ಹೊಸ ವರ್ಷ ಪಾರ್ಟಿಯಲ್ಲಿ ತೂರಾಡಿದ ಮಾಲೀಕನ ಮನೆ ತಲುಪಿಸಿದ ಮುದ್ದಿನ ಗೂಳಿ!

ಹೊಸ ವರ್ಷದ ಸಂಜೆ ಹೊಲದಲ್ಲೇ ಅಕ್ಕ ಪಕ್ಕ, ನೆರೆ ಹೊಲದವರ ಜೊತೆ ಎಣ್ಣೆ ಪಾರ್ಟಿ. ಪಾರ್ಟಿ ಕೊಂಚ ತಡವಾಗಿದೆ. ಎಣ್ಣೆ ಹೆಚ್ಚಾಗಿದೆ. ನಡೆಯುವುದು ಕಷ್ಟವಾಗಿದೆ. ಈತ ಮನೆಗೆ ವಾಪಸ್ ಆಗಲು ಕ್ಯಾಬ್ ಬುಕ್ ಮಾಡಿಲ್ಲ, ಈತನ ಗೂಳಿ ಎತ್ತು ನೆರವು ನೀಡಿದೆ. ಈ ವಿಡಿಯೋ ಹೊಸ ವರ್ಷದ ಆರಂಭದಲ್ಲೇ ಭಾರಿ ಸ್ಕೋರ್ ಮಾಡಿದೆ.

Bull help drunk owner to return home safely in Brazil watch video ckm

ಬ್ರೆಜಿಲ್(ಜ.02) ಬಹುತೇಕರ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಮದ್ಯ ಕಡ್ಡಾಯ. ಹೊಸ ವರ್ಷ ಸಂಭ್ರಮಾಚರಣೆ ಕಳೆ ಹೆಚ್ಚಾಗುವುದೇ ಇದೇ ಎಣ್ಣೆಯಿಂದ. ತಮ್ಮ ತಮ್ಮ ಅಭಿರುಚಿ, ಬಳಗದ ಜೊತೆಯಲ್ಲಿ ಪಾರ್ಟಿ ಮಾಡಿ ಹೊಸ ವರ್ಷ ಸ್ವಾಗತಿಸುತ್ತಾರೆ. ಈ ಪೈಕಿ ರೈತನೊಬ್ಬ ಆಪ್ತರ ಜೊತೆ ಮನೆಯಿಂದ ಕೆಲ ದೂರದ ಹೊಲದಲ್ಲಿ ಪಾರ್ಟಿ ಮಾಡಿದ್ದಾನೆ. ಪಾರ್ಟಿ ಕೊಂಚ ತಡವಾಗಿದೆ. ಎಣ್ಣೆ ತುಸು ಹೆಚ್ಚಾಗಿದೆ. ನಶೆ ಏರಿದೆ. ಹೀಗಾಗಿ ವಾಪಸ್ ಮನೆಗೆ ಬರುವುದು ಕಷ್ಟವಾಗಿದೆ. ಆದರೆ ತನ್ನ ಜೊತೆಗಿದ್ದ ಗೂಳಿ ಎತ್ತು,  ಮಾಲೀಕನ ಸುರಕ್ಷಿತವಾಗಿ ಮನೆಗೆ ತಲುಪಿಸಿದೆ. ಈ ವಿಡಿಯೋ ಹಲವರ ಹುಬ್ಬೇರಿಸಿದೆ.

ಈ ಘಟನೆ ನಡೆದಿರುವುದು ಬ್ರೆಜಿಲ್ ಎಂದು ವರದಿಗಳು ಹೇಳುತ್ತಿದೆ. ತನ್ನ ಗೂಳಿ ಎತ್ತಿನೊಂದಿಗೆ ಹೊಲಕ್ಕೆ ಹೋದ ರೈತ ಹೊಸ ವರ್ಷದ ಕಾರಣ ಪಾರ್ಟಿ ಆರಂಭಿಸಿದ್ದಾನೆ. ಒಂದಷ್ಟು ಆಪ್ತರು ಸೇರಿಕೊಂಡಿದ್ದಾರೆ. ಮನೆಯಿಂದ ಕೆಲ ದೂರದಲ್ಲಿರುವ ಹೊಲದಲ್ಲಿ ಹೊಸ ವರ್ಷದ ಪಾರ್ಟಿ ನಡೆದಿದೆ. ಪಾರ್ಟಿ ಅಂದ ಮೇಲೆ ಇಂತಿಷ್ಟೇ ಅನ್ನೋ ನಿಯಮ ಇರುವುದಿಲ್ಲ. ಅದು ಭಾರತದ ಕುಗ್ರಾಮವೇ ಆಗಿರಲಿ, ಅಮೆರಿಕ ಬ್ರೇಜಿಲ್ ಆಗಿರಲಿ, ಎಣ್ಣೆ ಪಾರ್ಟಿ, ಪಾರ್ಟಿ ಬಳಿಕದ ಪರಿಸ್ಥಿತಿ ಬಹುತೇಕ ಎಲ್ಲವೂ ಒಂದೆ.

