Asianet Suvarna News Asianet Suvarna News

ಮಸೀದಿ ಕೆಡವಿ ಅದೇ ಜಾಗದಲ್ಲಿ ಚೀನಾ ಪಬ್ಲಿಕ್ ಟಾಯ್ಲೆಟ್; ಪಾಕ್ ಬಾಯಿ ಬಂದ್!

ಮಸೀದಿ ಕೆಡವಿ ಶೌಚಾಲಯ ನಿರ್ಮಾಣ/ ನಿವಾಸಿಗಳಿಗೆ ಮತ್ತು ಪ್ರವಾಸಿಗರಿಗೆಂದು ಟಾಯ್ಲೆಟ್/ ಚೀನಾದಲ್ಲಿ  ನಡೆದ ಘಟನೆ ಬಗ್ಗೆ ತುಟಿ ಬಿಚ್ಚದ ಪಾಕಿಸ್ತಾನ

China constructs toilet after demolishing Uyghur mosque in Xinjiang
Author
Bengaluru, First Published Aug 18, 2020, 6:18 PM IST

ಬೀಜಿಂಗ್(ಆ. 18)  ಮಸೀದಿಯನ್ನು ಕೆಡವಿದ್ದ ಜಾಗದಲ್ಲಿ ಚೀನಾ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದೆ.  ಕ್ಸಿನ್‌ಜಿಯಾಂಗ್ ಉಯಿಘರ್ ನ ಅತುಶ್ ಪ್ರದೇಶದಲ್ಲಿ ಚೀನಾ ಈ ಕೆಲಸ ಮಾಡಿದೆ. ಪಾಕಿಸ್ತಾನ ಇಲ್ಲಿವರೆಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. 

ಇದು ಉಯಿಘರ್ ಪ್ರದೇಶದಲ್ಲಿರುವ ಮುಸ್ಲಿಂಮರ ಹತ್ತಿಕ್ಕಲು ಕಮ್ಯೂನಿಸ್ಟ್ ಪಾರ್ಟಿ ಮಾಡಿದ ಕೆಲಸ ಎಂದು ಹೇಳಲಾಗಿದೆ.  ಆದರೆ ಪಾಕಿಸ್ತಾನ ಮಾತ್ರ ತನಗೆ ಏನೂ ಗೊತ್ತಿಲ್ಲದಂತೆ ಇದೆ.

ಎಚ್ಚರಿಕೆ ನಂತರ ಮೋದಿ ಜತೆ ಮಾತಾಡ್ತೆನೆ ಎಂದ ಚೀನಾ

 ಚೀನಾದಲ್ಲಿ 22  ಮಿಲಿಯನ್ ಮುಸ್ಲಿಮರು ವಾಸವಿದ್ದಾರೆ. ಇದರಲ್ಲಿ  11  ಮಿಲಿಯನ್ ಜನ ಉಯಿಘರ್ ಮುಸ್ಲಿಮರು. ಚೀನಾ ಮುಸ್ಲಿಮರ ಸಂಸ್ಕೃತಿ ಮತ್ತು ಪರಂಪರೆ ಮೇಲೆ ದಾಳಿ ಮಾಡುತ್ತಲೇ ಇದೆ. ಆದರೆ  ಇಸ್ಲಾಂ ಬಗ್ಗೆ ಸದಾ ಹೋರಾಟ  ಮಾಡುತ್ತೇನೆ ಎನ್ನುವ ಪಾಕಿಸ್ತಾನ ಮಾತ್ರ  ಅನಿವಾರ್ಯವಾಗಿ ಸುಮ್ಮನೆ ಕುಳಿತಿದೆ.

1966-76  ರ ನಡುವಿನ ಅವಧಿಯಲ್ಲಿ ಚೀನಾದ ಅನೇಕ ಮಸೀದಿಗಳು ಧ್ವಂಸವಾಗಿದ್ದವು.  ಸಾಂಸ್ಕೃತಿಕ  ಕ್ರಾಂತಿ ಹೆಸರಿನಲ್ಲಿ ದಬ್ಬಾಳಿಕೆ ನಡೆದಿತ್ತು.

ಈಗ 2016ರಿಂದ ಮತ್ತೆ ಇಂಥದ್ದೆ ಬೆಳವಣಿಗೆ ನಡೆಯುತ್ತಿದೆ.  ಮಸೀದಿ ಕೆಡವಿ ಟಾಯ್ಲೆಟ್ ಕಟ್ಟಿರುವ ಜಾಗದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸ್ಥಳೀಯರುಯ ಹೇಳುವಂತೆ ಅಲ್ಲಿ ಶೌಚಾಲಯ ಅಗತ್ಯ ಇರಲೇ ಇಲ್ಲ.  ಎಲ್ಲರ ಮನೆಯಲ್ಲಿಯೂ ಶೌಚಾಲಯ ಇದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ತೀರಾ ಕಡಿಮೆ ಎಂದಿದ್ದಾರೆ.

ಚೀನಾದಲ್ಲಿ ಇದು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಯುತ್ತಿರುವ ಮೊದಲ ಪ್ರಕರಣ ಏನಲ್ಲ. ಸ್ಥಳೀಯ ಮುಸ್ಲಿಂ ಸಂಘಟನೆಗಳು ನ್ಯಾಯಕ್ಕಾಗಿ ಆಗ್ರಹ ಮಾಡಿದ್ದರೂ ಅಲ್ಲಿರುವುದು ಕಮ್ಯೂನಿಸ್ಟ್ ಸರ್ಕಾರ! ಭಾರತದಲ್ಲಿ ರಾಮಮಂದಿರ ವಿಚಾರವನ್ನು ಮಾತನಾಡಿದ್ದ ಪಾಕಿಸ್ತಾನ ಮಾತ್ರ ಚೀನಾ ಎದುರು ಸೈಲಂಟಾಗಿ ಕುಳಿತಿದೆ.

Follow Us:
Download App:
  • android
  • ios