Asianet Suvarna News Asianet Suvarna News

ಪಾಕ್‌ ಮೂಲದ ಭಾರತದ Most Wanted Terrorist ಅನ್ನು ಕಪ್ಪು ಪಟ್ಟಿಗೆ ಸೇರಿಸುವ ಮನವಿಗೆ ಚೀನಾ ಮತ್ತೆ ನಿರ್ಬಂಧ

26/11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ ಸಾಜಿದ್‌ ಮೀರ್‌ನನ್ನು ಕಪ್ಪು ಪಟ್ಟಿಗೆ ಸೇರಿಸುವ ಅಮೆರಿಕ, ಭಾರತದ ಪ್ರಸ್ತಾವನೆಗೆ ಚೀನಾ ಮತ್ತೆ ನಿರ್ಬಂಧ ವಿಧಿಸಿದೆ. 

china blocks proposal at un to blacklist pak based 26 11 lashkar handler
Author
First Published Sep 17, 2022, 5:21 PM IST

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮತ್ತು 2008 ರ ಮುಂಬೈ ದಾಳಿಯ ಪ್ರಮುಖ ಹ್ಯಾಂಡ್ಲರ್‌ ಆದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (Lashkar - E - Taiba) (ಎಲ್‌ಇಟಿ) ಉಗ್ರಗಾಮಿ ಸಾಜಿದ್ ಮೀರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ (United Nations) ಅಮೆರಿಕ ಮತ್ತು ಭಾರತ ಮಾಡಿದ ಪ್ರಸ್ತಾಪವನ್ನು ಚೀನಾ ತಡೆಹಿಡಿದಿದೆ. ಇನ್ನು, ಕಳೆದ 4 ತಿಂಗಳೊಳಗೆ ಚೀನಾ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳುತ್ತಿರುವುದು ಇದು ಮೂರನೇ ಬಾರಿ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (United Nations Security Council) 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಸಾಜಿದ್‌ ಮೀರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಕಪ್ಪುಪಟ್ಟಿಗೆ ಸೇರಿಸಲು ಮತ್ತು ಆತನ ಸ್ವತ್ತುಗಳನ್ನು ಫ್ರೀಜ್ ಮಾಡಲು ಹಾಗೂ ಪ್ರಯಾಣ ನಿಷೇಧ, ಶಸ್ತ್ರಾಸ್ತ್ರ ನಿರ್ಬಂಧ ಮಾಡಲು ಅಮೆರಿಕ ಪ್ರಸ್ತಾಪವನ್ನು ಸಲ್ಲಿಸಿತ್ತು. ಮತ್ತು ಭಾರತವು ಸಹ- ಈ ನಿಯೋಜಿತ ಪ್ರಸ್ತಾವನೆಗೆ ಬೆಂಬಲ ನೀಡಿತ್ತು. ಆದರೆ, ಈ ಪ್ರಸ್ತಾವನೆಗೆ ಬೀಜಿಂಗ್ ಸರ್ಕಾರ ಗುರುವಾರ ತಡೆಹಿಡಿದಿದೆ ಎಂದು ತಿಳಿದುಬಂದಿದೆ. 

ಸಾಜಿದ್‌ ಮೀರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದಾನೆ ಮತ್ತು ಪಾಕಿಸ್ತಾನ ಮೂಲದ ಎಲ್‌ಇಟಿ ಉಗ್ರರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಮೆರಿಕ ಅವನ ತಲೆಯ ಮೇಲೆ 50 ಲಕ್ಷ ಅಮೆರಿಕ ಡಾಲರ್ ನಗದು ಬಹುಮಾನವನ್ನು ಇರಿಸಿದೆ. ಈ ವರ್ಷದ ಜೂನ್‌ನಲ್ಲಿ, ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (Financial Action Task Force) (ಎಫ್‌ಎಟಿಎಫ್) ನ ಬೂದು ಪಟ್ಟಿಯಿಂದ ನಿರ್ಗಮಿಸಲು ಹೆಣಗಾಡುತ್ತಿರುವ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಭಯೋತ್ಪಾದನೆ-ಹಣಕಾಸಿನ ಪ್ರಕರಣದಲ್ಲಿ ಅವನನ್ನು 15 ವರ್ಷಗಳ ಕಾಲ ಜೈಲಿನಲ್ಲಿರಿಸಿತ್ತು.

ಇದನ್ನು ಓದಿ: ಬಿಜೆಪಿ ನಾಯಕ ಭೇಟಿಗೆ ಕೆರಳಿದ ಲಷ್ಕರ್ ಉಗ್ರರು, Ghulam Nabi Azadಗೆ ಬೆದರಿಕೆ!

ಪಾಕಿಸ್ತಾನಿ ಅಧಿಕಾರಿಗಳು ಈ ಹಿಂದೆ ಸಾಜಿದ್‌ ಮೀರ್ ಸತ್ತಿದ್ದಾನೆ ಎಂದು ಹೇಳಿದ್ದರು, ಆದರೆ ಪಾಶ್ಚಿಮಾತ್ಯ ದೇಶಗಳಿಗೆ ಅದು ಮನವರಿಕೆಯಾಗಗಿರಲಿಲ್ಲ ಮತ್ತು ಸಾವಿನ ಪುರಾವೆ ನೀಡುವಂತೆ ಒತ್ತಾಯಿಸಿದ್ದವು. ಈ ಉಗ್ರ ಪಾಕಿಸ್ತಾನ ಮೂಲದ ಎಲ್‌ಇಟಿಯ ಹಿರಿಯ ಸದಸ್ಯನಾಗಿದ್ದು, ನವೆಂಬರ್ 2008 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಬೇಕಾಗಿದ್ದಾನೆ. " ಸಾಜಿದ್‌ ಮೀರ್ ದಾಳಿಗಳ ವಿಚಾರದಲ್ಲಿ ಎಲ್ಇಟಿಯ ಕಾರ್ಯಾಚರಣೆಯ ವ್ಯವಸ್ಥಾಪಕರಾಗಿದ್ದರು. ಅವರ ಯೋಜನೆ, ಸಿದ್ಧತೆ ಮತ್ತು ಹತ್ಯೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾನೆ" ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.

ಕಳೆದ ತಿಂಗಳು, ಜೈಶ್-ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕ ಅಬ್ದುಲ್ ರೌಫ್ ಅಜರ್ ಅವರನ್ನು ವಿಶ್ವಸಂಸ್ಥೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಅಮೆರಿಕ ಮತ್ತು ಭಾರತ ಮಾಡಿದ ಪ್ರಸ್ತಾಪವನ್ನು ಚೀನಾ ತಡೆಹಿಡಿದಿತ್ತು. ಪಾಕಿಸ್ತಾನದ ಸ್ನೇಹಿತನಾಗಿರುವ ಚೀನಾ, ಯುಎನ್ ಭದ್ರತಾ ಮಂಡಳಿಯ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸುವ ಪಟ್ಟಿಗಳಿಗೆ ಪದೇ ಪದೇ ತಡೆಹಿಡಿದಿದೆ.

ಇದನ್ನೂ ಓದಿ: ಗುಜರಾತ್‌ ಚುನಾವಣೆಗೆ ಅಡ್ಡಿ ಮಾಡಲು ಐಸಿಸ್‌ನಿಂದ ಗಲಭೆ?

ಈ ವರ್ಷದ ಜೂನ್‌ನಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು UN ಭದ್ರತಾ ಮಂಡಳಿಯ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಟ್ಟಿ ಮಾಡಲು ಭಾರತ ಮತ್ತು ಯುಎಸ್ ಜಂಟಿ ಪ್ರಸ್ತಾವನೆಯನ್ನು ಕೊನೆಯ ಕ್ಷಣದಲ್ಲಿ ಚೀನಾ ತಡೆಹಿಡಿದಿತ್ತು. ಮಕ್ಕಿ ಅಮೆರಿಕದಿಂದ ಗೊತ್ತುಪಡಿಸಿದ ಭಯೋತ್ಪಾದಕ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಾಗೂ 26/11 ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ. UN ಭದ್ರತಾ ಮಂಡಳಿಯ 1267 ISIL ಮತ್ತು ಅಲ್-ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಮಕ್ಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲು ನವದೆಹಲಿ ಹಾಗೂ ವಾಷಿಂಗ್ಟನ್ ಜಂಟಿ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಆದರೆ ಬೀಜಿಂಗ್ ಕೊನೆಯ ಕ್ಷಣದಲ್ಲಿ ಈ ಪ್ರಸ್ತಾಪವನ್ನು ತಡೆಹಿಡಿಯಿತು.

Follow Us:
Download App:
  • android
  • ios