ಹೊಸ ವರ್ಷ ಎಣ್ಣೆ ಮತ್ತಿನಲ್ಲಿ ವಿದ್ಯುತ್ ಕಂಬ ಹತ್ತಿ ಗಡದ್ ನಿದ್ದೆ, ಈತ ಬದುಕುಳಿದಿದ್ದೆ ಪವಾಡ

ಬ್ರಿಜಿಲ್‌ನ ಹಿರಿಯ ವ್ಯಕ್ತಿ ಆಪ್ತರ ಜೊತೆ ಪಾರ್ಟಿ ಮಾಡಿದ್ದಾನೆ. ನಶೆ ಹೆಚ್ಚಾಗಿದೆ. ಯಾರ ಸಹಾಯ ಇಲ್ಲದ ನಡೆಯುವುದು ಕಷ್ಟವಾಗಿದೆ.ಮನೆಗೆ ಕೆಲ ದೂರ ಸಾಗಬೇಕಿದೆ. ಆಪ್ತರಿಗೆ ಗುಡ್ ಬೈ ಹೇಳಿ ತೂರಾಡುತ್ತಾ ಹೆಜ್ಜೆ ಹಾಕಲು ಆರಂಭಿಸಿದ್ದಾನೆ. ಹೀಗೆ ನಡೆದರೆ ತಾನು ಮನೆ ತಲುಪುವುದು ಕಷ್ಟ ಅನ್ನೋದು ಆರಿವಾಗಿದೆ. ತನ್ನ ಜೊತೆಗಿದ್ದ ಗೂಳಿ ಎತ್ತನಿ ಸಹಾಯ ಪಡೆದಿದ್ದಾನೆ. ವಿಶೇಷ ಅಂದರೆ ಮಾಲೀಕ ಪರಿಸ್ಥಿತಿಯನ್ನು ಗೂಳಿ ಎತ್ತು ಅರ್ಥ ಮಾಡಿಕೊಂಡಿದೆ. 

 

 

ಗೂಳಿ ಎತ್ತು ತನ್ನ ತಲೆಯನ್ನು ಮಾಲೀಕನ ಬೆನ್ನ ಹಿಂದೆ ಇಟ್ಟು ದೂಡುತ್ತಾ, ನೇರವಾಗಿ ನಡೆಯುವಂತೆ ಮಾಡಿದೆ. ಮಾಲೀಕನ ಅತ್ತ ಇತ್ತ ವಾಲಿದಾಗಲೂ ಗೂಳಿ ಸರಿಯಾಗಿ ಮಾಲೀಕ ಪೊಸಿಸಶನ್‌ಗೆ ತಕ್ಕಂತೆ ಪುಶ್ ಮಾಡಿದೆ. ರಸ್ತೆಯಲ್ಲಿ ಗೂಳಿ ಸಹಾಯದೊಂದಿಗೆ ತೂರಾಡುತ್ತಾ ಆಗಮಿಸುತ್ತಿದ್ದ ಈ ವ್ಯಕ್ತಿಯನ್ನು ನೋಡಿದ ಹಲವರು ವಿಡಿಯೋ ಮಾಡಿದ್ದಾರೆ. ಇದೇ ವೇಳೆ ಹಲವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ವ್ಯಕ್ತಿ ಮನೆ ತಲುಪಿದ್ದಾನೆ. ಆದರೆ ಮನೆ ತಲುಪಿದ ಬೆನ್ನಲ್ಲೇ ಈತನ ವಿಡಿಯೋಗಳು ವೈರಲ್ ಆಗಿದೆ. ಈ ವಿಡಿಯೋ ಸತ್ಯಾಸತ್ಯತೆ ಕುರಿತ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಮಾಲೀಕನ ನಿಯತ್ತಾಗಿ ಮನೆ ತಲುಪಿಸುವ ಮೂಲಕ ಗೂಳಿ ಇದೀಗ ಹೀರೋ ಆಗಿದೆ. ಮನುಷ್ಯರು ಸಹಾಯ ಮಾಡುವಂತೆ ಗೂಳಿ ಮಾಲೀಕನಿಗೆ ಸಹಾಯ ಮಾಡಿದೆ. ಸರಿದಾರಿಯಲ್ಲಿ ತೂರಾಡದಂತೆ ನಡೆಸಿಕೊಂಡು ಬಂದಿದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಹಲವರು ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಚೆಕ್, ದಂಡ ಪಾವತಿಗಿಂತ ಈ ರೀತಿ ಗೂಳಿ ಸಹಾಯ ಪಡೆಯುವುದೇ ಓಳಿತು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಎಲ್ಲರನ್ನು ಮೀರಿಸಿದ ಕರ್ನಾಟಕ, ಹೊಸ ವರ್ಷ ಸಂಭ್ರಮಾಚರಣೆಗೆ 308 ಕೋಟಿ ರೂ ಮದ್ಯ ಮಾರಾಟ

