ಆಸ್ಪತ್ರೆಯಿಂದಲೇ Interview ಕೊಟ್ಟ ಕ್ಯಾನ್ಸರ್ ರೋಗಿ, ನೆಟ್ಟಿಗರಿಂದ ಹೀರೋ ಪಟ್ಟ
ಕ್ಯಾನ್ಸರ್ ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ನಡೆಯುತ್ತಿದ್ದ ಸಮಯದಲ್ಲೇ ಉದ್ಯೋಗ ಸಂದರ್ಶನವನ್ನು ನೀಡುತ್ತಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಆತನನ್ನು ವಾರಿಯರ್ ಎಂದು ಬಣ್ಣಿಸಿದ್ದಾರೆ.
ನವದೆಹಲಿ (ಎ.27): ಕ್ಯಾನ್ಸರ್ (Cancer) ರೋಗಿಯೊಬ್ಬರು ತಮ್ಮ ಕೀಮೋಥೆರಪಿ ಚಿಕಿತ್ಸೆ ನಡೆಯುತ್ತಿದ್ದ ಸಮಯದಲ್ಲೇ ಉದ್ಯೋಗ ಸಂದರ್ಶನವನ್ನು ನೀಡುತ್ತಿರುವುದು ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಪ್ರೇರೇಪಿಸಿಸುವಂತೆ ಮಾಡಿದೆ. ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ (Arsh Nandan Prasad) ಅವರು ತಮ್ಮ ಅನಾರೋಗ್ಯದ ಕಾರಣ ಉದ್ಯೋಗ ಪಡೆಯುವಲ್ಲಿ ತಾವು ನಡೆಸಿದ ಹೋರಾಟಗಳ ಬಗ್ಗೆ ಲಿಂಕ್‌ಡಿನ್ ( LinkedIn) ನಲ್ಲಿ ಹಂಚಿಕೊಂಡಿದ್ದಾರೆ. ತನಗೆ ಸಹಾನುಭೂತಿ ಅಗತ್ಯವಿಲ್ಲ ಆದರೆ ತನ್ನನ್ನು ತಾನು ಸಾಬೀತುಪಡಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಐಟಿ ವೃತ್ತಿಪರ ಅರ್ಶ್ ನಂದನ್ ಪ್ರಸಾದ್ ಇತ್ತೀಚೆಗೆ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಈ ನೇಮಕಾತಿಯ ಅತ್ಯಂತ ಅದ್ಭುತವಾದ ಅಂಶವೆಂದರೆ ಪ್ರಸಾದ್ ಕ್ಯಾನ್ಸರ್ ರೋಗಿಯಾಗಿದ್ದು, ಚಿಕಿತ್ಸೆಗಾಗಿ ಕೀಮೋಥೆರಪಿಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರಿಗೆ ಉದ್ಯೋಗದ ಆಫರ್ ಬಂದಿತ್ತು.
ಶ್ರೀ ಪ್ರಸಾದ್ ಸಂದರ್ಶಕರಿಂದ ತಿರಸ್ಕರಿಸಲ್ಪಟ್ಟ ಬಗ್ಗೆ ಆಸ್ಪತ್ರೆಯ ಬೆಡ್‌ನಲ್ಲಿ ಕುಳಿತಿರುವ, ವೈದ್ಯಕೀಯ ವಸ್ತ್ರ ಧರಿಸಿರುವ ಫೋಟೋವನ್ನು ಹಂಚಿಕೊಂಡು ಈ ಬಗ್ಗೆ ಬರೆದುಕೊಂಡಿದ್ದಾರೆ. ಕೀಮೋಥೆರಪಿಯ ಪರಿಣಾಮವಾಗಿ ತನ್ನ ಕೂದಲನ್ನು ಕಳೆದುಕೊಂಡಿರುವ ಅರ್ಶ್ ಅವರು ತಮ್ಮ ಜೀವನದ ಅತ್ಯಂತ ಕಷ್ಟಕರ ಸಮಯಗಳಲ್ಲಿ ಆನಾರೋಗ್ಯ ಎದುರಿಸುತ್ತಿರುವ ಕಾರಣದಿಂದ ಅವರು ಹೇಗೆ ಆಯ್ಕೆಯಾಗುತ್ತಿರಲಿಲ್ಲ ಎಂದು ವಿವರಿಸಿದ್ದಾರೆ.
Uttara Kannada ಒಂಟಿ ಮರ್ಕಟನ ಕಾಟ, ಜನರಿಗೆ ಪ್ರಾಣ ಸಂಕಟ!
