Asianet Suvarna News Asianet Suvarna News

ಟೆಡ್ಡಿ ಬೇರ್‌ನೊಳಗೆ ಅಡಗಿದ್ದ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು

ಇಂಗ್ಲೆಂಡ್‌ನಲ್ಲಿ ಕಳ್ಳನೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತನಷ್ಟೇ ದೊಡ್ಡ ಗಾತ್ರದ ಟೆಡ್ಡಿಬೇರ್‌ನೊಳಗೆ ಅಡಗಿದ್ದಾನೆ. ಆದರೆ ಕಳ್ಳರು ಚಾಪೆ ಅಡಿ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ ಎಂಬಂತೆ ಈತನ ಚಾಲಾಕಿತನ ಪೊಲೀಸರ ಮುಂದೆ ಕಾರ್ಯರೂಪಕ್ಕೆ ಬಂದಿಲ್ಲ.

car thief arrested who hiding inside gaint teddy bear akb
Author
Bangalore, First Published Aug 14, 2022, 12:31 PM IST

ಕಳ್ಳರು ಕಳ್ಳತನಕ್ಕೆ ನಾನಾ ಕೈ ಚಳಕವನ್ನು ತೋರಿರುವ ಹಲವು ನಿದರ್ಶನಗಳನ್ನು ನೀವು ನೋಡಿರಬಹುದು. ಅಧುನಿಕತೆಗೆ ತಕ್ಕಂತೆ ಬದಲಾಗಿರುವ ಕಳ್ಳರು ತಂತ್ರಜ್ಞಾನದ ಬಗ್ಗೆ ಫುಲ್ ಅಪ್ಡೇಟ್ ಆಗಿದ್ದು, ಕಳ್ಳತನದಲ್ಲೂ ಹಲವು ತಂತ್ರಗಳನ್ನು ಬಳಸುತ್ತಾರೆ. ಕದ್ದ ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಹೋಗುವ ಊರಿಂದ ಊರಿಗೆ ಪರಾರಿಯಾಗುವ ಕಳ್ಳರನ್ನು ನೋಡಿದ್ದೇವೆ. ಈ ವಿಷಯ ಈಗ್ಯಾಕೆ ಅಂತೀರಾ ಇಲ್ಲೊಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿದ್ದೆಲ್ಲಿ ಎಂದು ಕೇಳಿದರೆ ನೀವು ಗಾಬರಿಯಾಗ್ತೀರಾ. ಹೌದು ಇಂಗ್ಲೆಂಡ್‌ನಲ್ಲಿ ಕಳ್ಳನೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತನಷ್ಟೇ ದೊಡ್ಡ ಗಾತ್ರದ ಟೆಡ್ಡಿಬೇರ್‌ನೊಳಗೆ ಅಡಗಿದ್ದಾನೆ. ಆದರೆ ಕಳ್ಳರು ಚಾಪೆ ಅಡಿ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ ಎಂಬಂತೆ ಈತನ ಚಾಲಾಕಿತನ ಪೊಲೀಸರ ಮುಂದೆ ಕಾರ್ಯರೂಪಕ್ಕೆ ಬಂದಿಲ್ಲ. ಈತನನ್ನು ಟೆಡ್ಡಿಬೇರ್‌ನೊಳಗಿನಿಂದಲೂ ಹೊರಗೆಳೆದು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಯುನೈಟೆಡ್ ಕಿಂಗ್‌ಡಮ್‌ನ ಕೇವಲ 18 ವರ್ಷದ ಜೋಶುವಾ ಡಾಬ್ಸನ್  ಎಂಬಾತನೇ ಹೀಗೆ ಟೆಡ್ಡಿಬೇರ್‌ ಒಳಗೆ ಅಡಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ್ದ ಕಳ್ಳ. ಈತ ಕಾರು ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ. ಆದರೆ ಈತ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡಗಿಕೊಂಡ ಜಾಗ ನೋಡಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. 

 

ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರ ಪ್ರಕಾರ, ಈ ಯುವ ತರುಣ ಕಾರು ಕಳ್ಳ ಜೋಶುವಾ ಡಾಬ್ಸನ್ , ಆತನಷ್ಟೇ ದೊಡ್ಡ ಗಾತ್ರದ ಟೆಡ್ಡಿಬೇರ್‌ ಆಟಿಕೆಯೊಳಗೆ ಅಡಗಿರುವುದನ್ನು ನೋಡಿ ಆತನನ್ನು ಟೆಡ್ಡಿಬೇರ್‌ನಿಂದ ಹೊರಬರುವಂತೆ ಮಾಡಿ ಕಂಬಿ ಹಿಂದೆ ಕೂರಿಸಿದ್ದಾರೆ. ಈತ ಐದು ಅಡಿ ಎತ್ತರದ ಟೆಡ್ಡಿಬೇರ್‌ನೊಳಗೆ ಅಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಪೊಲೀಸರು, ಈ ದೈತ್ಯ ಟೆಡ್ಡಿಬೇರ್‌ನ ಎರಡು ವಿವಿಧ ಕೋನಗಳಿಂದ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ನೆರೆಯ ರೋಚ್‌ಡೇಲ್‌ನಲ್ಲಿರುವ ಟಾಸ್ಕ್‌ಫೋರ್ಸ್‌ ಹಾಗೂ ವಿಭಾಗೀಯ ಪಡೆ ಕಳೆದ ತಿಂಗಳು ನಡೆದ ಕಳ್ಳತನ ಪ್ರಕರಣವೊಂದರ ಆರೋಪಿಯ ಹುಡುಕಾಟದ ವೇಳೆ ಎಲ್ಲಿ ಎಡವಿದರೂ ಎಂಬುದನ್ನು ಅವರಿಗೆ ಗ್ರಹಿಸಲಾಗಲಿಲ್ಲ. ಪಟ್ಟಣದ ಕಳ್ಳರಲ್ಲಿ ಒಬ್ಬನನ್ನು ಹಿಡಿಯಲು ನಾವು ಬೇಕಾಗುವ ಸಮಯಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡು ಕೊನೆಗೂ ಕಳ್ಳನನ್ನು ಹಿಡಿಯಲು ಯಶಸ್ವಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಬ್ಯಾಂಕ್ ದರೋಡೆಗೆ ಕೊರೆದ ಸುರಂಗ ಕುಸಿತ, ಕಳ್ಳನ ರಕ್ಷಿಸಿ ಜೈಲಿಗಟ್ಟಿದ ಪೊಲೀಸ್!

ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನಲ್ಲಿರುವ ಸ್ಪಾಟ್‌ಲ್ಯಾಂಡ್ ಪ್ರದೇಶದ ನಿವಾಸಿಯಾಗಿದ್ದ ಜೋಶುವಾ ಡಾಬ್ಸನ್ ಮೇ ತಿಂಗಳಲ್ಲಿ ಕಾರನ್ನು ಕದ್ದಿದ್ದು, ಈ ಪ್ರಕರಣದಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದ. ಎಫ್‌ಬಿ ಪೋಸ್ಟ್‌ನ ಪ್ರಕಾರ, ಪೊಲೀಸರು ಆತನ ಮನೆಯ ವಿಳಾಸವನ್ನು ತಲುಪಿ ಮನೆಯನ್ನು ಹುಡುಕಿದಾಗ, ಅವರಿಗೆ ಕೋಣೆಯಲ್ಲಿದ್ದ ದೊಡ್ಡ ಗಾತ್ರದ ಟೆಡ್ಡಿಬೇರ್‌ವೊಂದು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ. ಒಂದು ಕ್ಷಣ ದಂಗಾದ ಅವರು ನಂತರ ಜೋಶುವಾ ಮಗುವಿನ ಆಟದ ಕರಡಿಯೊಳಗೆ ಅಡಗಿರುವುದನ್ನು ಕಂಡುಕೊಂಡರು. ಪೊಲೀಸರಿಗೆ ಚಮಕ್‌ ನೀಡಿ ತಪ್ಪಿಸಿಕೊಳ್ಳಲು ಜೋಶುವಾ  ಆಟದ ಕರಡಿಯೊಳಗೆ ನುಗ್ಗಿಕೊಂಡಿದ್ದ. ಒಂದು ವೇಳೆ ಸ್ವಲ್ಪ ಸಮಯದವರೆಗೆ ಆತ ಉಸಿರನ್ನು ನಿಯಂತ್ರಿಸಿಕೊಂಡಿದ್ದರೆ ಪೊಲೀಸರಿಂದ ಆತ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಪೊಲೀಸರ ಸೂಕ್ಷ್ಮ ಗ್ರಹಿಕೆ ಆತನನ್ನು ಕಂಬಿ ಹಿಂದೆ ಕಳುಹಿಸುವಂತೆ ಮಾಡಿದೆ. 

ಮರವಂತೆ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ಕಳವು ಯತ್ನ: ಕಳ್ಳ ದಂಪತಿ ಬಂಧನ!

ಮೋಟಾರು ವಾಹನ ಕಳ್ಳತನ, ಅರ್ಹತೆ ಇಲ್ಲದಿದ್ದರೂ ವಾಹನ ಚಾಲನೆ ಹಾಗೂ  ಪಾವತಿ ಮಾಡದೇ ಪೆಟ್ರೋಲ್ ಬಂಕ್‌ನಿಂದ ಹೊರಟುಹೋದ ಕಾರಣಕ್ಕೆ ಈಗ ಜೋಶುವಾಗೆ ನ್ಯಾಯಾಲಯ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
 

Follow Us:
Download App:
  • android
  • ios