Asianet Suvarna News Asianet Suvarna News

ಟಿಬೆಟ್‌ ಹೆಸರೇ ಬದಲಿಸಿ ‘ಕ್ಸಿ ಜಾಂಗ್‌’ ಮಾಡಿದ ಚೀನಾ ಸರ್ಕಾರ!

ಬಹಳ ವರ್ಷಗಳ ಹಿಂದೆಯೇ ಟಿಬೆಟ್‌ ದೇಶವನ್ನು ವಶಪಡಿಸಿಕೊಂಡು ತನ್ನೊಳಗೆ ವಿಲೀನ ಮಾಡಿಕೊಂಡಿರುವ ಚೀನಾ, ಇದೀಗ ಟಿಬೆಟ್‌ನ ಹೆಸರನ್ನು ‘ಕ್ಸಿ ಜಾಂಗ್‌’ ಎಂದು ಬದಲಿಸಿದೆ ಎಂದು ಹೇಳಲಾಗುತ್ತಿದೆ.

China changed the name of Tibet as a Xizang gow
Author
First Published Dec 11, 2023, 10:01 AM IST

ಬೀಜಿಂಗ್‌ (ಡಿ.11): ಟಿಬೆಟ್‌ ಮೇಲಿನ ತನ್ನ ಆಕ್ರಮಣವನ್ನು ಮತ್ತಷ್ಟು ಮುಂದುವರೆಸಿರುವ ಚೀನಾ ಸರ್ಕಾರ, ಇದೀಗ ಟಿಬೆಟ್ ಹೆಸರನ್ನೇ ಬದಲಾಯಿಸಿದೆ. ಬಹಳ ವರ್ಷಗಳಿಂದಲೂ ಟಿಬೆಟ್‌ ಮೇಲೆ ನಿಯಂತ್ರಣ ಸಾಧಿಸಿದ್ದರೂ ಟಿಬೆಟ್‌ ಕುರಿತ ಮಾಹಿತಿ ನೀಡುವಾಗ ಟಿಬೆಟ್‌ ಎಂದೇ ಪ್ರಸ್ತಾಪಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಟಿಬೆಟ್‌ ಕುರಿತ ಶ್ವೇತಪತ್ರದಲ್ಲಿ ಟಿಬೆಟ್‌ನ ಹೆಸರಿನ ಇಂಗ್ಲಿಷ್‌ ಭಾವಾನುವಾದ ಕ್ಸಿ ಜಾಂಗ್‌ ಎಂದು ಪ್ರಸ್ತಾಪಿಸಲಾಗಿದೆ. ಈ ಮೂಲಕ ಟಿಬೆಟ್‌ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಹುನ್ನಾರ ನಡೆಸಿದೆ ಎನ್ನಲಾಗಿದೆ.

ಫೇಮಸ್‌ ಸಿನೆಮಾ ರೈಟರ್‌ ಆಗೋಕು ಮುಂಚೆ ವೇಶ್ಯೆ, ಬಾರ್ ಡ್ಯಾನ್ಸರ್ ಆಗಿದ್ದ ಈಕೆಯ ಕಥೆಯೇ ಸಿನೆಮಾವಾಗಿ ಹಿಟ್ ಆಯ್ತು!

ಚೀನಾ ಈ ಹೆಸರನ್ನು ಶ್ವೇತಪತ್ರಗಳಲ್ಲಿ ಬಳಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾಧ್ಯಮಗಳೂ ಕೂಡ ಅದನ್ನೇ ಬಳಸಲು ಪ್ರಾರಂಭಿಸಿದೆ. ಇದನ್ನು ಟಿಬೆಟ್‌ನ ರಾಜಕೀಯ ಮುಖಂಡರು ಚೀನಾ ಸರ್ಕಾರದ ವರ್ತನೆಯನ್ನು ಖಂಡಿಸಿದ್ದು, ಹೆಸರು ಬದಲಿಸುವ ಮೂಲಕ ತಮ್ಮ ಅಸ್ಮಿತೆಯನ್ನೇ ಹೊಸಕಿ ಹಾಕಲು ಚೀನಾ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

ವಿನೋದ್‌ ರಾಜ್ ಪುತ್ರನ ಕನ್ನಡ ಸ್ಪಷ್ಟತೆ, ಲೀಲಾವತಿಯವರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ ಮೊಮ್ಮಗ

 ಟಿಬೆಟಿಯನ್ನರ ಪ್ರಾದೇಶಿಕವಾದ ಬೌದ್ಧ ಧರ್ಮದ ಪಂಥವನ್ನ ಅನುಸರಿಸುತ್ತಾರೆ. ಆದರೆ ಚೀನಾದ ಬೌದ್ಧ ಧರ್ಮ ಕಮ್ಯುನಿಸಂನ ಪ್ರಭಾವಕ್ಕೆ ಒಳಗಾಗಿ, ಮಾವೋ ಅವರ ಸಂಪೂರ್ಣ ಕ್ರಾಂತಿಗೆ ಬಲಿಯಾಗಿ, ತನ್ನತನವನ್ನು ಕಳೆದುಕೊಂಡು ಸಾಮ್ರಾಜ್ಯಶಾಹಿಯಾಗಿದೆ. ಇದಕ್ಕೆ ಸದಾ ಟಿಬೆಟ್‌ನ ಮೇಲೆ ಕಣ್ಣು. ಟಿಬೆಟ್‌ ಅನ್ನು ಆಕ್ರಮಿಸಿದರೆ ಅಲ್ಲಿಂದ ಭಾರತದ ಮೇಲೂ ಕಣ್ಣಿಡುವುದು ಸುಲಭ ಎಂಬುದು ಚೀನಾದ ಯೋಚನೆ.

Follow Us:
Download App:
  • android
  • ios