ಲಂಡನ್(ಏ.09): ಬಕಿಂಗ್‌ಹ್ಯಾಮ್ ಅರಮನೆಯ ರಾಯಲ್ ಫ್ಯಾಮಿಲಿ ಎರಡನೆ ರಾಣಿ ಎಲಿಜಬೆತ್ ಪತಿ ಪ್ರಿನ್ಸ್ ಫಿಲಿಪ್ ಇಂದು(ಏ.09) ನಿಧನರಾಗಿದ್ದಾರೆ. 99 ವರ್ಷದ ಪ್ರಿನ್ಸ್ ಫಿಲಿಪ್ ನಿಧನಕ್ಕೆ ಬ್ರಿಟನ್ ಬಕಿಂಗ್‌ಹ್ಯಾಮ್ ಅರಮನೆ  ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

'ಭಾರತದ ಪರಂಪರೆ ನೋಡಿ ಕಲಿಯಿರಿ' ಇಂಗ್ಲೆಂಡ್ ಪ್ರಿನ್ಸ್ ಮಾತಿನ ಒಳಾರ್ಥ!.

ಈ ವರ್ಷದ ಆರಂಭದಲ್ಲಿ ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಫಿಲಿಪ್, ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಮಾರ್ಚ್ 16 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಫ್ರಿನ್ಸ್, ಅರಮನೆಗೆ ಮರಳಿದ್ದರು.  

 

ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್‌ಬರ್ಗ್ ನಿಧನದಿಂದ ನೋವಿನಲ್ಲಿರುವ ಬ್ರಿಟಿಷ್ ಜನತೆ ಹಾಗೂ ರಾಯಲ್ ಫ್ಯಾಮಿಲಿ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ.  ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ಫಿಲಿಪ್, ಅನೇಕ ಸಮುದಾಯಗಳಿಗೆ ಮಾರ್ಗದರ್ಶಕ ಹಾಗೂ ನಾಯಕನಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

 ಪ್ರಿನ್ಸ್ ಫಿಲಿಪ್ ಅವರು ಎಡಿನ್‌ಬರ್ಗ್ ಡ್ಯೂಕ್ ಎಂದೇ ಜನಪ್ರಿಯರಾಗಿದ್ದರು. 1947ರಂದು ಎಲಿಜಬೆತ್ ಅವರನ್ನು ಮದುವೆಯಾಗಿದ್ದರು.2017ರಲ್ಲಿ ಸಾರ್ವಜನಿಕ ಜವಾಬ್ದಾರಿಗಳಿಂದ ಹಿಂದೆ ಸರಿದ ಎಡಿನ್‌ಬರ್ಗ್ ಡ್ಯೂಕ್, ವಿಶ್ರಾಂತಿಗೆ ಜಾರಿದ್ದರು.