ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಖತ್ ಸ್ಟೆಪ್‌ ಮಣಿಪುರ ಕಲಾವಿದರೊಂದಿಗೆ ಕುಣಿದ ಸ್ಮೃತಿ ಮಣಿಪುರ ವಿಧಾನಸಭಾ ಚುನಾವಣೆ ಹಿನ್ನೆಲೆ ಇರಾನಿ ಪ್ರಚಾರ

ಇಂಫಾಲ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶುಕ್ರವಾರ (ಫೆ.18)ಮಣಿಪುರದಲ್ಲಿ (Manipur)ಸಾಂಪ್ರದಾಯಿಕ ಜಾನಪದ ನೃತ್ಯ ಪ್ರದರ್ಶಿಸುವ ಕಲಾವಿದರೊಂದಿಗೆ ಸಖತ್‌ ಆಗಿ ಡಾನ್ಸ್‌ ಮಾಡಿದರು.ಇಂಫಾಲ್‌ನ (Imphal)ಪೂರ್ವ ಭಾಗದಲ್ಲಿರುವ ವಾಂಗ್‌ಖೈ ( Wangkhei) ಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವೆ ಇರಾನಿ ಕಲಾವಿದರೊಂದಿಗೆ ಮಣಿಪುರದ ಸಾಂಪ್ರದಾಯಿಕ ನೃತ್ಯ ಮಾಡುವ ಎಲ್ಲರ ಗಮನ ಸೆಳೆದರು. ಸಚಿವೆ ಡಾನ್ಸ್ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಣಿಪುರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಸ್ಮೃತಿ ಇರಾನಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪರ ಮಣಿಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

ಮಣಿಪುರ ವಿಧಾನಸಭೆ ಚುನಾವಣೆಗೆ ಬಿಜೆಪಿ ಗುರುವಾರವಷ್ಟೇ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು, ಪ್ರಣಾಳಿಕೆಯಲ್ಲಿ ಪ್ರತಿಭಾವಂತ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನದ ಭರವಸೆಯನ್ನು ಬಿಜೆಪಿ ನೀಡಿದೆ. ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಯನ್ನು 1,000 ರೂ.ಗೆ ಹೆಚ್ಚಿಸುವುದು ಮತ್ತು ರೂ 100 ಕೋಟಿ ಆರಂಭಿಕ ನಿಧಿಯನ್ನು ಸ್ಥಾಪಿಸುವುದು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ರಾಣಿ ಗೈದಿಂಲಿಯು ನೂಪಿ ಮಹೈರೋಯ್ ಸಿಂಗಿ ಯೋಜನೆ' ಅಡಿಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳ ಹೆಣ್ಣುಮಕ್ಕಳಿಗೆ ರೂ 25,000 ನೀಡುವುದು ಸೇರಿದಂತೆ ಹಲವು ಯೋಜನೆಗಳ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

Scroll to load tweet…

ಹಾಗೆಯೇ ಕಾಂಗ್ರೆಸ್ ಕೂಡ ಇಲ್ಲಿ ಭಾರಿ ಭರವಸೆಗಳನ್ನು ನೀಡಿದೆ. ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುವುದಾಗಿ ಕಾಂಗ್ರೆಸ್ ಮಂಗಳವಾರ ಭರವಸೆ ನೀಡಿತ್ತು.ಇದು ಮಣಿಪುರದ ಹೆಮ್ಮೆ ಕಾಂಗ್ರೆಸ್ ಮಹಿಳೆಯರನ್ನು ಸಮಾನರು ಎಂದು ಪರಿಗಣಿಸುತ್ತದೆ. ಅವರನ್ನು ಮುಂದೆ ತರಲು ಅದು ನಿರಂತರವಾಗಿ ಶ್ರಮಿಸುತ್ತಿದೆ. ಮಣಿಪುರದ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಮತ್ತು ಉಚಿತ ಸಾರಿಗೆ ವ್ಯವಸ್ಥೆ ಒದಗಿಸಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವರ್ಚುವಲ್ ಸಮಾವೇಶದಲ್ಲಿ ಹೇಳಿದ್ದರು.

ಇನ್ಮುಂದೆ PMMVY ಯೋಜನೆಗೆ ಪತಿಯ ಆಧಾರ್ ಕಾರ್ಡ್ ಕಡ್ಡಾಯವಲ್ಲ!

60 ಶಾಸಕ ಬಲದ ಮಣಿಪುರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಫೆಬ್ರವರಿ 28 ರಂದು ಮತ್ತು ಎರಡನೇ ಹಂತದ ಮತದಾನ ಮಾರ್ಚ್ 5 ರಂದು ನಡೆಯಲಿದೆ. ಫಲಿತಾಂಶವು ಮಾರ್ಚ್ 10 ರಂದು ಪ್ರಕಟವಾಗಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಕೇವಲ 21 ಸ್ಥಾನಗಳನ್ನು ಗೆದ್ದಿತ್ತು. ಅದಾಗ್ಯೂ ಬಿಜೆಪಿಯು ಮೂರು ಪ್ರಾದೇಶಿಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಹಾಗೂ ಒಬ್ಬ ಸ್ವತಂತ್ರ ಶಾಸಕನ ಬೆಂಬಲದೊಂದಿಗೆ ರಾಜ್ಯದಲ್ಲಿ ಸರ್ಕಾರವನ್ನು ರಚಿಸಿತು. 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎನ್ ಬಿರೇನ್ ಸಿಂಗ್ (N Biren Singh) ಮಣಿಪುರದ 12ನೇ ಮುಖ್ಯಮಂತ್ರಿಯಾಗಿದ್ದರು.

Republic Day: ಮಣಿಪುರಿ ಶಾಲ್‌ ಉತ್ತರಾಖಂಡ್ ಟೋಪಿ... ಪ್ರಧಾನಿ ಧಿರಿಸಿನ ಬಗ್ಗೆ ಭಾರಿ ಚರ್ಚೆ