ಫಿಸಿಕ್ಸ್‌ಗೆ ಸವಾಲು, ಆಗಸದಲ್ಲಿ ಚಿತ್ತಾರ ಬರೆದದು ವಿಶ್ವದಾಖಲೆ ಸೃಷ್ಟಿಸಿದ 104 ಸ್ಕೈಡೈವರ್ಸ್, ಆಗಸದಲ್ಲಿ ಅತ್ಯಾಕರ್ಷಕ ಸಾಹಸ ಮಾಡಲಾಗಿದೆ. ಕ್ಯಾನಪಿ ರಿಲೇಟಿವ್ ವರ್ಕ್ ಮೂಲಕ ವಿಶ್ವದಾಖಲೆ ಸೃಷ್ಟಿಯಾಗಿದೆ. ಈ ವಿಡಿಯೋ ಇಲ್ಲಿದೆ. 

ಫ್ಲೋರಿಡಾ (ನ.28) ಸ್ಕೈ ಡೈವಿಂಗ್ ಅತ್ಯಂತ ಸಾಹಸ ಹಾಗೂ ಅತೀವ ಧೈರ್ಯದ ಕೆಲಸ. ಆದರೆ ಇದರಲ್ಲಿ ಭೌತಶಾಸ್ತ್ರಕ್ಕೆ ಸವಾಲು ಹಾಕಿ ದಾಖಲೆ ಬರೆಯುವುದು ಸಾಮಾನ್ಯ ಮಾತಲ್ಲ. ಇದೀಗ ಬರೋಬ್ಬರಿ 104 ಸ್ಕೈಡೈವರ್ಸ್ ಆಗಸದಲ್ಲಿ ಮನಮೋಹನ ಚಿತ್ತಾರ ಬರೆದಿದ್ದಾರೆ. ಕ್ಯಾನಪಿ ರಿಲೇಟಿವ್ ವರ್ಕ್(CRW) ಫಾರ್ಮಮೇಶನ್ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಸ್ಕೈ ಡೈವ್ ವೇಳೆ ಡೈವರ್ಸ್ ಆಗಸದಲ್ಲೇ ಸ್ಟಾರ್ಬರ್ಸ್ಟ್ ಆಕಾರ ರೂಪಿಸಿದ್ದಾರೆ. ಈ ವಿಡಿಯೋ ಕಣ್ಣಿಗೆ ಹಬ್ಬದಂತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

18 ವರ್ಷದ ದಾಖಲೆ ಅಳಿಸಿ ಹಾಕಿದ ಸ್ಕೈಡೈವರ್ಸ್

104 ಮಂದಿ ರೂಪಿಸಿದ ಸ್ಟಾರ್ಬಸ್ಟ್ ಆಕಾರದ ವಿಶ್ವಾದಾಖಲೆ ಬರೋಬ್ಬರಿ 18 ವರ್ಷಗಳ ಹಿಂದಿನ ದಾಖಲೆಯನ್ನು ಪುಡಿ ಮಾಡಿದೆ. 18 ವರ್ಗಳ ಹಿಂದೆ ಇದೇ ರೀತಿ 100 ಮಂದಿ ಸ್ಕೈಡೈವರ್ಸ್ ಸಾಧನೆ ಮಾಡಿದ್ದರು. ಆದರೆ ಈ ಬಾರಿ ಹೆಚ್ಚು ಪ್ರಿಸಿಸೀವ್ ಪೊಶಿಶನ್ ಜೊತೆಗೆ ಅಚ್ಚುಕಟ್ಟಾಗಿ ಫಾರ್ಮೇಶನ್ ಮಾಡಿದ್ದಾರೆ. ಈ ಬಾರಿ ಸ್ಕೈಡೈವರ್ಸ್ ಫಾರ್ಮೇಶನ್ ಹೆಚ್ಚು ನಿಖರವಾಗಿತ್ತು, ಸುದೀರ್ಘ ಸಮಯ ಇದೇ ಆಕಾರದಲ್ಲಿ ಆಗಸದಲ್ಲಿ ಚಿತ್ತಾರ ಬರೆದಿದ್ದಾರೆ. ತಮ್ಮ ಯೋಜನೆಯನ್ನು ಸರಿಯಾಗಿ ನಿರ್ವಹಿಸಿದ್ದಾರೆ.

