ಪಂದ್ಯವಾಡಿ ಕೋಪ ಬಗೆಹರಿಸಿಕೊಂಡ ರಾಜಕಾರಣಿಗಳು ಬ್ರೆಜಿಲ್ ನಲ್ಲಿ ನಡೆದ ಅಪರೂಪದ ಘಟನೆ ದೈಹಿಕ ಹೋರಾಟ ಮಾಡಿ ಗೆದ್ದ ಮೇಯರ್
ಬ್ರೆಜಿಲ್(ಡಿ.15): ರಾಜಕೀಯದಲ್ಲಿ ಭಿನ್ನಾಭಿಪ್ರಾಯಳು ಸಾಮಾನ್ಯ. ಪಕ್ಷಗಳ ನಡುವೆ, ನಾಯಕರುಗಳ ನಡುವೆ ಭಿನ್ನಾಭಿಪ್ರಾಯವಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ಹಿರಿಯರ ಸಮ್ಮುಖದಲ್ಲಿ ಕೂತು ಬಗೆ ಹರಿಸಿಕೊಳ್ಳುತ್ತೇವೆ . ಇಲ್ಲವೇ ತಿಳಿದವರು ಈ ಬಿನ್ನಾಭಿಪ್ರಾಯಗಳನ್ನು ಸರಿ ಮಾಡುತ್ತಾರೆ. ಇಲ್ಲವೇ ವ್ಯಕ್ತಿ ತನ್ನೊಳಗೆ ತಾನೇ ಅರಿತು ಸರಿ ಪಡಿಸಿಕೊಳ್ಳಲು ಮುಂದಾಗುತ್ತಾನೆ. ಹೊರತು ಯಾರೂ ಕೂಡ ದೈಹಿಕ ಹೋರಾಟಕ್ಕೆ ಮುಂದಾಗುವುದಿಲ್ಲ. ದೈಹಿಕ ಹೋರಾಟ ಎಂದಾಗ ಅದು ಭಿನ್ನಾಭಿಪ್ರಾಯ ಅನಿಸಿಕೊಳ್ಳುವುದಿಲ್ಲ. ಆದರೆ ಬ್ರೆಜಿಲ್ ನಲ್ಲಿ ಮಾತ್ರ ರಾಜಕಾರಣಿಗಳು ಭಿನ್ನಾಭಿಪ್ರಾಯವನ್ನು ಹೇಗೆ ಬಗೆಹರಿಸಿಕೊಂಡರು ಎಂದರೆ ನೀವು ಅಚ್ಚರಿಪಡುವುದಂತು ಸುಳ್ಳಲ್ಲ.
ಬ್ರೆಜಿಲ್ ನ ಇಬ್ಬರು ರಾಜಕಾರಣಿಗಳು ಮೂರು ಸುತ್ತಿನ MMA(Mixed martial arts) ಹೋರಾಟದಲ್ಲಿ ಪರಸ್ಪರ ಸೋಲಿಸುವ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ತೀರ್ಮಾನಿಸಿದರು. ಇದೊಂದು ರೀತಿಯ ಬಾಕ್ಸಿಂಗ್ ಆಟ. ಬೋರ್ಬಾ ನಗರದ ಮೇಯರ್ ಸಿಮಾವೊ ಪೀಕ್ಸೊಟೊ (Simao Peixoto) ಅವರು ಮಾಜಿ ಕೌನ್ಸಿಲರ್ ಎರಿನ್ಯು ಆಳ್ವಾಸ್ ಡಾ ಸಿಲ್ವಾ (Erineu Alvas Da Silva) ಅವರೊಂದಿಗೆ ಎಂಎಂಎ ಫೈಟಿಂ ಗ್ ಮಾಡಿದರು. ಇದರಲ್ಲಿ ಮೇಯರ್ ಸಿಮಾವೊ ಪೀಕ್ಸೊಟೊ ಗೆಲುವು ಕಂಡರು. ಈ ಅಪರೂಪದ ಪಂದ್ಯವನ್ನು ನೋಡಲು ಸಾಕಷ್ಟು ಮಂದಿ ಸೇರಿದ್ದರು.
