ನವದೆಹಲಿ [ಜ.22]: ಪಾಕಿಸ್ತಾನದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಬಾಲಿವುಡ್‌ ಸಿನಿಮಾಗಳು ಕೂಡ ಕಾರಣ ಎಂದು ಹೇಳಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನಗೆಪಾಟಲಿಗೀಡಾಗಿದ್ದಾರೆ. 

ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ನೀಡಿರುವ ಸಂದರ್ಶನಲ್ಲಿ ಮಾತನಾಡಿರುವ ಅವರು, ಬಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾಗಳು ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುತ್ತಿದೆ. 

ಇಮ್ರಾನ್ ಖಾನ್ ಅವರನ್ನು ಭಾರತಕ್ಕೆ ಆಹ್ವಾನಿಸಲಿರುವ ಮೋದಿ ಸರ್ಕಾರ!...

ನಾವು ಕೆಲವೊಂದು ವಿಚಾರಗಳನ್ನು ಹೊರಗಿನಿಂದ ತೆಗೆದುಕೊಳ್ಳುತ್ತಿದ್ದೇವೆ. ಮೊದಲು ಹಾಲಿವುಡ್‌ ಬಳಿಕ ಬಾಲಿವುಡ್‌ನಿಂದ ವಿಚಾರಗಳನ್ನು ಪಡೆಯುತ್ತಿದ್ದೇವೆ. ನಮ್ಮ ಜನರಿಗೆ ಪಾಶ್ಚಿಮಾತ್ಯ ನಾಗರಿಕತೆ ಗೊತ್ತಿಲ್ಲದಿರುವುದರಿಂದ ಅವರಿಗೆ ಅದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಪಿಒಕೆಯಲ್ಲಿ ಜನಮತ ಗಣನೆಗೆ ಇಮ್ರಾನ್ ಸಿದ್ಧ...

ಅಪಾಯಕಾರಿ ಪಾಶ್ಚಾತ್ಯ ಸಂಸ್ಕೃತಿ ನಮ್ಮನ್ನು ಹಾಳು ಮಾಡುತ್ತಿದೆ ಎಂದು ಅವರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮಾದಕ ಜಾಲ ಹೆಚ್ಚಳಕ್ಕೆ ಮೊಬೈಲ್‌ ಕಾರಣ ಎಂದಿರುವ ಇಮ್ರಾನ್‌, ಮೊಬೈಲ್‌ನಿಂದಾಗಿ ಸುಲಭವಾಗಿ ಡ್ರಗ್ಸ್‌ ಕೈ ಸೇರುತ್ತಿದೆ ಎಂದು ಹೇಳಿದ್ದಾರೆ.