36 ಸ್ಕೈಡೈವರ್ಸ್ ಜೊತೆಗೆ ಸೇರಿದ ಇತರ ಸ್ಕೈಡೈವರ್ಸ್

ಆಗಸದಲ್ಲಿ 36 ಸ್ಕೈಡೈರವರ್ಸ್ ವಲ್ಕೈರಿ ಪ್ಯಾರಶೂಟ್‌ಗಳನ್ನು ಬಳಸಿ ನೆಲೆ ಮಾಡಿದ್ದರು. ಬಳಿಕ ಇತರ ವಿಮಾನಗಳ ಮೂಲಕ ಹಾರಿದ ಸ್ಕೈಡೈವರ್ಸ್ ಇವರ ಜೊತೆ ಸೇರಿಕೊಂಡರು, ಕೆಲ ಹೊತ್ತಲ್ಲಿ 104 ಸ್ಕೈಡೈವರ್ಸ್ ಜೊತೆ ಸೇರಿ ಆಗಸದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದರು. ಬಣ್ಣ ಬಣ್ಣದ ಪ್ಯಾರಾಶೂಟ್‌ಗಳಿಂದ ವರ್ಣರಂಜಿತವಾಗಿ ಗೋಚರಿಸಿತ್ತು. ಇದು ಎಲ್ಲರ ಗಮನೆಸೆಳೆದಿದೆ. 19 ದೇಶಗಳ ಸ್ಕೈಡೈವರ್ಸ್ ಈ ಸಾಧನೆ ಮಾಡಿದ್ದಾರೆ. ಅತೀವ ವೇಗದಲ್ಲಿ ಬೀಸುವ ಗಾಳಿ ನಡುವೆ ಸಮತೋಲನ ಕಾಪಾಡಿಕೊಂಡು ಕ್ಯಾನಪಿ ರೂಪು ಭಾರಿ ವಿಶೇಷವಾಗಿತ್ತು.

ಈ ಸ್ಕೈಡೈವಿಂಗ್‌ಗಾಗಿ ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ. ಗಾಳಿಯ ವೇಗ, ಆಗಸದಲ್ಲಿ ಸಮತೋಲನ ಕಾಪಾಡಿಕೊಂಡು ಈ ರೀತಿಯ ಸಾಹಸ ಮಾಡಿದ್ದಾರೆ. ಪ್ರತಿಯೊಬ್ಬ ಸ್ಕೈಡೈವರ್ಸ್ ಅಷ್ಟೇ ತಾಳ್ಮೆ, ಏಕಾಗ್ರತೆ, ಸಾಹಸ, ಧೈರ್ಯ ತೋರಬೇಕು. ಈ ನಿಟ್ಟಿನಲ್ಲ ಎಲ್ಲಾ ಸ್ಕೈಡೈವರ್ಸ್ ಯಶಸ್ವಿಯಾಗಿ ತಮ್ಮ ಕಾರ್ಯಸಾಧಿಸಿದ್ದಾರೆ.

ವಿಶೇಷ ಅಂದರೆ ಈ 104 ಸ್ಕೈಡೈವರ್ಸ್‌ಗಳ ಈ ಸಾಧನೆಯನ್ನು ಹೀಗೆ ಪ್ಯಾರಾಶೂಟ್ ಬಳಸಿ ಕ್ಯಾಮೆರಾ ಹಿಡಿದು ಶೂಟ್ ಮಾಡಿಯೂ ಸಾಹಸ ಮೆರೆದಿದ್ದಾರೆ. ಕಾರಣ ಇವರ ಇಡೀ ಫಾರ್ಮೇಶನ್ ಅಚ್ಚುಕಟ್ಟಾಗಿ ಕ್ಯಾಮೆರಾ ಮೂಲಕ ಸೆರೆ ಹಿಡಿದು ಜಗತ್ತಿಗೆ ವಿಶ್ವಾದಾಖಲೆಯನ್ನು ಜಗತ್ತಿಗೆ ತೋರಿಸಿದ್ದಾರೆ.

View post on Instagram