ಲಂಡನ್(ಜು.  10) ಕೊರೋನಾ ವೈರಸ್ ವ್ಯಾಪಿಸಿರುವ ಇಂಥ ಸಂಕಷ್ಟದ ಸಮಯದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಭಾರತವನ್ನು ನೋಡಿ ಕಲಿಯಿರಿ ಎಂದು ಪ್ರಿನ್ಸ್ ಚಾರ್ಲ್ಸ್  ಹೇಳಿದ್ದಾರೆ.

ಆರ್ಥಿಕ ಸಂಕಷ್ಟ ಎಲ್ಲರನ್ನು ಕಾಡುತ್ತಿದೆ. ಜನರು ಮತ್ತು ಇಡೀ ಭೂಗೋಳ ಮುಂದಿನ ಬದುಕು ಕಟ್ಟಿಕೊಳ್ಳಲು  ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇಂಡಿಯನ್ ಗ್ಲೋಬಲ್ ವೀಕ್ ನಲ್ಲಿ ಮಾತನಾಡಿದ ಪ್ರಿನ್ಸ್, ನಿಸರ್ಗದತ್ತವಾದ ಶಕ್ತಿಗಳು, ಸಾಮಾಜಿಕ ಬದ್ಧತೆಯನ್ನು ಒಳಗೊಂಡು ಕೆಲಸ ಮಾಡಬೇಕಿದೆ. ಸುಸ್ಥಿರ ಅರ್ಥವ್ಯವಸ್ಥೆ ಕಡೆ ಹೆಜ್ಜೆ ಇಡಬೇಕಿದೆ ಎಂದು ತಿಳಿಸಿದ್ದು ಕೆಲ ಸೂತ್ರಗಳನ್ನು ಹೇಳಿದ್ದಾರೆ.

ಲಾಕ್ ಡೌನ್ ನಡುವೆ WHO ಭಯಾನಕ ಎಚ್ಚರಿಕೆ

ಪ್ರಧಾನಿ  ಮೋದಿ ಅವರೊಂದಿಗೂ ಸುಸ್ಥಿರ ವ್ಯವಸ್ಥೆ ಸಂಬಂಧ ಚಾರ್ಲ್ಸ್ ಮಾತನಾಡಿದ್ದಾರೆ. ವೇದಕಾಲದ 'ಅಪರಿಗ್ರಹ' (ದುರಾಸೆಯಿಲ್ಲದ ವ್ಯವಹಾರ) ವನ್ನು  ಅಳವಡಿಕೆಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಭಾರತ ಯಾವಾಗಲೂ ಸುಸ್ಥಿರ ಅಭಿವೃದ್ಧಿಗೆ ಬದ್ಧವಾಗಿಯೇ ಇದೆ. ಭಾರತದ ಮೌಲ್ಯಗಳು ಮತ್ತು ಸಂಪ್ರದಾಯ ಅದನ್ನು ಎತ್ತಿ ಹೇಳುತ್ತದೆ. ಭಾರತದ ಪುರಾತನ ಪರಂಪರೆಯಿಂದ ನಾವು ಕಲಿತುಕೊಳ್ಳಬೇಕಾದ್ದು ಬಹಳಷ್ಟಿದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ಹಲವು ವಿಚಾರಗಳಲ್ಲಿ ಜತೆಯಾಗಿಯೇ ಸಾಗುತ್ತಿವೆ. ಪರಿಸರ ಪ್ರೇಮಿ ಅರ್ಥವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ, ಸಮುದಾಯದ ಬೆಳವಣಿಗೆ, ಸ್ಪಷ್ಟ ಗುರಿ ಎಲ್ಲವನ್ನು ಇಟ್ಟುಕೊಂಡು ಸಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮೊದಲು ನಮ್ಮನ್ನು ಸುತ್ತಿಕೊಂಡಿರುವ ಕೊರೋನಾದಿಂದ ಹೊರಗೆ ಬರೋಣ, ನಿಧಾನಕ್ಕೆ ಸುಸ್ಥಿರ ಅಭಿವೃದ್ಧಿ ಕಡೆ ಹೆಜ್ಜೆ ಇಡೋಣ ಎಂದು ರಾಜಕುಮಾರ ತಿಳಿಸಿದ್ದಾರೆ.