2025ರ ಹೊಸ ವರ್ಷದ ಆರಂಭದಲ್ಲಿ ಎಣ್ಣೆ ಏಟಿನ ಹಲವು ಕತೆಗಳು ಹೊರಬರತ್ತಿದೆ. ಬ್ರಿಜಿಲ್‌ನಲ್ಲಿ ಎಣ್ಣೆ ಎಟಿನ ಮಾಲೀಕನ ಗೂಳಿ ಮನೆ ತಲುುಪಿಸಿದರೆ, ಆಂಧ್ರ ಪ್ರದೇಶದಲ್ಲಿ ಎಣ್ಣೆ ಎಟಲ್ಲಿ ವಿದ್ಯುತ್ ಕಂಬ ಹತ್ತಿ ನಿದ್ದೆ ಮಾಡಿದ ಘಟನೆ ವರದಿಯಾಗಿದೆ. ಕಂಠಪೂರ್ತಿ ಕುಡಿದ ಕೂಲಿ ಕಾರ್ಮಿಕ ತೂರಾಡಿದ್ದಾನೆ. ಈ ವೇಳೆ ತೂರಾಡುತ್ತಾ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಬಳಿ ಬಂದಿದ್ದಾನೆ. ತನ್ನ ರಸ್ತೆಗೆ ಅಡ್ಡ ಬಂದ ವಿದ್ಯುತ್ ಕಂಬವನ್ನೇ ವ್ಯಕ್ತಿ ಹತ್ತಿದ್ದಾನೆ. ಈತನ ಅರ್ಥಭಾಗ ಹತ್ತುತ್ತಿದ್ದಂತೆ ಸ್ಥಳೀಯರು ಇಳಿಯುವಂತೆ ಸೂೂಚಿಸಿದ್ದಾರೆ. ಆದರೆ ಈತ ಇಳಿದಿಲ್ಲ. ಹೀಗಾಗಿ ಸ್ಥಳೀಯರು ವಿದ್ಯುತ್ ಕೇಂದ್ರಕ್ಕೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಿದ್ದಾರೆ. ವಿದ್ಯುತ್ ಕಂಬಕ್ಕೆ ಹತ್ತಿದ ಕುಡುಕ ಇಳಿಯುವ ಯೋಚನೆ ಮಾಡಲಿಲ್ಲ. ವಿದ್ಯುತ್ ಕಂಬದ ಮೇಲಿದ್ದ ಹೈಟೆನ್ಶನ್ ವೈಯರ್ ಮೇಲೆ ಮಲಗಿದ್ದಾನೆ. ಒಂದೆಡೆ ಕುಡಿತದ ನಶೆ, ಮತ್ತೊಂದೆ ವಿದ್ಯುತ್ ಕಂಬ ಹತ್ತಿದ ಸುಸ್ತು. ಹೀಗಾಗಿ ವೈಯರ್ ಮೇಲೆ ಗಡದ್ ನಿದ್ದೆಗೆ ಜಾರಿದ್ದಾನೆ. ಬಳಿಕ ಪೊಲೀಸರು ಆಗಮಿಸಿ ಸುರಕ್ಷಿತವಾಗಿ ಕುಡುಕ ಇಳಿಸಿದ್ದಾರೆ.
 

Latest Videos
Follow Us:
Download App:
  • android
  • ios