ಕೇವಲ 30 ಸೆಕೆಂಡ್ ಮಾತ್ರ. ಬರೋಬ್ಬರಿ 4 ಲೀಟರ್ ಹಾಲು ಪ್ಯಾಕೆಟ್‌ನ್ನು ಬುರ್ಖಾಧಾರಿ ಮಹಿಳೆ ಕಳ್ಳತನ ಮಾಡಿದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ಗುಪ್ತ್ ಗುಪ್ತ್ ಕಳ್ಳತನದ ಝಲಕ್ ನಿಮಗೂ ಅಚ್ಚರಿ ತಂದರೂ ಆಶ್ಚರ್ಯವಿಲ್ಲ.

ಜಕರ್ತಾ(ನ.15) ಸೂಪರ್ ಮಾರ್ಕೆಟ್, ಶಾಪಿಂಗ್ ಮಾಲ್‌ನಲ್ಲಿ ಹೈಟೆಕ್ ಕಳ್ಳತನ ನಡೆದ ಹಲವು ವಿಡಿಯೋಗಳು ಭಾರಿ ಸದ್ದು ಮಾಡಿದೆ. ಇದೀಗ ಬುರ್ಖಾಧಾರಿ ಮಹಿಳೆಯೊಬ್ಬಳು ಸೂಪರ್ ಮಾರ್ಕೆಟ್‌ನಲ್ಲಿ ಕೇವಲ 30 ಸೆಕೆಂಡ್‌ನಲ್ಲಿ 4 ಲೀಟರ್‌ಗೂ ಹೆಚ್ಚಿನ ಪ್ಯಾಕೆಟ್ ಹಾಲನ್ನು ಎಗರಿಸಿದ ದೃಶ್ಯ ಇದೀಗ ಭಾರಿ ಸದ್ದು ಮಾಡಿದೆ. ಅತ್ತಾ ಇತ್ತಾ ಸುತ್ತಾ ಮುತ್ತ ನೋಡಿದ ಬುರ್ಖಾಧಾರಿ ಮಹಿಳೆ, ಗುಪ್ತ್ ಗುಪ್ತ್‌ ಆಗಿ ಹಾಲಿನ ಪ್ಯಾಕೆಟ್ ಎಗರಿಸಿ ಒಂದು ಚೂರು ಅನುಮಾನ ಬರದಂತೆ ಸೂಪರ್ ಮಾರ್ಕೆಟ್‌ನಿಂದ ಹೊರನಡೆದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.

ಬುರ್ಖಾಧರಿಸಿ ಸೂಪರ್ ಮಾರ್ಕೆಟ್‌ಗೆ ತೆರಳಿದ ಮಹಿಳೆ ವಸ್ತುಗಳನ್ನು ಖರೀದಿಸುವಂತೆ ನಟಿಸಿದ್ದಾಳೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮೊದಲೇ ಪ್ಲಾನ್ ಮಾಡಿದ್ದ ಮಹಿಳೆ ಒಂದೆರೆಡು ರೌಂಡ್ ಹೊಡೆದಿದ್ದಾಳೆ. ತನ್ನ ಮುಖ ಯಾರಿಗೂ ಕಾಣುತ್ತಿಲ್ಲ, ಇದರಂತೆ ತಾನು ಏನೇ ಮಾಡಿದರೂ ಯಾರಿಗೂ ಗೊತ್ತಾಗಲ್ಲ ಎಂದುಕೊಂಡ ಮಹಿಳೆ ಎರಡು ದೊಡ್ಡ ಪ್ಯಾಕ್ ಹಾಲನ್ನು ತೆಗೆದಿದ್ದಾಳೆ. ಬಳಿಕ ಬಳಿ ಕುಳಿತ ಮಹಿಳೆ ಬುರ್ಖಾದೊಳಗೆ ಹಾಲಿನ ಫಾರ್ಮುಲಾ ಪ್ಯಾಕೆಟ್ ಇಟ್ಟಿದ್ದಾಳೆ. ಬುರ್ಖಾ ಸರಿಮಾಡಿಸಿಕೊಂಡು ಮಹಿಳೆ ಹೊರನಡೆದಿದ್ದಾಳೆ. ಈಕೆಯ ನಡೆತೆಯಲ್ಲಾಗಲಿ ಒಂದಿಂಚು ಗೊತ್ತಾಗುತ್ತಿಲ್ಲ. ಎಲ್ಲಾ ಗ್ರಾಹಕರಂತೆ ಸೂಪರ್ ಮಾರ್ಕೆಟ್‌ಗೆ ಬಂದು ತನಗೆ ಬೇಕಾದ ಉತ್ಪನ್ನ ಸಿಗಲಿಲ್ಲ ಎಂಬಂತೆ ಹೊರನಡೆದಿದ್ದಾರೆ. 

ಬುರ್ಖಾ ವೇಷದಲ್ಲಿ ಮಹಿಳಾ ಉದ್ಯಮಿ ಕಿಡ್ನಾಪ್: ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್!

ಆದರೆ ಈ ಮಹಿಳೆಗೆ ಸೂಪರ್ ಮಾರ್ಕೆಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುತ್ತಾರೆ ಅನ್ನೋದು ತಿಳಿದಿಲ್ಲವೇ ಅಥವಾ ತಾನು ಬುರ್ಖಾ ಹಾಗೂ ಮಾಸ್ಕ್ ಧರಿಸಿದ್ದೇನೆ ಅನ್ನೋ ಕಾರಣಕ್ಕೆ ಯಾರಿಗೂ ತಿಳಿಯಲ್ಲ ಅನ್ನೋ ವಿಶ್ವಾಸವೋ ತಿಳಿದಿಲ್ಲ. ಮಹಿಳೆ ಮಾತ್ರ ತಾನು ನಡೆದಿದ್ದೇ ದಾರಿ ಅನ್ನೋ ರೀತಿ ಬಂದು ಸುಲಭವಾಗಿ ಹಾಲು ಕಳ್ಳತನ ಮಾಡಿದ್ದಾಳೆ. 

View post on Instagram