Viral video: ನಾಯಿಯನ್ನು ಮೊದಲ ಬಾರಿ ನೋಡಿದ ಮಗುವಿನ ಕ್ಯೂಟ್ ರಿಯಾಕ್ಷನ್ ನೋಡಿ
ರೆಫರಿಯ ಸಮ್ಮುಖದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಕಾರಣಿಗಳು ಪರಸ್ಪರರ ಒಬ್ಬರ ಮೇಲೆ ಒಬ್ಬರು ಬಲವಾಗಿ ಹೊಡೆದುಕೊಂಡರು , ಒದೆಗಳನ್ನು ತಿಂದುಕೊಂಡರು. ಇವರ ಪಂದ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ರಾಜಕಾರಣಿಗಳ ಸಾಮರ್ಥ್ಯವನ್ನು ಕಂಡು ಹರ್ಷೋದ್ಗಾರ ಮಾಡಿದರು. ಬಹಳ ಹೊತ್ತಿನ ಫೈಟ್ ನಂತರ ಮೇಯರ್ ಸಿಮಾವೊ ಪೀಕ್ಸೊಟೊ ಅವರ ಒದೆಗಳಿಂದ ಸುಸ್ತಾದ ಡಾ ಸಿಲ್ವಾ ಸೋಲು ಕಾಣಬೇಕಾಯಿತು.
Fact Check: ಕಪ್ಪು ಮೈಬಣ್ಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಬರೆದ ಮಾಡೆಲ್ ?
ಹೋರಾಟವು 13 ನಿಮಿಷಗಳ ಕಾಲ ನಡೆಯಿತು ಮತ್ತು ಪೀಕ್ಸೊಟೊ ತಂಡದಿಂದ ಪಂದ್ಯವನ್ನು ಲೈವ್-ಸ್ಟ್ರೀಮ್ ಮಾಡಲಾಗಿತ್ತು. ಈ ವಿಶೇಷ ಪಂದ್ಯದ ಟಿಕೆಟ್‌ಗಳನ್ನು 100 ಡಾಲರ್ ಗೆ ಮಾರಾಟ ಮಾಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದಿದೆ.
Risks Major Wardrobe Malfunction : ಕಾಣಬಾರದ್ದನ್ನು ಕಾಣಿಸಿ ಟ್ರೋಲಿಗರ ಕೈಗೆ ಸಿಕ್ಕಿದ್ದ ಪಾಯಲ್ ಗೆ ಮುಗಿಯದ ಕಾಟ!
ವರದಿಗಳ ಪ್ರಕಾರ, ಬೋರ್ಬಾ ನಗರದಲ್ಲಿನ ವಾಟರ್ ಪಾರ್ಕ್ ಅನ್ನು ಪೀಕ್ಸೊಟೊ ನಿರ್ವಹಣೆ ಮಾಡಿದ್ದರು. ಇದನ್ನು ಸಿಲ್ವಾ ಟೀಕಿಸಿದರು ನಂತರ ಹೋರಾಟ ಮಾಡಲು ತೀರ್ಮಾನಿಸಲಾಯಿತು. ವರದಿಗಳ ಪ್ರಕಾರ ಸೆಪ್ಟೆಂಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪೋಸ್ಟ್ ಮಾಡಿದ ಡಾ ಸಿಲ್ವಾ ವಾಸ್ತವವಾಗಿ ಈ ಹೋರಾಟವನ್ನು ಒತ್ತಾಯಿಸಿದರು.
ಸಿಲ್ವಾ ಅವರ ಸವಾಲಿಗೆ ಪೀಕ್ಸೊಟೊ ಹಿಂದೆ ಸರಿಯಲಿಲ್ಲ ಮತ್ತು ವೀಡಿಯೊಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಈ ಪಂದ್ಯಕ್ಕೆ ಸಿದ್ದ ಎಂದು ಉತ್ತರಿಸಿದರು. ಮಾತ್ರವಲ್ಲ ನಾನು ಬೀದಿಯಲ್ಲಿ ಜಗಳ ಮಾಡುವವನಲ್ಲ ನಾನು ಬೋರ್ಬಾ ಪುರಸಭೆಯ ಮೇಯರ್ ಆಗಿದ್ದೇನೆ. ಆದರೆ ಅವನು ನಿಜವಾಗಿಯೂ ಹೋರಾಡಲು ಬಯಸಿದರೆ ನಾನು ಕೂಡ ಹೋರಾಡಲು ಸಿದ್ಧ . ನಾನು ಯಾವಾಗಲೂ ವಿಜೇತನಾಗಿರುತ್ತೇನೆ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ನಂತರ ತಾನು ಪಂದ್ಯಕ್ಕೆ ತಯಾರಾಗುತ್ತಿರುವ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದರು.
