ನವದೆಹಲಿ (ನ. 13): ಮುಂದಿನ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸಾಯಿಸ್ ಬೋಲ್‌ಸನಾರೋ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಬ್ರೆಜಿಲ್‌ಗೆ ಬಂದಿ ಳಿದ್ದು, ಈ ಭೇಟಿ ವೇಳೆಯೇ ಮೆಸಾಯಿಸ್ ಅವರಿಗೆ ಅಧಿಕೃತ ಆಹ್ವಾನ ನೀಡುವ ಸಾಧ್ಯತೆ ಇದೆ. ತನ್ನ ಮಿತ್ರರಾಷ್ಟ್ರಗಳ ಮುಖ್ಯಸ್ಥರನ್ನು ದೇಶದ ಸಾಂಸ್ಕೃತಿಕ, ಮಿಲಿಟರಿ ಶಕ್ತಿ ಅನಾವರಣ ಮಾಡುವ ಗಣರಾ ಜ್ಯೋತ್ಸವ ಮುಖ್ಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸುವ ಮೂಲಕ ಅವರನ್ನು ಗೌರವಿಸುವ ಸಂಪ್ರದಾಯನ್ನು ಭಾರತ ಪಾಲಿಸುತ್ತಿದೆ.

ಆರ್ಥಿಕ ಹಿತಾಸಕ್ತಿ, ಕಾರ್ಯತಂತ್ರ, ದ್ವರಾಜತಾಂತ್ರಿಕ ಸಂಬಂಧದ ಆಧಾರದ ಮೇಲೆ ಗಣರಾಜ್ಯೋತ್ಸಕ್ಕೆ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.  ಡೊನಾಲ್ಡ್ ಟ್ರಂಪ್ ಬರುವುದಕ್ಕೆ ನಿರಾಕರಿಸಿದ ನಂತರ ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ  ಅವರನ್ನು ಆಹ್ವಾನಿಸಲಾಗಿದೆ. 

ಒಂದು ವೇಳೆ ಬೋಲ್‌ಸನಾರೋ ಭಾರತಕ್ಕೆ ಬರುವುದಕ್ಕೆ ಒಪ್ಪಿದರೆ ಇದು ಅವರ ಮೊದಲ ಭೇಟಿಯಾಗಿರುತ್ತದೆ. ಫರ್ನಾಂಡೋ ಕಾರ್ಡೋಸೋ, ಲುಲಾ ದ ಸಿಲ್ವಾ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವ ಮೂರನೇ ಅಧ್ಯಕ್ಷ ಇವರಾಗಿರುತ್ತಾರೆ.