ಲಂಡನ್(ಮಾ. 19)  ಹೆಂಡತಿಗೆ ವಿದೇಶದಲ್ಲಿ ಬಿಜಿನಸ್ ಮೀಟ್ ಇದೆ ಎಂದು ಹೇಳಿ ಪ್ರೇಯಸಿಯೊಂದಿಗೆ ಚಕ್ಕಂದವಾಡಲು ವಿದೇಶಕ್ಕೆ ಹಾರಿದ್ದ ಅಸಾಧ್ಯ ಗಂಡ ಕೊರೋನಾ ದಾಳಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಉತ್ತ ಇಂಗ್ಲೆಂಡ್ ನಲ್ಲಿ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿದಾಗ ಗಂಡನ ಅಸಲಿತನ ರಟ್ಟಾಗಿದೆ. ಗಹೆಂಡಿತ ಬಳಿ ಯುಎಸ್ ಗೆ ಬಿಜಿನಸ್ ಟ್ರಿಪ್ ಹೋಗುತ್ತೇನೆ ಎಂದು ಹೇಳಿದ್ದ ಆಸಾಮಿ ಲವರ್ ಜತೆ ಇಟಲಿಗೆ ಹಾರಿದ್ದ. ಇಟಲಿಯಲ್ಲೇ ಮಾರಕ  ವೈರಸ್ ಬೆನ್ನು ಬಿದ್ದಿದೆ.

ಈ ರಕ್ತದ ಗುಂಪಿನವರೇ ಎಚ್ಚರ, ಕೊರೋನಾ ನಿಮ್ಮನ್ನು ಬಲುಬೇಗ ಪ್ರೀತಿಸ್ಬಹುದು!

ಈ ಅಸಾಧ್ಯ ಗಂಡ ಯಾವ ಮಹಿಳೆಯೊಂದಿಗೆ ಅಫೇರ್ ಇಟ್ಟುಕೊಂಡಿದ್ದ ಎಂಬ ಸಂಗತಿಯನ್ನು ಅಧಿಕಾರಿಗಳು ಗೌಪ್ಯವಾಗಿ ಇಟ್ಟಿದ್ದಾರೆ. ಈತನ ಹೆಂಡತಿ ಉತ್ತರ ಇಂಗ್ಲೆಂಡ್ ನಲ್ಲಿ ಗೃಹ ಬಂಧನದಲ್ಲಿದ್ದರೆ ಗಂಡ ಆಸ್ಪತ್ರೆ ಸೇರಿಕೊಂಡಿದ್ದಾನೆ.

ಈ ಪ್ರಕರಣ ತಮಾಷೆಯಾಗಿ ತೋರಿದರೂ ಇದರ ಗಂಭೀರತೆ ಕಡಿಮೆ ಇಲ್ಲ. ಅಕ್ರಮ ಸಂಬಂಧ ಮುಚ್ಚಿಡಬಹುದು ಎಂದು ಅಂದುಕೊಂಡಿದ್ದ ಎಲ್ಲ ಪ್ಲಾನ್ ಗಳನ್ನು ಕೊರೋನಾ ಬಹಿರಂಗ ಮಾಡಿ ಹಾಕಿದೆ.