1970ರ ದಶಕದಲ್ಲಿ ಫ್ರಾನ್ಸ್‌ ತೊರೆದು ವಿದೇಶ ಪ್ರವಾಸ ಕೈಗೊಂಡ ಶೋಭರಾಜ್‌ ಈ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ. ಈತನಿಂದ ಕೊಲೆಯಾದ ಬಹಳಷ್ಟು ಜನರು ಪಾಶ್ಚಿಮಾತ್ಯರು. 

ಕಾಠ್ಮಂಡು: ನೇಪಾಳ (Nepal) ಸುಪ್ರೀಂಕೋರ್ಟಿನ (Supreme Court) ಆದೇ​ಶದ ಮೇರೆಗೆ ಫ್ರೆಂಚ್‌ (French) ಸರಣಿ ಹಂತಕ (Serial Killer) ಚಾರ್ಲ್ಸ್ ಶೋಭ​ರಾಜ್‌ನನ್ನು (Charles Sobhraj) ಶುಕ್ರವಾರ ನೇಪಾ​ಳ ಜೈಲಿ​ನಿಂದ (Nepal Jail) ಬಿಡು​ಗ​ಡೆ​ಗೊ​ಳಿ​ಸ​ಲಾ​ಗಿ​ದ್ದು, ಫ್ರಾನ್ಸ್‌ಗೆ (France) ಗಡೀ​ಪಾರು (Deport) ಮಾಡ​ಲಾ​ಗಿದೆ. ಕೇಂದ್ರೀಯ ಕಾರಾ​ಗ್ರ​ಹ​ದಿಂದ ಶೋಭ​ರಾ​ಜ್‌​ನನ್ನು ವಲಸೆ ಅಧಿ​ಕಾ​ರಿ​ಗ​ಳಿಗೆ ಹಸ್ತಾಂತ​ರಿ​ಸ​ಲಾ​ಗಿದ್ದು, ಪ್ರಯಾ​ಣದ ದಾಖ​ಲೆ​ಗ​ಳನ್ನು ಸಿದ್ಧ​ಪ​ಡಿಸಿ ಗಡೀ​ಪಾರು ಪ್ರಕ್ರಿಯೆ ನಡೆ​ಸ​ಲಾ​ಗಿದೆ. ಈತ​ನನ್ನು ಫ್ರಾನ್ಸ್‌ಗೆ ಗಡೀ​ಪಾರು ಮಾಡಿ​ದ್ದರ ಜೊತೆ​ಯಲ್ಲಿ ಮತ್ತೆ ನೇಪಾ​ಳದ ಪ್ರವೇ​ಶದ ಮೇಲೆ ನಿರ್ಬಂಧ ಹೇರ​ಲಾ​ಗಿ​ದೆ. ಹತ್ಯೆಯ ಆರೋ​ಪದ ಮೇಲೆ ಈತ ಕಳೆದ 19 ವರ್ಷ​ಗ​ಳಿಂದ ಜೈಲಿ​ನ​ಲ್ಲಿದ್ದ ಈತ​ನನ್ನು ಬಿಡು​ಗ​ಡೆ​ಗೊ​ಳಿಸು​ವಂತೆ ನ್ಯಾಯಮೂರ್ತಿ ಸಪ್ನಾ ಪ್ರಧಾನ ಮಲ್ಲಾ ಹಾಗೂ ನ್ಯಾಯಮೂರ್ತಿ ತಿಲಕ ಪ್ರಧಾನ ಶ್ರೇಷ್ಠಾ ಬುಧ​ವಾರ ಆದೇಶ ನೀಡಿ​ದ್ದ​ರು. ವಿದೇಶಿ ಯುವತಿಯ​ರನ್ನು ಹತ್ಯೆ ಮಾಡು​ತ್ತಿದ್ದ ಈತನು ‘ಬಿಕಿನಿ ಕಿಲ್ಲ​ರ್‌​’ ಎಂಬ ಕುಖ್ಯಾತಿ ಪಡೆ​ದಿ​ದ್ದನು. 1975ರಲ್ಲಿ ನೇಪಾ​ಳ​ದಲ್ಲಿ ಅಮೆ​ರಿ​ಕದ ಮಹಿಳೆ ಕೋನಿ ಜೋ ಬ್ರಾನ್ಜಿಚ್‌ ಹತ್ಯೆ ಮಾಡಿ​ದ್ದ​ಕ್ಕೆ 2003ರಿಂದಲೂ ಈತ ಜೈಲಿ​ನ​ಲ್ಲಿ​ದ್ದ.

ನನ್ನನ್ನು ಕಿಲ್ಲರ್‌ ಅನ್ಬೇಡಿ..!
ಬಿಡುಗಡೆ ಮಾಡಿದ್ದಕ್ಕೆ ಖುಷಿ ಆಗುತ್ತಿದೆ. ನನಗೆ ಫ್ರಾನ್ಸ್‌ಗೆ ಮರಳಿದ ನಂತರ ಸಾಕಷ್ಟು ಕೆಲಸ ಮಾಡೋದಿದೆ. ನೇಪಾಳ ಸರ್ಕಾರ ಸೇರಿ ಅನೇಕರ ಮೇಲೆ ಕೇಸು ಹಾಕಲಿದ್ದೇನೆ. ನನ್ನನ್ನು ಬಿಕಿನಿ ಕಿಲ್ಲರ್‌ ಎಂದು ಕರೆಯುವುದು ತಪ್ಪು ಎಂದು ಕುಖ್ಯಾತ ಹಂತಕ ಚಾರ್ಲ್ಸ್‌ ಶೋಭರಾಜ್‌ ಹೇಳಿದ್ದಾರೆ. 

ಇದನ್ನು ಓದಿ: ಜೈಲಿನಿಂದ ಬಿಡುಗಡೆಯಾಗ್ತಿದ್ದಾರೆ ಅಂತಾರಾಷ್ಟ್ರೀಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್..!

ಶೋಭರಾಜ್ ಯಾರು..?
ಕುಖ್ಯಾತ ಚಾರ್ಲ್ಸ್‌ ಶೋಭರಾಜ್‌ ಓರ್ವ ಫ್ರೆಂಚ್‌ ಸರಣಿ ಹಂತಕ. ಹಲವಾರು ಕೊಲೆ ಹಾಗೂ ಜೈಲಿನಿಂದ ತಪ್ಪಿಸಿಕೊಂಡಿರುವ ಪ್ರಕರಣಗಳು ಈತನ ಮೇಲಿವೆ. 1994ರಲ್ಲಿ ವಿಯೆಟ್ನಾಂನಲ್ಲಿ ಭಾರತೀಯ ಮೂಲದವರ ಮಗನಾಗಿ ಹುಟ್ಟಿದ ಈತನ ಪೂರ್ಣ ಹೆಸರು, ಚಾರ್ಲ್ಸ್‌ ಗುರುಮುಖ್‌ ಶೋಭರಾಜ್‌ ಹೋಟ್ಚಂದ್‌ ಭವ್ನಾನಿ. ಈತ ಹುಟ್ಟಿದ ಬಳಿಕ ಈತನ ತಾಯಿ ಫ್ರೆಂಚ್‌ ವ್ಯಕ್ತಿಯನ್ನು ಮದುವೆಯಾದ ಕಾರಣ ಇಡೀ ಬಾಲ್ಯವನ್ನು ಫ್ರಾನ್ಸ್‌ನಲ್ಲಿ ಕಳೆದ ಈತ, ಬಾಲ್ಯದಿಂದಲೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. 

ಬಿಕಿನಿ ಕಿಲ್ಲರ್‌ ಪಟ್ಟ ಯಾಕೆ..?
1970ರ ದಶಕದಲ್ಲಿ ಫ್ರಾನ್ಸ್‌ ತೊರೆದು ವಿದೇಶ ಪ್ರವಾಸ ಕೈಗೊಂಡ ಶೋಭರಾಜ್‌ ಈ ಅವಧಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ. ಈತನಿಂದ ಕೊಲೆಯಾದ ಬಹಳಷ್ಟು ಜನರು ಪಾಶ್ಚಿಮಾತ್ಯರು. ಅಲ್ಲದೆ ಈತ ಮೋಜಿನ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಈತ ಕೊಲೆ ಮಾಡಿದಾಗ ಅವರು ಈಜುಡುಗೆ (ಬಿಕಿನಿ) ಧರಿಸಿಸದ್ರು. ಅಲ್ಲದೆ, ಬ್ಯಾಂಕಾಕ್‌ನ ಪಟ್ಟಾಯದಲ್ಲಿ ಕೊಲೆ ಮಾಡಿದ ಯುವತಿ ಸಹ ಈಜುಡುಗೆ ಧರಿಸಿದ್ದಳು. ಹಾಗಾಗಿ ಈತನಿಗೆ ಬಿಕಿನಿ ಕಿಲ್ಲರ್‌ ಎಂಬ ಹೆಸರು ದೊರಕಿತ್ತು. 

ಇದನ್ನೂ ಓದಿ: Umesh Reddy: ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಪರಾರಿ ಪಾರಂಗತ..!
ಕೊಲೆ ಮಾಡುವುದರ ಜೊತೆಗೆ ಜೈಲಿಂದ ತಪ್ಪಿಸಿಕೊಳ್ಳುವುದರಲ್ಲೂ ಈತ ಚಾನಾಕ್ಷನಾಗಿದ್ದ. ಹಾಗಾಗಿ ಈತನನ್ನು ಅಂಡರ್‌ವರ್ಲ್ಡ್‌ನಲ್ಲಿ ‘ದ ಸರ್ಪೆಂಟ್‌’ ಎಂದು ಕರೆಯಲಾಗುತ್ತಿತ್ತು. ಈತ ಅಫ್ಘಾನಿಸ್ತಾನ, ಗ್ರೀಸ್‌, ಇರಾನ್‌ ಮತ್ತು ಭಾರತದ ಜೈಲುಗಳಿಂದ ತಪ್ಪಿಸಿಕೊಂಡಿದ್ದ. ಸುಮಾರು 20 ವರ್ಷಗಳ ಕಾಲ ತಿಹಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಈತ ಅಲ್ಲಿಂದಲೂ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದ. ನಂತರ ಈತನನ್ನು ಗೋವಾದಲ್ಲಿ ಬಂಧಿಸಲಾಗಿತ್ತು. ಮತ್ತೊಮ್ಮೆ ನೇಪಾಳದ್ಲಿ ಸೆರೆ ಸಿಕ್ಕ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 

ಇದನ್ನೂ ಓದಿ: ಅತ್ಯಾಚಾರವೆಸಗಿ ನೆನಪಿಗಾಗಿ ರುಂಡ ಸಂಗ್ರಹಿಸುತ್ತಿದ್ದ: ಇಲ್ಲಿದೆ ವಿಶ್ವದ 10 ಭಯಾನಕ ಸಿರಿಯಲ್‌ ಕಿಲ್ಲರ್ಸ್‌ ಕಹಾನಿ