Asianet Suvarna News Asianet Suvarna News

ಸೀಟ್‌ ಬೆಲ್ಟ್‌ ಧರಿಸದೇ ಕಾರು ಚಾಲನೆ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ಗೆ ದಂಡ

ನಿಯಮಗಳ ಪ್ರಕಾರ ವೈದ್ಯಕೀಯ ತುರ್ತು ಅಗತ್ಯತೆ ಉಳ್ಳವರ ಹೊರತಾಗಿ ಪ್ರತಿಯೊಬ್ಬರು ಸೀಟ್‌ ಬೆಲ್ಟ್‌ ಧರಿಸುವುದು ಕಡ್ಡಾಯ. ಉಲ್ಲಂಘಿಸಿದಲ್ಲಿ 100 ಪೌಂಡ್‌ ದಂಡ  ವಿಧಿಸಲಾಗುತ್ತದೆ.

british pm rishi sunak fined for not wearing seat belt in back of car ash
Author
First Published Jan 22, 2023, 11:18 AM IST

ಲಂಡನ್‌ (ಜನವರಿ 22, 2023): ಸರ್ಕಾರದ ಪ್ರಚಾರದ ಜಾಹೀರಾತಿನ ವಿಡಿಯೋ ಶೂಟಿಂಗ್‌ ವೇಳೆ ಸೀಟ್‌ ಬೆಲ್ಟ್‌ ಧರಿಸದೇ ಕಾರು ಚಾಲನೆ ಮಾಡಿದ್ದಕ್ಕೆ ಬ್ರಿಟಿಷ್‌ ಪೊಲೀಸರು ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ್ದಾರೆ. ತಮ್ಮ ನಡೆಯ ಬಗ್ಗೆ ರಿಷಿ ಗುರುವಾರ ಕ್ಷಮೆ ಕೇಳಿದ್ದರು. ಕೆಲವೇ ಕ್ಷಣಗಳ ವೇಳೆ ತಾವು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಬ್ರಿಟನ್‌ ನಿಯಮಗಳು ಬಿಗಿ ಆಗಿರುವ ಕಾರಣ ಅವರಿಗೆ ಲಂಕಾಶೈರ್‌ ಪೊಲೀಸರು, ಪ್ರಧಾನಿ ಎಂದೂ ಲೆಕ್ಕಿಸದೇ ದಂಡ ಹಾಕಿದ್ದಾರೆ.

ನಿಯಮಗಳ ಪ್ರಕಾರ ವೈದ್ಯಕೀಯ ತುರ್ತು ಅಗತ್ಯತೆ (Health Emergency) ಉಳ್ಳವರ ಹೊರತಾಗಿ ಪ್ರತಿಯೊಬ್ಬರು ಸೀಟ್‌ ಬೆಲ್ಟ್‌ (Seat Belt) ಧರಿಸುವುದು ಕಡ್ಡಾಯ. ಉಲ್ಲಂಘಿಸಿದಲ್ಲಿ 100 ಪೌಂಡ್‌ ದಂಡ (Fine) ವಿಧಿಸಲಾಗುತ್ತದೆ. ನ್ಯಾಯಾಲಯದಲ್ಲಿ (Court) ದಂಡ ಪಾವತಿಸುವುದಾದರೆ 500 ಪೌಂಡ್‌ ವರೆಗೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ: ಬ್ರಿಟನ್‌ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್‌

ವಿವಿಧ ಯೋಜನೆಗಳಿಗೆ (Schemes) ಧನಸಹಾಯಕ್ಕಾಗಿ ಬ್ರಿಟನ್‌ ಸರ್ಕಾರ (Britain Government) ಪ್ರಚಾರ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ವಿಡಿಯೋವೊಂದನ್ನು (Video) ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ರಿಷಿ ಸುನಕ್‌ (Rishi Sunak) ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ. ಈ ವಿಡಿಯೋ ವೈರಲ್‌ ಆಗಿದ್ದು, ಇದರ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದರು. ಈ ಕುರಿತು ಮಾತನಾಡಿರುವ ಪ್ರಧಾನಿ ವಕ್ತಾರರು, ರಿಷಿ ಸ್ವಲ್ಪ ಸಮಯದ ಮಟ್ಟಿಗೆ ಸೀಟ್‌ ಬೆಲ್ಟ್‌ ತೆಗೆದುಹಾಕಿದ್ದರು, ಬಳಿಕ ಕ್ಷಮೆಯಾಚಿಸಿದ್ದಾರೆ ಎಂದಿದ್ದಾರೆ.

ಈ ನಡುವೆ, ಈ ಉಲ್ಲಂಘನೆಯ ಮೇಲೆ ಗಮನ ಹರಿಸಿದ್ದಾಗಿ ಪೊಲೀಸರು ಹೇಳಿದ್ದರು. ಬಳಿಕ ರಿಷಿ ಸುನಕ್‌ಗೆ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: T20 ವಿಶ್ವಕಪ್ ಫೈನಲ್‌ಗೆ ಮುನ್ನ ಇಂಗ್ಲೆಂಡ್ ತಂಡಕ್ಕೆ ಸಂದೇಶ ನೀಡಿದ ರಿಷಿ ಸುನಕ್

Follow Us:
Download App:
  • android
  • ios