ಜಿ-20 ಧ್ವಜ ಹಿಡಿದು 10 ಸಾವಿರ ಅಡಿ ಎತ್ತರದಲ್ಲಿ ವಾಯುಸೇನೆ ಯೋಧನ ಸ್ಕೈ ಡೈವಿಂಗ್: ವೀಡಿಯೋ
ಜಿ-20 ಶೃಂಗಸಭೆಗೆ ರಾಷ್ಟ್ರದ ರಾಜಧಾನಿ ಅದ್ದೂರಿಯಾಗಿ ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಗಜೇಂದ್ರ ಯಾದವ್ ಅವರು 10 ಸಾವಿರ ಅಡಿ ಎತ್ತರದಲ್ಲಿ ಜಿ20 ಧ್ವಜ ಹಿಡಿದುಕೊಂಡು ಸ್ಕೈ ಡೈವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ನವದೆಹಲಿ: ಜಿ-20 ಶೃಂಗಸಭೆಗೆ ರಾಷ್ಟ್ರದ ರಾಜಧಾನಿ ಅದ್ದೂರಿಯಾಗಿ ಮಧುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇದಕ್ಕೆ ಪೂರಕವೆಂಬಂತೆ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಗಜೇಂದ್ರ ಯಾದವ್ ಅವರು 10 ಸಾವಿರ ಅಡಿ ಎತ್ತರದಲ್ಲಿ ಜಿ20 ಧ್ವಜ ಹಿಡಿದುಕೊಂಡು ಸ್ಕೈ ಡೈವ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇವರು 10 ಸಾವಿರ ಅಡಿ ಎತ್ತರದಲ್ಲಿ ಗಜಾನಂದ ಯಾದವ್ ಅವರು ಸ್ಕೈ ಡೈವ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.
ವಿಂಗ್ ಕಮಾಂಡರ್ ಗಜಾನಂದ ಯಾದವ ಅವರು 'ವಸುಧೈವ ಕುಟುಂಬಕಂ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ಸಂಭ್ರಮ' ಎಂಬ ವಿಚಾರವನ್ನು ಪ್ರತಿಧ್ವನಿಸುವ ಥೀಮ್‌ನಿಂದ ಅಲಂಕರಿಸಲ್ಪಟ್ಟ G20 2023ರ ಧ್ವಜವನ್ನು ಹಿಡಿದು 10,000 ಅಡಿಗಳ ಎತ್ತರದಲ್ಲಿ ಮೋಡಗಳ ಮಧ್ಯೆ ಹಾರುತ್ತಿರುವವ ದೃಶ್ಯ ನಯನ ಮನೋಹರವಾಗಿದೆ.
G20 Summit: ಮಹತ್ವದ ಶೃಂಗಸಭೆಗೆ ಭಾರತದ ಪ್ರಮುಖ ಶಾಶ್ವತ ಕೊಡುಗೆ ಏನು? ಇದರ ಉದ್ದೇಶ, ಕೊಡುಗೆಗಳು ಹೀಗಿದೆ..
ಏರ್ ಫೋರ್ಸ್ ಸ್ಟೇಷನ್ ಮಾಧ್ ಐಲ್ಯಾಂಡ್‌ನಲ್ಲಿ (Madh Island) ಕರ್ತವ್ಯದಲ್ಲಿರುವ ವಿಂಗ್ ಕಮಾಂಡರ್ ಯಾದವ ಅವರು ಜೋಧ್‌ಪುರದ (Jodhpur) ಫಲೋಡಿಯಲ್ಲಿರುವ ವಾಯುಪಡೆಯ ನಿಲ್ದಾಣದಿಂದ ಈ ಸಾಹಸ ಪ್ರದರ್ಶನ ಮಾಡಿದ್ದಾರೆ. ಇದು ಮಾರ್ಚ್ ತಿಂಗಳಲ್ಲಿ ಮಾಡಿದ ಸಾಹಸವಾಗಿದ್ದು, ಈಗ ಜಿ-20 ಸಮಾವೇಶದ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.
G20 ಶೃಂಗಸಭೆಯು ಜಾಗತಿಕ ಪ್ರಾಮುಖ್ಯತೆಯ ಸಭೆಯಾಗಲಿದ್ದು, 40 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರಿ ಗಣ್ಯರು ಮತ್ತು ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ನವದೆಹಲಿಯಲ್ಲಿ ಸಮಾವೇಶಗೊಳ್ಳಲಿದ್ದಾರೆ. ಇದಕ್ಕಾಗಿ ದೆಹಲಿಯ ಪ್ರಗತಿ ಮೈದಾನದಲ್ಲಿರುವ ಪ್ರತಿಷ್ಠಿತ ಭಾರತ್ ಮಂಟಪಂ ನಿರ್ಮಾಣವಾಗಿದ್ದು, ಇಲ್ಲೇ ಕಾರ್ಯಕ್ರಮ ಅನಾವರಣಗೊಳ್ಳಲಿದೆ.
ಈ ಜಿ-20ಶೃಂಗಸಭೆಗೆ ವಿಶ್ವದ ಪ್ರಮುಖ ನಾಯಕರಾದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಇಂದು ಸಂಜೆ ವೇಳೆಗೆ ದೆಹಲಿ ತಲುಪಲಿದ್ದಾರೆ. ಇವರೊಂದಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್(Anthony Albanese), ಜಪಾನ್‌ನ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ(Fumio Kishida), ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ (Olaf Scholz) ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್ ಯೋಲ್ (Yoon Suk Yeol)ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಯಶಸ್ಸಿನತ್ತ ಜಿ20 ಶೃಂಗಸಭೆ: ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೂ ಸಿದ್ಧವಾಗ್ತಿದೆ ಭಾರತ!
ವಿಂಗ್ ಕಮಾಂಡರ್ ಯಾದವ ಅವರ ಈ ಸ್ಕೈಡೈವಿಂಗ್ ಚಮತ್ಕಾರವು ಜಿ-20 ಸೃಂಗಕ್ಕೆ ರೋಮಾಂಚಕ ಮತ್ತು ಸಾಂಕೇತಿಕ ಮುನ್ನುಡಿಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಜಾಗತಿಕ ಏಕತೆ ಮತ್ತು ಸಹಕಾರದ ಘಟನೆಯಾಗಲಿದೆ ಎಂದು ಭರವಸೆ ನೀಡುತ್ತದೆ. ಏಕೆಂದರೆ G20 ಶೃಂಗಸಭೆಯಲ್ಲಿ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ವಿಶ್ವದೆಲ್ಲೆಡೆಯ ನಾಯಕರು ದೆಹಲಿಯಲ್ಲಿ ಸೇರುತ್ತಿದ್ದಾರೆ.