ಪ್ರಸಾದ್ ಅವರು ಸಹಾನುಭೂತಿಗಾಗಿ ಇದನ್ನು ಹಾಕಿಕೊಂಡಿಲ್ಲ. ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಎಂದು ಹೇಳಿದ್ದಾರೆ. "ನೀವು ಸಂದರ್ಶನಗಳಲ್ಲಿ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಿದಾಗ ಆದರೆ ನೀವು ಜೀವನದಲ್ಲಿ ಸಂಕಷ್ಟದಲ್ಲಿದ್ದೀರಿ ಎಂಬ ಅಂಶಕ್ಕೆ ಆಯ್ಕೆಯಾಗದಿದ್ದರೆ, ಈ ಕಂಪನಿಗಳು ಎಷ್ಟು ಉದಾರವಾಗಿವೆ ಎಂಬುದನ್ನು ನಿಸ್ಸಂಶಯವಾಗಿ ತೋರಿಸುತ್ತದೆ. ನಾನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ ಎಂದು ಸಂದರ್ಶಕರಿಗೆ ತಿಳಿಯುತ್ತದೆ, ಅವರ ನಡವಳಿಕೆಯಲ್ಲಿ ಬದಲಾವಣೆಯನ್ನು ನೋಡುತ್ತೇವೆ.
ನನಗೆ ನಿಮ್ಮ ಸಹಾನುಭೂತಿ ಬೇಕಾಗಿಲ್ಲ!! ನನ್ನನ್ನು ಸಾಬೀತುಪಡಿಸಲು ನಾನು ಇಲ್ಲಿದ್ದೇನೆ. ನನ್ನ ಕೀಮೋಥೆರಪಿ ಅವಧಿಯ ಸಮಯದಲ್ಲಿ ನಾನು ಸಂದರ್ಶನವನ್ನು ನೀಡುತ್ತಿರುವ ಇತ್ತೀಚಿನ ಚಿತ್ರ ಎಂದು ಲಿಂಕ್ಡಿನ್ ಪ್ರೊಫೈಲ್ ನಲ್ಲಿ ಬರೆದಿದ್ದಾರೆ.
Belagavi Farmers ಆಕ್ರೋಶದ ನಡುವೆಯೇ ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ
ಪ್ರಸಾದ್ ತಮ್ಮ ಬಗ್ಗೆ ಬರೆದುಕೊಂಡ ಕೆಲವೇ ದಿನಗಳಲ್ಲಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದರು ಮತ್ತು ಇತರರು ಪ್ರೋತ್ಸಾಹ ಮತ್ತು ಬೆಂಬಲದ ಮಾತುಗಳನ್ನು ಆಡಿದರು. ಪ್ರಸಾದ್ ಅವರ ಉದ್ಯೋಗ ಹುಡುಕಾಟವು ಮಹಾರಾಷ್ಟ್ರ ಮೂಲದ ಟೆಕ್ ಕಂಪನಿ ಅಪ್ಲೈಡ್ ಕ್ಲೌಡ್ ಕಂಪ್ಯೂಟಿಂಗ್‌ನ ಸಿಇಒ ನೀಲೇಶ್ ಸತ್ಪುಟೆ (Nilesh Satpute) ಅವರ ಗಮನವನ್ನೂ ಸೆಳೆದಿದೆ. ಸತ್ಪುತೆ ಪ್ರಸಾದ್ ಅವರನ್ನು ಉದ್ಯೋಗಕ್ಕಾಗಿ ಹುಡುಕುವುದನ್ನು ನಿಲ್ಲಿಸಲು ಮತ್ತು ಅವರ ಚಿಕಿತ್ಸೆಯನ್ನು ಮುಂದುವರಿಸಲು ಕೇಳಿಕೊಂಡರು. ಮತ್ತು ಗುಣಮುಖರಾದ ಬಳಿಕ ತಮ್ಮ ಕಂಪನಿಯಲ್ಲಿ ಉದ್ಯೋಗವನ್ನು ಮುಂದುವರೆಸಿ ಎಂದು ಹೇಳಿದ್ದಾರೆ. ಜೊತೆಗೆ ಯಾವುದೇ ಸಂದರ್ಶನ ಇರುವುದಿಲ್ಲ ಎಂದೂ ಹೇಳಿದ್ದಾರೆ.
ಶ್ರೀ ಪ್ರಸಾದ್ ಅವರನ್ನು ಹುರಿದುಂಬಿಸಲು ಹಲವಾರು ಮಂದಿ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ “ಇದು ಹೋರಾಟದ ಮನೋಭಾವ. ನಿನಗೆ ನಮಸ್ಕಾರ" ಎಂದರೆ ಮತ್ತೊಬ್ಬರು "ನಿಮಗಾಗಿ ಗುಣಪಡಿಸುವ ಪ್ರಾರ್ಥನೆಗಳನ್ನು ಕಳುಹಿಸುತ್ತಿದ್ದೇನೆ. ನಿಮ್ಮ ದೃಢತೆಯನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ" ಎಂದು ಬರೆದಿದ್ದಾರೆ.
ಶ್ರೀ ಪ್ರಸಾದ್ ಅವರು ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ ಸುಮಾರು 700 ಮಂದಿ ಹಂಚಿಕೊಂಡಿದ್ದಾರೆ. ಇದು 1ಲಕ್ಷಕ್ಕೂ ಹೆಚ್ಚು ಮಂದಿ ಲೈಕ್‌ಗಳನ್ನು ಮತ್ತು 3,700 ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.