ಒಟ್ಟಾವಾ(ಜ.13) ಇಡೀ ವಿಶ್ವ ಇನ್ನೂಕೊರೋನಾ ವಿರುದ್ಧ ಹೋರಾಡುತ್ತಿದೆ. ಈ ಮಹಾಮಾರಿ ಇನ್ನೂ ನಿಂತಿಲ್ಲ ಹೀಗಿದ್ದರೂ 2021ಕ್ಕೆ ಎಂಟ್ರಿ ನೀಡುತ್ತಿದ್ದಂತೆಯೇ ಅನೇಕ ಮಂದಿ ಮಾಸ್ಟ್‌ಗೆ ಗುಡ್‌ ಬೈ ಹೇಳಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಕೊರೋನಾ ನಿಮಿತ್ತ ಕರ್ಫ್ಯೂ ಮುಂದುವರೆಸಲಾಗಿದೆ. ಇವುಗಳಲ್ಲಿ ಕೆನಡಾ ಕೂಡಾ ಒಂದು. ಇಲ್ಲಿ Quebec ನಲ್ಲಿ ಬರೋಬ್ಬರಿ ನಾಲ್ಕು ವಾರಗಳ ಕರ್ಫ್ಯೂ ಹೇರಲಾಗಿತ್ತು, ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಐದು ಗಂಟೆವರೆಗೆ ಯಾರೂ ಓಡಾಡುವಂತಿರಲಿಲ್ಲ. ಆದರೆ ಅತೀ ಅಗತ್ಯವಿದ್ದರೆ ಜನರು ಹೊರ ಗೋಗಬಹುದು. ಸಾಕು ಪ್ರಾಣಿಗಳನ್ನು ಹೊರ ಕತರೆದೊಯ್ಯುವ ಅವಕಾಶ ನೀಡಲಾಗಿದೆ.

ಮಹಿಳೆಯೊಬ್ಬಳ ವಿಚಿತ್ರ ನಡೆ

ಹೀಗಿರುವಾಗ King Street Eastನಲ್ಲಿ ಮಹಿಳೆಯೊಬ್ಬಳ ನಡೆ ಎಲ್ಲರಲ್ಲೂ ಅಚ್ಚರಿಗೀಡು ಮಾಡಿದೆ. ಆಕೆ ತನ್ನ ಗಂಡನ ಕತ್ತಿಗೇ ನಾಯಿ ಬೆಲ್ಟ್ ಕಟ್ಟಿದ್ದಾಳೆ. ಇಇದನ್ನು ಕಂಡ ಪೊಲೀಸರು ನೀನೇನು ಮಾಡುತ್ತಿದ್ದೀ? ಎಂದು ಪ್ರಶ್ನಿಸಿದರೆ ನಾಯಿಯನ್ನು ತಿರುಗಾಡಿಸುತ್ತಿದ್ದೇನೆ. ಕರ್ಫ್ಯೂ ವೇಳೆ ಸಾಕು ಪ್ರಾಣಿಯನ್ನು ತಿರುಗಾಡಿಸುವ ಅವಕಾಶ ನೀಡಿದ್ದಾರಲ್ಲವೇ ಎಂದು ಪೊಲೀಸರಿಗೇ ತಿರುಗೇಟು ನೀಡಿದ್ದಾಳೆ.

ಭಾರೀ ದಂಡ

ಇನ್ನು ಲಭ್ಯವಾದ ಮಾಹಿತಿ ಅನ್ವಯ ಈ ದಂಪತಿ ಪೊಲೀಸತರ ಮಾತು ಕೇಳಲು ತಯಾರಿರಲಿಲ್ಲ. ಹೀಗಿರುವಾಗ ಪೊಲೀಸರು ಕೂಡಾ 1500 ಡಾಲರ್ ದಂಡ ಕಟ್ಟುವಂತೆ ಆದೇಶಿಸಿದ್ದಾರೆ. ಅಂದರೆ ಬರೋಬ್ಬರಿ ಎರಡು ಲಕ್ಷ ರೂಪಾಯಿಯಷ್ಟು ದಂಡ ವಿಧಿಸಿದ್ದಾರೆ.

ಈ ಮೊದಲೂ ಹೀಗೇ ನಡೆದಿದೆ

ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ವ್ಯಕ್ತಿಯೊಬ್ಬ ನಾಯಿ ಗೊಂಬೆಯನ್ನೇ ತಿರುಗಾಡಿಸಲು ಹೊರ ಬಂದಿದ್ದ. ಪೊಲೀಸರು ಪ್ರಶ್ನಿಸಿದಾಗ ತಾನು ನಾಯಿಯನ್ನು ತಿರುಗಾಡಿಸಲು ಬಂದಿದ್ದೇನೆ ಎಂದು ಉತ್ತರಿಸಿದ್ದಾನೆ. ಇನ್ನು ಪೊಲೀಸರಿಗೆ ಇದು ನಾಯಿಯಲ್ಲ ಆಟಿಕೆ ಎಂದು ತಿಳಿದಾಗ ಎಚ್ಚರಿಕೆ ನಿಡಿ ಕಳುಹಿಸಿದ್ದರು.