ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವುದು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಇನ್ನು ಕಾನೂನು ಬಾಹಿರ ಈ ಬಗ್ಗೆ ಡೆನ್ಮಾರ್ಕ್‌ನ ಸಂಸತ್ತು ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗೆ ಅಲ್ಲಿನ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ.

ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವುದು ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಇನ್ನು ಕಾನೂನು ಬಾಹಿರ ಈ ಬಗ್ಗೆ ಡೆನ್ಮಾರ್ಕ್‌ನ ಸಂಸತ್ತು ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಗೆ ಅಲ್ಲಿನ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಕೆಲ ತಿಂಗಳುಗಳ ಹಿಂದೆ ಡೆನ್ಮಾರ್ಕ್‌ ಹಾಗೂ ಸ್ವೀಡನ್‌ನಲ್ಲಿ(Sweden) ಪ್ರತಿಭಟನೆ ವೇಳೆ ಇಸ್ಲಾಂ ಪವಿತ್ರ ಗ್ರಂಥ ಕುರಾನ್‌ ಅನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದರು. ಇದನ್ನು ಖಂಡಿಸಿ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಡೆನ್ಮಾರ್ಕ್ (Denmark) ದೇಶದ ಭದ್ರತೆ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದಾದ ಬಳಿಕ ಈಗ ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಕುರಾನ್ (Quran) ಸುಡುವುದನ್ನು ಅಪರಾಧವಾಗಿಸುವ ಕಾಯ್ದೆ ಜಾರಿಗೆ ತಂದಿದೆ. 

Add Asianetnews Kannada as a Preferred SourcegooglePreferred

ಕಾಯ್ದೆ ಪ್ರಕಾರ ಕುರಾನ್ ಪ್ರತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಸುಡುವುದು, ಅಪವಿತ್ರಗೊಳಿಸುವುದು ಅಪರಾಧವಾಗಿದೆ. ಡೆನ್ಮಾರ್ಕ್ ಹಾಗೂ ಸ್ವೀಡನ್‌ನಲ್ಲಿ ಈ ವರ್ಷ ಹಲವು ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆ ವೇಳೆ ಇಸ್ಲಾಂ ವಿರೋಧಿ (Anti Muslim) ಹೋರಾಟಗಾರರು ನಡುರಸ್ತೆಯಲ್ಲಿಯೇ ಕುರಾನ್‌ಗೆ ಬೆಂಕಿ ಇಟ್ಟಿದ್ದರು. ಇದು ದೇಶದಲ್ಲಿರುವ ಮುಸ್ಲಿಮರೊಂದಿಗೆ ಸ್ಥಳೀಯರ ಉದ್ವಿಗ್ನತೆಗೆ ಕಾರಣವಾಗಿತ್ತು. ಇದರಿಂದ ಸರ್ಕಾರ ಈಗ ಕಾಯ್ದೆ ಜಾರಿಗೆ ತಂದಿದೆ. ಡೆನ್ಮಾರ್ಕ್‌ನ ಕೇಂದ್ರಿಯ ಸಮ್ಮಿಶ್ರ ಸರ್ಕಾರವು ಈ ಹೊಸ ನಿಯಮವೂ ವಾಕ್ ಸ್ವಾತಂತ್ರ್ಯದ ಮೇಲೆ ಸ್ವಲ್ಪಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಆದರೆ ಬೇರೆ ರೀತಿಯಲ್ಲಿ ಧರ್ಮವನ್ನು ಟೀಕೆ ಮಾಡುವುದಕ್ಕೆ ಕಾನೂನುಬದ್ಧವಾದ ಸ್ವಾತಂತ್ರವಿದೆ ಎಂದು ಹೇಳಿದೆ. 

ಸ್ವೀಡನ್ ಮತ್ತು ಡೆನ್ಮಾರ್ಕ್‌ನ ದೇಶೀಯ ಚಿಂತನೆಯ ವಿಮರ್ಶಕರುಗಳು ಈ ಕಾಯ್ದೆಯೂ ಉದಾರವಾದಿ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆ ಎಂದು ದೂರಿದ್ದಾರೆ.