಗಳಲ್ಲಿ ಜನಸಂಖ್ಯೆ ಶೇ.60ರಷ್ಟುಕುಸಿದಿದೆ. ಇಡೀ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಒಂದು ವರ್ಷದಲ್ಲೇ ಶೇ.24ರಷ್ಟುಜನಸಂಖ್ಯೆ ಇಳಿದಿದೆ. ಆದರೆ ದೇಶದಲ್ಲಿ ಸರಾಸರಿ ಕುಸಿತ ಶೇ.4.2ರಷ್ಟಿದೆ ಎಂದು ಅಂಕಿ-ಅಂಶ ಸಮೇತ ವಿವರಿಸಿದೆ.