ಪ್ರಸ್ತುತ ಬ್ರಿಟನ್‌ ಹಾಗೂ ಭಾರತ ಯಾವುದೇ ಮುಕ್ತ ವ್ಯಾಪಾರ ಒಪ್ಪಂದ ಹೊಂದಿಲ್ಲ. ಹಾಗಾಗಿ ಇದರಿಂದ ಅಕ್ಷತಾ ಅವರಿಗೆ ಲಾಭ ದೊರಕಿದಂತಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಪ್ರಶ್ನೆಗೆ ಒಳಪಡಬಹುದು ಎಂದು ಹೇಳಾಗಿದೆ. ಅಲ್ಲದೇ ಜಿ20 ಶೃಂಗದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಸುನಕ್‌ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತನಾಡಬಹುದು ಎಂದು ಹೇಳಲಾಗುತ್ತಿದೆ.

ಲಂಡನ್‌(ಆ.28): ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಹೆಸರಲ್ಲಿರುವ ಸುಮಾರು 5 ಸಾವಿರ ಕೋಟಿ ರು. ಮೌಲ್ಯದ ಇಸ್ಫೋಸಿಸ್‌ ಶೇರಿಗೆ ಸಂಬಂಧಿಸಿದಂತೆ ಮುಕ್ತ ವ್ಯಾಪಾರ ಒಪ್ಪಂದ ಪ್ರಸ್ತಾವದಂತೆ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಸ್ತುತ ಬ್ರಿಟನ್‌ ಹಾಗೂ ಭಾರತ ಯಾವುದೇ ಮುಕ್ತ ವ್ಯಾಪಾರ ಒಪ್ಪಂದ ಹೊಂದಿಲ್ಲ. ಹಾಗಾಗಿ ಇದರಿಂದ ಅಕ್ಷತಾ ಅವರಿಗೆ ಲಾಭ ದೊರಕಿದಂತಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್‌ ಪ್ರಶ್ನೆಗೆ ಒಳಪಡಬಹುದು ಎಂದು ಹೇಳಾಗಿದೆ. ಅಲ್ಲದೇ ಜಿ20 ಶೃಂಗದ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸುತ್ತಿರುವ ಸುನಕ್‌ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆಯೂ ಮಾತನಾಡಬಹುದು ಎಂದು ಹೇಳಲಾಗುತ್ತಿದೆ.

ಸುನಕ್‌, ಬ್ರೆಜಿಲ್‌ ಅಧ್ಯಕ್ಷರ ಜತೆ ಮೋದಿ ಯಶಸ್ವಿ ದ್ವಿಪಕ್ಷೀಯ ಸಭೆ

ಸರ್ಕಾರದಿಂದ ನೆರವು ಪಡೆಯುತ್ತಿರುವ ಸಂಸ್ಥೆಯೊಂದರಲ್ಲಿ ಅಕ್ಷತಾ ಶೇರು ಹೊಂದಿದ್ದಾರೆ ಎಂದು ಸಂಸದೀಯ ತನಿಖಾ ಸಂಸ್ಥೆ ಕಳೆದ ವಾರ ಆರೋಪ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸುನಕ್‌ ಸಂಸತ್ತಿನ ಕ್ಷಮೆ ಕೇಳಿದ್ದರು.