ನವದೆಹಲಿ(ಜೂ.07): ಕೊರೋನಾ ಅಟ್ಟಹಾಸಕ್ಕೆ ಗುರಿಯಾದ ರಾಷ್ಟ್ರಗಳಲ್ಲಿ ಬ್ರಿಟನ್ ಕೂಡ ಒಂದು. ಬ್ರಿಟನ್ ಸರ್ಕಾರ ಲಸಿಕೆಗಾಗಿ ಕೋಟಿ ಕೋಟಿ ರೂಪಾಯಿ ನೀಡಿದೆ. ಇದೀಗ ಬ್ರಿಟಿಷ್ ಫಾರ್ಮಸಿ ಕಂಪನಿ ಮಹತ್ವದ ಘೋಷಣೆ ಮಾಡಿದೆ. ಬ್ರಟಿಷ್ ಫಾರ್ಮಸಿ ಸಹಯೋಗದಲ್ಲಿ ಕೊರೋನಾ ಲಸಿಕೆ ಸಂಶೋಧನೆ ಮಾಡುತ್ತಿರುವ ಅಸ್ತ್ರಝೆಂಕಾ ಕೊರೋನಾ ಲಸಿಕೆ ಉತ್ಪಾದನೆಗೆ ತಯಾರಿ ಮಾಡಿದೆ. ಸೆಪ್ಟೆಂಬರ್ ವೇಳೆ 10 ಕೋಟಿ ಕೊರೋನಾ ಲಸಿಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಪೂರೈಕೆ ಮಾಡಲು ತಯಾರಿ ಆರಂಭಿಸಿದೆ.

ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!

ಕೊರೋನಾ ಲಸಿಕೆ ಸಂಶೋದನೆ ಮಾಡಲಾಗಿದೆ. ಇದೀಗ ಮಾನವರಿಗೆ ಪ್ರಯೋಗ ನಡೆಯುತ್ತಿದೆ. ಪ್ರಾಥಮಿಕ ಹಂತದ ಯಶಸ್ಸು ಕೂಡ ಸಿಕ್ಕಿದೆ. ಅಂತಿಮ ಹಂತದ ಪ್ರಯೋಗದಲ್ಲಿ ಅಸ್ತ್ರಝೆಂಕಾ ತೊಡಗಿದೆ. ಅಂತಿಮ ಹಂತದ ಪ್ರಯೋಗ ಯಶಸ್ವಿಯಾದರೆ, ಲಸಿಕೆ ಉತ್ಪದನಾ ಕಾರ್ಯ ಆರಂಭಿಸಲಾಗುವುದು ಎಂದು ಅಸ್ತ್ರಝೆಂಕಾ ಹೇಳಿದೆ. ಸೆಪ್ಟೆಂಬರ್ ವೇಳೆಗೆ 10 ಕೋಟಿ ಲಸಿಕೆ ಪೂರೈಕೆ ಮಾಡಲಾಗುವುದು ಎಂದಿದೆ.

ಬ್ರಿಟನ್ ಮಾತ್ರವಲ್ಲ, ಭಾರತ, ಸ್ವಿಟ್ಜರ್‌ಲೆಂಡ್, ನಾರ್ವೇ ಸೇರಿದಂತೆ ಹಲವು ದೇಶಗಳಿಗೆ ಕೊರೋನಾ ಲಸಿಕೆ ಪೂರೈಕೆ ಮಾಡಲು ಬ್ರಿಟನ್ ಫಾರ್ಮಸಿ ಸಜ್ಜಾಗಿದೆ. ವಿಶ್ವದ ಚಿತ್ತ ಇದೀಗ ಬ್ರಿಟನ್ ಫಾರ್ಮಸಿಯತ್ತ ನೆಟ್ಟಿದೆ. ಆದಷ್ಟು ಬೇಗ ಲಸಿಕೆ ತಯಾರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.