ಲಂಡನ್(ನ.16) ಬ್ರಿಟನ್‌ನಲ್ಲಿ ಕೊರೋನಾವೈರಸ್  ಕಥೆ 'ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಯೊಳಗೆ' ಎಂಬಂತಾಗಿದೆ. ಕೊರೋನಾ ಪ್ರಕರಣಗಳು ಕಡಿಮೆಯಾಗ್ತಿವೆ ಎಂದು ಕೊಂಚ ನಿರಾಳರಾದ ಬೆನ್ನಲ್ಲೇ ಮತ್ತೊಂದು ಅಲೆ ಶುರುವಾಗಿದೆ. 

ಕೊರೋನಾ ನಿಯಂತ್ರಣಕ್ಕೆ ಬ್ರಿಟನ್ ಸರ್ಕಾರ ಹರಸಾಹಸ ಪಡುತ್ತಿದೆ. ಪಿಡುಗು ನಿಯಂತ್ರಿಸಲು ಬೋರಿಸ್ ಜಾನ್ಸನ್ ಸರ್ಕಾರ ಮತ್ತೆ ಕಠಿಣ ನಿಯಮಗಳ ಮೊರೆ ಹೋಗಿದೆ.  ಆದರೆ, ಇನ್ನೊಂದು ಕಡೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಖುದ್ದು ಸೆಲ್ಫ್ ಐಸೋಲೇಶನ್‌ಗೆ ಒಳಪಟ್ಟಿದ್ದಾರೆ. 

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಬ್ರಿಟನ್‌ ಮುಂದಿನ ಪ್ರಧಾನಿ?

ಬೋರಿಸ್ ಜಾನ್ಸನ್ ಸಂಪರ್ಕದಲ್ಲಿದ್ದ ಸಂಸದರೊಬ್ಬರಿಗೆ ಕೊರೋನಾ ದೃಢಪಟ್ಟಿದೆ. ಕೊರೋನಾದ ಯಾವುದೇ ಲಕ್ಷಣಗಳು ಇಲ್ಲ; ಅದಾಗ್ಯೂ, ನಿಯಮಗಳ ಪ್ರಕಾರ ಮತ್ತು ಮುಂಜಾಗೃತ ದೃಷ್ಟಿಯಿಂದ ಸೆಲ್ಫ್‌  ಐಸೋಲೇಶನ್‌ನಲ್ಲಿರುವೆ ಎಂದು ಬೋರಿಸ್ ಜಾನ್ಸನ್ ಟ್ವೀಟ್‌ ಮಾಡಿದ್ದಾರೆ. 

ಬೋರಿಸ್ ಜಾನ್ಸನ್ ಕಳೆದ ಏಪ್ರಿಲ್‌ನಲ್ಲಿ ಕೊರೋನಾಗೆ ತುತ್ತಾಗಿದ್ದಾರು. ಆಸ್ಪತ್ರೆಗೆ ದಾಖಲಾಗಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು.