ವಿದೇಶಗಳಲ್ಲೂ ಮೋದಿ ಸಿರಿಧಾನ್ಯದ ಪ್ರಚಾರ: ಗಣ್ಯರಿಗೆ ಸಿರಿಧಾನ್ಯದ ರಸದೌತಣ
ಭಾರತ ಮತ್ತು ಪೆಸಿಫಿಕ್ ದೇಶಗಳ 3ನೇ ಸಮ್ಮೇಳನದ ವೇಳೆ ಆಗಮಿಸಿದ ಗಣ್ಯರಿಗೆ ಸೋಮವಾರ ಸಿರಿಧಾನ್ಯಗಳ ಭೋಜನ ಸೇರಿದಂತೆ ಭಾರತೀಯ ತಿನಿಸುಗಳ ರಸದೌತಣ ಬಡಿಸಲಾಯಿತು.
ಪೋರ್ಟ್ ಮೋರ್ಸ್‌ಬೈ: ಭಾರತ ಮತ್ತು ಪೆಸಿಫಿಕ್ ದೇಶಗಳ 3ನೇ ಸಮ್ಮೇಳನದ ವೇಳೆ ಆಗಮಿಸಿದ ಗಣ್ಯರಿಗೆ ಸಿರಿಧಾನ್ಯಗಳ ಭೋಜನ ಸೇರಿದಂತೆ ಭಾರತೀಯ ತಿನಿಸುಗಳ ರಸದೌತಣ ಬಡಿಸಲಾಯಿತು. ಪ್ರಧಾನಿ ಮೋದಿ ಮತ್ತು ಪುಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಪೆ (James Marape) ಜಂಟಿಯಾಗಿ ಆಯೋಜಿಸಿದ್ದ ಈ ಔತಣಕೂಟದಲ್ಲಿ ಗಣ್ಯರಿಗೆ ಖಂಡವಿ (Khandavi), ಸಿರಿಧಾನ್ಯ ಮತ್ತು ತರಕಾರಿ ಸೂಪ್, ಮಲಾಯ್ ಕೋಫ್ತಾ, ರಾಜಸ್ಥಾನದ ರಾಗಿ ಗಟ್ಟಾಕರಿ (Rajasthani Millet Gattakari), ದಾಲ್ ಪಂಚ್ಮೇಲ್ (Dal Panchmel), ಸಿರಿಧಾನ್ಯ ಬಿರಿಯಾನಿ, ನನ್ನು ಫುಲ್ಕಾ, ಮಸಾಲಾ ಟೀ ಮೊದಲಾದ ಔತಣವನ್ನು ಉಣಬಡಿಸಲಾಯಿತು. ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಲು ಅದನ್ನು ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿರುವ ಮೋದಿ, ಅದರ ಭಾಗವಾಗಿ ಸೋಮವಾರದ ಔತಣದಲ್ಲೂ ಹಲವು ಸಿರಿಧಾನ್ಯಗಳ ಆಹಾರ ಉತ್ಪನ್ನಗಳ ಇರುವಿಕೆಯನ್ನು ಖಾತರಿಪಡಿಸಿದ್ದರು.
ನ್ಯೂಜಿಲೆಂಡ್ ಪ್ರಧಾನಿ ಹಿಪ್ಕಿನ್ಸ್ ಜೊತೆ ಮೋದಿ ಮೊದಲ ಭೇಟಿ
ಪೋರ್ಟ್ ಮೋರ್ಸ್‌ಬೈ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ (Chris Hipkinsಅವರನ್ನು ಪಪುವಾ ನ್ಯೂಗಿನಿಯಾ ರಾಜಧಾನಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. ಇಂಡಿಯಾ-ಪೆಸಿಫಿಕ್ ಶೃಂಗದಲ್ಲಿ ಭಾಗಿ ಆಗಲು ಹಿಪ್ಕಿನ್ಸ್ ಪಪುವಾಗೆ ಬಂದಿದ್ದರು. ಈ ವೇಳೆ ನಡೆದ ಭೇಟಿಯಲ್ಲಿ ಉಭಯ ನಾಯಕರು ವ್ಯಾಪಾರ, ವಾಣಿಜ್ಯ, ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಬಗ್ಗೆ ಒಮ್ಮತ ವ್ಯಕ್ತಪಡಿಸಿದರು. ಕಳೆದ ಜನವರಿ ತಿಂಗಳಲ್ಲಿ ಕ್ರಿಸ್ ನ್ಯೂಜಿಲೆಂಡ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.
ಮೋದಿಯಿಂದ ಆಸೀಸ್ ಪ್ರಧಾನಿ, ಅಮೆರಿಕಾ ಅಧ್ಯಕ್ಷರಿಗೆ ವಿಚಿತ್ರ ಸಮಸ್ಯೆ
ನರೇಂದ್ರ ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದ ಪಪುವಾ ನ್ಯೂಗಿನಿಯಾ ಪ್ರಧಾನಿ, ವಿಡಿಯೋ ವೈರಲ್!