Asianet Suvarna News Asianet Suvarna News

ಮಗಳಿಗೆ ಸಂಗಾತಿಗಾಗಿ ಬಿಲ್ಬೋರ್ಡ್‌ ಮೊರೆಹೋದ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ

  • ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿ ಬೆತ್‌ ಡೇವಿಸ್
  • ತಬ್ಬಲಿಯಾಗುವ ಮಗಳಿಗೆ ಸಂಗಾತಿಯ ಹುಡುಕಾಟ
  • ಬಿಲ್‌ಬೋರ್ಡ್‌ನಲ್ಲಿ ಮಗಳ ಬಗ್ಗೆ ಜಾಹೀರಾತು
Cancer stricken mom helps set up a billboard to her daughter find love akb
Author
Bangalore, First Published Jan 11, 2022, 7:18 PM IST
  • Facebook
  • Twitter
  • Whatsapp

ನ್ಯೂಯಾರ್ಕ್‌(ಜ.11):  ತಾಯಿ ಪ್ರೀತಿಯೇ ಹಾಗೆ ತಾಯಿಯರು ತಮ್ಮ ಕರುಳ ಕುಡಿಗಾಗಿ ಏನು ಮಾಡಲು ಸಿದ್ಧರಿರುತ್ತಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ತಾಯಿಯೊಬ್ಬರು ತಮ್ಮ ತಬ್ಬಲಿಯಾಗುವ ಮಗಳಿಗಾಗಿ ಆಕೆಯ ಜೀವನ ಸಂಗಾತಿಯನ್ನು ಹುಡುಕಲು ಬಿಲ್‌ಬೋರ್ಡ್‌ ಮೊರೆ ಹೋಗಿದ್ದಾರೆ. ಬೋಸ್ಟನ್‌ (Boston) ಮೂಲದ ಬೆತ್‌ ಡೇವಿಸ್ (Beth Davis) ಅವರು 2004 ರಿಂದಲೂ  ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ದೀರ್ಘಾವಧಿಯ ಚಿಕಿತ್ಸೆಯ ಹೊರತಾಗಿಯೂ ಅವರ ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್ ಹೆಚ್ಚು ತೀವ್ರಗೊಂಡ ನಂತರ ಅವರು ತಮ್ಮ ಮಗಳ ಬಗ್ಗೆ ಚಿಂತೆಗೊಳಗಾಗಿದ್ದಾರೆ. 

ಹೀಗಾಗಿ ತಾನು ಹೋದ ನಂತರ ಒಂಟಿಯಾಗುವ ಮಗಳಿಗಾಗಿ ಆಕೆಯ ಪ್ರೀತಿಯನ್ನು ಕಂಡುಕೊಳ್ಳಲು ಬಿಲ್ಬೋರ್ಡ್ ಹಾಕಲು ನಿರ್ಧರಿಸಿದ್ದರು. ತನಗೆ ಹೆಚ್ಚು ಸಮಯ ಉಳಿದಿಲ್ಲ ಎಂದು ಅರಿತುಕೊಂಡ ಡೇವಿಸ್ , ತನ್ನ ಮಗಳು ಮೋಲಿ (Molly)ಗೆ ಸಂಗಾತಿಯನ್ನು ಹುಡುಕುವ ತುರ್ತು ಅನಿವಾರ್ಯತೆಯಲ್ಲಿದ್ದಾರೆ.  ಹೀಗಾಗಿ ಆಕೆಯ ಮಗಳ ಒಪ್ಪಿಗೆಯೊಂದಿಗೆ, ಅವರು ವಿಂಗ್‌ಮ್ಯಾನ್‌ (Wingman)ನಲ್ಲಿ ಮೊಲ್ಲಿಗಾಗಿ ಒಂದು ಪ್ರೊಫೈಲ್ ಅನ್ನು ಸಿದ್ಧಪಡಿಸಿದರು. ವಿಂಗ್‌ಮ್ಯಾನ್‌ ಒಂದು ಡೇಟಿಂಗ್ ಅಪ್ಲಿಕೇಶನ್‌ ಆಗಿದ್ದು, ಇಲ್ಲಿ ಯುವಕ ಯುವತಿಯರು ತಮ್ಮ ಪ್ರೀತಿಗಾಗಿ ಹುಡುಕಾಟ ನಡೆಸಬಹುದು.

