Asianet Suvarna News Asianet Suvarna News

ಡೌನಿಂಗ್ ಸ್ಟ್ರೀಟ್‌ಗೆ ವಿಜಯ್ ಮಾಮ ಆಹ್ವಾನಿಸಿದ ರಿಷಿ ಸುನಕ್, ವಿಡಿಯೋ ವೈರಲ್!

ಬ್ರಿಟನ್ ನೂತನ ಪ್ರಧಾನಿ ರಿಶಿ ಸುನಕ್ ವಿಡಿಯೋ ಕಾಲ್ ವೈರಲ್ ಆಗಿದೆ. ಈ ಕಾಲ್‌ನಲ್ಲಿ ಸುನಕ್, ಹಾಯ್ ವಿಜಯ್ ಮಾಮಾ, ಇಲ್ಲಿಗೆ ಬನ್ನಿ ಎಂದು ಅಹ್ವಾನ ನೀಡಿದ್ದಾರೆ. ಯಾರಿದು ವಿಜಯ್ ಮಾಮ ಎಂದು ಭಾರಿ ಚರ್ಚೆಗಳಾಗುತ್ತಿದೆ.  

Britain New PM Rishi sunak invite Vijay mama to no 10 Downing Street viral video on social media ckm
Author
First Published Oct 28, 2022, 7:00 PM IST

ಲಂಡನ್(ಅ.28):  ಹಾಯ್ ವಿಜಯ್ ಮಾಮ, ಹೇಗಿದ್ದೀರಿ? ನಾನು ರಿಶಿ, ನೀವು ನಂ.10 ಡೌನಿಂಗ್ ಸ್ಟ್ರೀಟ್‌ಗೆ ಬನ್ನಿ. ಇದು ಬ್ರಿಟನ್ ನೂತನ ಪ್ರಧಾನಿ ರಿಶಿ ಸುನಕ್ ನೀಡಿದ ಅಹ್ವಾನ. ವಿಡಿಯೋ ಕಾಲ್ ಮೂಲಕ ವಿಜಯ್ ಮಾಮಗೆ ಆಹ್ವಾನ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಸೆಲೆಬ್ರೆಟಿ ಚೆಫ್ ಸಂಜಯ್ ರೈನಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ರಿಷಿ ಸುನಕ್ ಭೇಟಿಯಾಗಿರುಲ ಸಂಜಯ್ ರೈನಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ವಿಡಿಯೋ ಕಾಲ್ ಮಾಡಿ ವಿಜಯ್ ಅವರ ಜೊತೆ ಮಾತನಾಡಿದ್ದಾರೆ. ಬಳಿಕ ನನ್ನ ಜೊತೆ ವಿಶೇಷ ವ್ಯಕ್ತಿಯೊಬ್ಬರಿದ್ದಾರೆ ಎಂದು ರಿಶಿಗೆ ಫೋನ್ ಕಾಲ್ ನೀಡಿದ್ದಾರೆ. ಈ ವೇಳೆ ರಿಶಿ ಸುನಕ್ , ಹಾಯ್ ವಿಜಯ್ ಮಾಮ ಎಂದಿದ್ದಾರೆ. ಇಷ್ಟೇ ಅಲ್ಲ ನ.10 ಡೌನಿಂಗ್ ಸ್ಟ್ರೀಟ್ ನಿವಾಸಕ್ಕೆ ಆಹ್ವಾನಿಸಿದ್ದಾರೆ. 

ಹಾಯ್ ವಿಜಯ್ ಮಾಮ, ನಾನು ರಿಷಿ. ನೀವು ಹೇಗಿದ್ದೀರಿ? ನೀವು ಇಲ್ಲಿಗೆ ಬಂದು ನನ್ನು ಭೇಟಿಯಾಗುತ್ತೀರಿ ಎಂದು ಭಾವಿಸುತ್ತೇನೆ. ನೀವು ಇಲ್ಲಿಗೆ ಬಂದಾಗ ಡೌನಿಂಗ್ ಸ್ಟ್ರೀಟ್‌ಗೆ ಕರೆದುಕೊಂಡು ಬರಲು  ನಿಮ್ಮ ಸಂಬಂಧಿ ಸಂಜಯ್ ಬಳಿ ಹೇಳಿ ಎಂದಿದ್ದಾರೆ. ಈ ವಿಡಿಯೋ ಹಂಚಿಕೊಂಡಿರುವ ಸಂಜಯ್ ರಾನಾ ವಿಜಯ್ ಮಾಮ ಆಗಮನಕ್ಕೆ ವಿಸಾ ರೆಡಿಯಾಗಿದೆ ಎಂದು ಬರೆದುಕೊಂಡಿದ್ದಾರೆ. 

ಬೆಂಗ್ಳೂರಿಗೆ ಬಂದಾಗ ವಿದ್ಯಾರ್ಥಿ ಭವನದ ದೋಸೆ ಸವಿದಿದ್ದ ರಿಷಿ ಸುನಕ್‌..!

ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ಬಾರಿ ಸದ್ದು ಮಾಡುತ್ತಿದೆ. ರಿಶಿ ಸುನಕ್ ಹಾಯ್ ಹೇಳಿದ ವಿಜಯ್ ಮಾಮ ಯಾರು? ಎಂದು ಚರ್ಚೆ ಆರಂಭಗೊಂಡಿದೆ. ಮತ್ತೆ ಕೆಲವರು ಪ್ರಧಾನಿ ಪಟ್ಟಕ್ಕೇರಿದರೂ ರಿಶಿ ತಮ್ಮ ಸಂಬಂಧ, ಆತ್ಮೀಯತೆ, ಗೆಳೆತನ ಹಾಗೇ ಉಳಿಸಿಕೊಂಡಿದ್ದಾರೆ. ಅವರ ಮಾತುಗಳಲ್ಲಿನ ಆತ್ಮೀಯತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದಿದ್ದಾರೆ.

 

 

ವೈರಲ್ ವಿಡಿಯೋದ ಚರ್ಚೆ ಇಷ್ಟಕ್ಕೆ ನಿಂತಿಲ್ಲ. ಸುನಕ್ ಹಾಯ್ ಹೇಳಿದ ವಿಜಯ್ ಮಾಮ, ಭಾರತದ ವಿಜಯ್ ಮಲ್ಯ ಇರಬಹುದೇ ಎಂದು ಕೆಲವರು ಕುಟುಕಿದ್ದಾರೆ. 

ಮುಕ್ತ ವ್ಯಾಪಾರ ಒಪ್ಪಂದ: ಮೋದಿ-ಸುನಕ್‌ ಬದ್ಧತೆ
ಭಾರತೀಯ ಮೂಲದ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೂರವಾಣಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿದ್ದಾರೆ. ಯುರೋಪ್‌ನಿಂದ ಬ್ರಿಟನ್‌ ಹೊರಗೋಗುವ ‘ಬ್ರೆಕ್ಸಿಟ್‌’ ನಂತರ ಬ್ರಿಟನ್‌ ಭಾರತದೊಂದಿಗೆ ಮಾಡಿಕೊಳ್ಳುತ್ತಿರುವ ಮೊದಲ ಮುಕ್ತ ವ್ಯಾಪಾರ ಒಪ್ಪಂದ ಇದಾಗಲಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ ‘ಇಂದು ರಿಷಿ ಸುನಕ್‌ ಅವರೊಂದಿಗೆ ಮಾತನಾಡಿ ಸಂತೋಷವಾಯಿತು. ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇನೆ. ನಾವು ಒಟ್ಟಿಗೆ ಸೇರಿ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ. ಸಮಗ್ರ ಮತ್ತು ಸಮತೋಲಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಶೀಘ್ರವೇ ಅಂತಿಮಗೊಳಿಸಲು ನಾವು ಒಪ್ಪಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

 

ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ!

ದೊಡ್ಡ ಮನೆ ಬಿಟ್ಟು ಸುನಕ್‌ ‘ಚಿಕ್ಕ’ ಪ್ರಧಾನಿ ನಿವಾಸಕ್ಕೆ
ಬ್ರಿಟನ್‌ ರಾಜನಿಗಿಂತಲೂ ದುಪ್ಪಟ್ಟು ಸಂಪತ್ತು ಹೊಂದಿರುವ ಬ್ರಿಟನ್‌ ನೂತನ ಪ್ರಧಾನಿ ರಿಷಿ ಸುನಕ್‌ ಲಂಡನ್‌ನಲ್ಲಿರುವ ತಮ್ಮ ಐಷಾರಾಮಿ ನಿವಾಸ ಬಿಟ್ಟು ಬ್ರಿಟನ್‌ ಪ್ರಧಾನಿಯ ಅಧಿಕೃತ ನಿವಾಸವಾಗಿರುವ ನಂ.10 ಡೌನಿಂಗ್‌ ಸ್ಟ್ರೀಟ್‌ನ ಚಿಕ್ಕ ಫ್ಲಾಟಿಗೆ ಸ್ಥಳಾಂತರಗೊಂಡಿದ್ದಾರೆ. ‘ಸುನಕ್‌ ಕ್ಯಾಲಿಫೋರ್ನಿಯಾದಲ್ಲಿ ಪೆಂಟ್‌ಹೌಸ್‌, ಲಂಡನ್‌ನ ಪ್ರತಿಷ್ಠಿತ ಕೆನ್ಸಿಂಗ್ಟನ್‌ ಜಿಲ್ಲೆಯಲ್ಲಿ ಅಪಾರ್ಚ್‌ಮೆಂಟ್‌ ಹಾಗೂ ಉತ್ತರ ಇಂಗ್ಲೆಂಡಿನ ಯಾರ್ಕ್ಶೈರ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ತಮ್ಮ ಐಷಾರಾಮಿ ನಿವಾಸಗಳಿದ್ದರೂ ರಿಷಿ ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ ಚಿಕ್ಕ ಫ್ಲಾಟಿನಲ್ಲಿ ತಮ್ಮ ಕುಟುಂಬದ ಜತೆ ಬಂದು ನೆಲೆಸಲಿದ್ದಾರೆ’ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios