ನೀವು ಎಂದಾದರೂ ದುಬಾರಿ ಐಸ್‌ಕ್ರೀಮ್‌ ತಿಂದಿದ್ದೀರಾ?  ದುಬೈನ ಸ್ಕೂಪಿ ಕೆಫೆ ಎಂಬ ರೆಸ್ಟೋರೆಂಟ್‌ನಲ್ಲಿ ಮಾರಾಟ ಮಾಡುವ ಐಸ್‌ಕ್ರೀಮ್‌ನ ದರ ಬಲು ದುಬಾರಿ

ದುಬೈ "(ಜು.23): ನೀವು ಎಂದಾದರೂ ದುಬಾರಿ ಐಸ್‌ಕ್ರೀಮ್‌ ತಿಂದಿದ್ದೀರಾ? ಅದರ ದರ ಹೆಚ್ಚೆಂದರೂ 1000 ರು. ಇದ್ದೀತು. 

ಆದರೆ, ದುಬೈನ ಸ್ಕೂಪಿ ಕೆಫೆ ಎಂಬ ರೆಸ್ಟೋರೆಂಟ್‌ನಲ್ಲಿ ಮಾರಾಟ ಮಾಡುವ ಐಸ್‌ಕ್ರೀಮ್‌ನ ದರವನ್ನು ಕೇಳಿದರೆ ನೀವು ಒಮ್ಮೆ ಗಾಬರಿ ಆಗುವುದು ಗ್ಯಾರೆಂಟಿ. 

ಐಸ್‌ಕ್ರೀಮ್‌ ಪ್ರಿಯರೇ ನೀವು? ಹಾಗಾದ್ರೆ ಐಸ್‌ಕ್ರೀಮ್‌ ಹುಟ್ಟಿದ್ದೆಲ್ಲಿ ಗೊತ್ತಾ?

ಏಕೆಂದರೆ ಒಂದು ಬೌಲ್‌ ಐಸ್‌ಕ್ರೀಮ್‌ನ ದರ ಬರೋಬ್ಬರಿ 60 ಸಾವಿರ ರು.! ಕ್ರೀಮ್‌ ಮೇಲೆ ಡ್ರೈ ಫ್ರುಟ್ಸ್‌ನ ಬದಲು ಖಾದ್ಯ ಚಿನ್ನದಿಂದ ಅಲಂಕರಿಸಲಾಗಿದೆ. ಹೀಗಾಗಿ ಇದಕ್ಕೆ ಇಷ್ಟೊಂದು ದರ.

ಬಾಳೆ ಎಲೆಯ ಕಪ್‌ನಲ್ಲಿ ಐಸ್‌ಕ್ರೀಂ: ಭಾರತದ ಫೋಟೋ ಮೆಚ್ಚಿದ ನಾರ್ವೆ ಮಾಜಿ ಸಚಿವ

ಈ ಹಿಂದೆ ಇದೇ ರೀತಿ ದುಬಾರಿ ಬಿರ್ಯಾನಿ, ಪಾನ್ ಸೇರಿದಂತೆ ಚಿನ್ನ ಲೇಪಿತ ಆಹಾರಗಳು ಸದ್ದು ಮಾಡಿದ್ದವು. ಇದೀಗ ದುಬೈನ ಅತ್ಯಂತ ದುಬಾರಿ ಚಿನ್ನದ ಐಸ್‌ಕ್ರೀಂ ಸುದ್ದಿಯಾಗಿದೆ,