 

ಆಸಕ್ತಿಕರ ವಿಚಾರವೆಂದರೆ ವಿಂಗ್‌ಮ್ಯಾನ್‌  ಡೇಟಿಂಗ್ ಅಪ್ಲಿಕೇಶನ್‌ನ ಸ್ಥಾಪಕರಾಗಿರ ಟೀನಾ ವಿಲ್ಸನ್‌ (Tina Wilson) ಅವರಿಗೆ ಡೇವಿಸ್‌ ಅವರ ಕತೆ ತಿಳಿದು ಬಂದಿದ್ದು, ಅವರು ಮೊಲಿಯ ಪ್ರೊಫೈಲ್‌ನ್ನು ಬಿಲ್‌ಬೋರ್ಡ್‌ನಲ್ಲಿ ಹಾಕಬಹುದು ಎಂಬ ಸಲಹೆ ನೀಡಿದರು.  ಕೂಡಲೇ ಮಾಮೂಲಿಯಲ್ಲದಾ ಬಿಲ್‌ಬೋರ್ಡ್‌ ಒಂದು ರೆಡಿಯಾಗಿದ್ದು, ಅದರಲ್ಲಿ ಡೇಟ್‌ ಮೈ ಡಾಟರ್‌ (Date my daughter) ಎಂದು ಬರೆಯಲಾಗಿತ್ತು. ಈ ಬಿಲ್‌ಬೋರ್ಡ್‌ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದ್ದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Mother Daughter Reunite : 22 ವರ್ಷ ಬಳಿಕ ಅಮ್ಮನ ಮಡಿಲು ಸೇರಿದ ಮಗಳು

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ, ಡೇವಿಸ್, ಮೊಲಿ ಯಾವಾಗಲೂ ನಮ್ಮೊಂದಿಗೆ ನಿಸ್ವಾರ್ಥವಾಗಿ ಸಾಕಷ್ಟು ಸಮಯವನ್ನು ಕಳೆದಿದ್ದಾಳೆ. ಕಳೆದ ವರ್ಷ ನನಗೆ ನನ್ನ ರೋಗಕ್ಕಾಗಿ ಡಯಗ್ನೋಸ್‌ ಮಾಡುವುದಕ್ಕಾಗಿ ನ್ಯೂಜಿಲೆಂಡ್‌ಗೆ ಹಾರಲು ರಜೆ ತೆಗೆದುಕೊಳ್ಳುವುದನ್ನು ಸೇರಿದಂತೆ ಮೋಲಿ, ಬಹಳಷ್ಟು  ಕಾರ್ಯವನ್ನು ನನಗಾಗಿ ಮಾಡಿದ್ದಾಳೆ. ಈ ಕೋವಿಡ್ ಸಂಕ್ರಾಮಿಕವೂ ಈ ವರ್ಷಗಳಲ್ಲಿ ಎಲ್ಲಾ ಯುವ ತರುಣರಂತೆ ಈಕೆಯ ಸಾಮಾಜಿಕ ಜೀವನವನ್ನು ಅಡ್ಡಿಪಡಿಸಿದೆ. ಹೀಗಾಗಿ ನಾನು ಆಕೆಗೆ ಆಕೆಯ ವಿಶೇಷ ವ್ಯಕ್ತಿಯನ್ನು ಹುಡುಕಲು ಸಹಾಯ ಮಾಡಲು ಬಯಸುತ್ತೇನೆ. ಮೋಲಿಗೆ ಅವಳನ್ನು ಆರಾಧಿಸುವ ಮತ್ತು ಪ್ರೀತಿಸುವ ಮತ್ತು ಅವಳನ್ನು ಎಲ್ಲದಕ್ಕೂ ಮೊದಲ ಸ್ಥಾನಮಾನ ನೀಡುವ ಉತ್ತಮ ಜೀವನ ಸಂಗಾತಿಯ ಅಗತ್ಯವಿದೆ. ಅವಳಿಗೆ ಅಂತಹ ಹುಡುಗ ಸಿಗುವ ಭರವಸೆ ನನಗಿದೆ ಎಂದು ಡೇವಿಸ್ ಹೇಳಿದ್ದಾರೆ. 

Goa Beauty Contest: ಸೌಂದರ್ಯ ಸ್ಪರ್ಧೆಯಲ್ಲಿ ತಾಯಿ-ಮಗಳಿಗೆ ಅವಾರ್ಡ್!

Follow Us:
Download App:
  • android
  • ios