ಬ್ರಿಟನ್ ಪ್ರಧಾನಿ ರಿಷಿ ಸುನಕ್ ಈಗಾಗಲೇ ನಿಯಮ ಉಲ್ಲಂಘನೆಯಿಂದ ದಂಡ ಕಟ್ಟಿದ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ತಮ್ಮ ಪ್ರೀತಿಯ ನಾಯಿಗಾಗಿ ಮತ್ತೆ ನಿಯಮ ಉಲ್ಲಂಘಿಸಿದ್ದಾರೆ. ಇದರ ಪರಿಣಾಮ ಸುನಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಂಡನ್(ಮಾ.15): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದೆ ಲಾಕ್‌ಡೌನ್ ನಿಯಮ ಉಲ್ಲಂಘನೆ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದೆ ಪ್ರಯಾಣಿಸಿದ ಕಾರಣಕ್ಕೆ ದಂಡ ಸೇರಿದಂತೆ ಕೆಲ ನಿಯಮ ಉಲ್ಲಂಘನೆಯಿಂದ ಸದ್ದು ಮಾಡಿದ್ದರು. ಇದೀಗ ರಿಷಿ ಸುನಕ್ ತಮ್ಮ ಪ್ರೀತಿಯ ನಾಯಿ ವಿಚಾರದಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಹೈಡ್ ಪಾರ್ಕ್‌ನಲ್ಲಿ ರಿಷಿ ಸುನಕ್ ಹಾಗೂ ಕುಟುಂಬ ತಮ್ಮ ಸಾಕು ನಾಯಿ ಲ್ಯಾಬ್ರಡಾರ್ ನೋವಾ ಹಾಯಾಗಿ ತಿರುಗಾಡಲು ಬಿಟ್ಟಿದ್ದಾರೆ. ಈ ಪಾರ್ಕ್‌ನಲ್ಲಿ ಈ ರೀತಿ ನಾಯಿಗಳನ್ನು ಬಿಡುವಂತಿಲ್ಲ. ಈ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಈ ಕುರಿತು ಪೊಲೀಸರು ರಿಷಿ ಸುನಕ್ ಹಾಗೂ ಕುಟುಂಬಕ್ಕೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಹೈಡ್ ಪಾರ್ಕ್‌ನಲ್ಲಿ ನಾಯಿ ಕರೆದುಕೊಂಡು ಹೋಗಲು ಅನುಮತಿ ಇದೆ. ಆದರೆ ನಾಯಿಯ ಬೆಲ್ಟ್ ತೆದೆದು ತನ್ನಿಷ್ಟಕ್ಕೆ ತಾನೇ ತಿರುಗಾಡಲು ಅವಕಾಶವಿಲ್ಲ. ಮಾಲೀಕರು ಬೆಲ್ಟ್ ಅಥವಾ ಚೈನ್ ಮೂಲಕವೇ ಕರೆದುಕೊಂಡು ಹೋಗಬೇಕು. ಇಲ್ಲಿನ ವನ್ಯಜೀವಿಗಳಿಗೆ ಹಾಗೂ ಪಾರ್ಕ್‌ಗೆ ಆಗಮಿಸುವ ಯಾರಿಗೂ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಈ ನಿಯಮ ಜಾರಿಯಲ್ಲಿದೆ. ಈ ನಿಮಯದ ಕುರಿತು ಹೈಡ್ ಪಾರ್ಕ್‌ನ ಹಲವು ಭಾಗದಲ್ಲಿ ಸೂಚನಾ ಫಲಕ ಹಾಕಲಾಗಿದೆ.
ಬ್ರಿಟನ್ ಸಂಸತ್ತಲ್ಲಿ ಪ್ರಧಾನಿ ಮೋದಿ ಸಮರ್ಥಿಸಿದ ಪ್ರಧಾನಿ ರಿಷಿ ಸುನಕ್
ಇದ್ಯಾವುದನ್ನು ಪರಿಗಣಿಸಿದ ರಿಷಿ ಸುನಕ್ ತಮ್ಮ ನೋವಾ ನಾಯಿಯನ್ನು ಅಡ್ಡಾಯಲು ಬಿಟ್ಟಿದ್ದಾರೆ. ಇತ್ತ ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ ಹಾಗೂ ಮಕ್ಕಳು ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗಿದೆ. ಇತ್ತ ಹಲವರು ನಾಯಿ ತನ್ನಷ್ಟಕ್ಕೆ ತಾನು ಅಡ್ಡಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಸೂಚಿಸಿದ್ದಾರೆ.
ಇತ್ತ ಪೊಲೀಸರು ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿಗೆ ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಸೂಚನೆ ಬೆನ್ನಲ್ಲೇ ಅಕ್ಷತಾ ಮೂರ್ತಿ ನಾಯಿಯನ್ನು ಹಿಡಿದು ಬೆಲ್ಟ್ ಹಾಕಿದ್ದಾರೆ. ಆದರೆ ಸುನಕ್ ನಿಯಮ ಉಲ್ಲಂಘನೆ ಇದೀಗ ಭಾರಿ ಚರ್ಚೆಯಾಗಿದೆ.
ಶ್ವಾನದೊಂದಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್
ಈಗಾಗಲೇ ರಿಷಿ ಸುನಕ್ ಎರಡು ಬಾರಿ ನಿಯಮ ಉಲ್ಲಂಘಿಸಿ ಭಾರಿ ಟೀಕಿಗೆ ಗುರಿಯಾಗಿದ್ದಾರೆ. ಜನವರಿ ತಿಂಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ರಿಷ್ ಸುನಕ್ ದಂಡ ಪಾವತಿಸಿದ್ದರು. ಸರ್ಕಾರದ ಪ್ರಚಾರದ ಜಾಹೀರಾತಿನ ವಿಡಿಯೋ ಶೂಟಿಂಗ್ ವೇಳೆ ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮಾಡಿದ್ದಕ್ಕೆ ಬ್ರಿಟಿಷ್ ಪೊಲೀಸರು ಪ್ರಧಾನಿ ರಿಷಿ ಸುನಕ್‌ಗೆ ದಂಡ ವಿಧಿಸಿದ್ದರು. ತಮ್ಮ ನಡೆಯ ಬಗ್ಗೆ ರಿಷಿ ಗುರುವಾರ ಕ್ಷಮೆ ಕೇಳಿದ್ದರು. ಕೆಲವೇ ಕ್ಷಣಗಳ ವೇಳೆ ತಾವು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ ಬ್ರಿಟನ್ ನಿಯಮಗಳು ಬಿಗಿ ಆಗಿರುವ ಕಾರಣ ಅವರಿಗೆ ಲಂಕಾಶೈರ್ ಪೊಲೀಸರು, ಪ್ರಧಾನಿ ಎಂದೂ ಲೆಕ್ಕಿಸದೇ ದಂಡ ಹಾಕಿದ್ದಾರೆ. ನಿಯಮಗಳ ಪ್ರಕಾರ ವೈದ್ಯಕೀಯ ತುರ್ತು ಅಗತ್ಯತೆ ಉಳ್ಳವರ ಹೊರತಾಗಿ ಪ್ರತಿಯೊಬ್ಬರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಉಲ್ಲಂಘಿಸಿದಲ್ಲಿ 100 ಪೌಂಡ್ ದಂಡ ವಿಧಿಸಲಾಗುತ್ತದೆ.
